ಗಳೂರು: ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿಯೂ ಚುನಾವಣ ಅಕ್ರಮ ನಡೆ ದಿದ್ದು, ಒಂದೇ ವಾರ್ಡ್‌ನಲ್ಲಿ ಏಳು ಸಾವಿರ ಮತ ದಾರರು ಸೇರ್ಪಡೆಯಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಆರೋಪಿಸಿದರು.
ಮತ ಕಳವು ಹೋರಾಟದ ವಿರುದ್ಧ ಪ್ರತಿಭಟನೆ ನಡೆಯ ಲಿರುವ ಸ್ವಾತಂತ್ರ್ಯ ಉದ್ಯಾನಕ್ಕೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯ ಬಗ್ಗೆ ಮೊದಲೇ ನಾವು ಆಕ್ಷೇಪಣೆ ಸಲ್ಲಿಸಿದ್ದೆವು.
ಆದರೆ ಚುನಾವಣ ಆಯೋಗವು ಅದನ್ನು ಸ್ವೀಕರಿಸಲಿಲ್ಲ. ಸಚಿವ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಒಂದೇ ವಾರ್ಡ್‌ನಲ್ಲಿ 7 ಸಾವಿರದಷ್ಟು ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಗಮನ ಸೆಳೆದರು.
ಅಷ್ಟೇ ಅಲ್ಲ, ಮಹದೇವಪುರ ಕ್ಷೇತ್ರದಲ್ಲಿ ಅಭ್ಯರ್ಥಿ ನಾಗೇಶ್ ಹಾಗೂ ಅವರ ಪುತ್ರ ದಾಖಲೆಗಳನ್ನು ತೋರಿಸಿದರು. ಆದರೂ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆಯಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಚಿಲುಮೆ ಸಂಸ್ಥೆ ಅಕ್ರಮದ ತನಿಖೆ
ನಾವು ಕರ್ನಾಟಕದ ಜನರಿಗೆ ಉತ್ತರದಾಯಿಗಳು. ನಮ್ಮ ನಾಯಕರು ಇದರ ಬಗ್ಗೆ ಮಾತನಾಡುತ್ತಾರೆ. ಈ ವಿಷಯದಲ್ಲಿ ತನಿಖೆ ನಡೆಸಿಯೇ ನಮ್ಮ ನಾಯಕರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಮಹದೇವಪುರ ಮತ್ತು ರಾಜಾಜಿ ನಗರದಲ್ಲಿ ಮತ ಕಳವು ಆಗಿರುವ ಬಗ್ಗೆ ಲೋಕಸಭೆಯ ರಾಹುಲ್ ಗಾಂಧಿ ಬಳಿ ಸಾಕ್ಷಿ ಇದೆ. ಹಾಗಾಗಿ ಅವರು ಆ. 5ರಂದು ಪ್ರತಿ ಭಟನೆ ಹಮ್ಮಿಕೊಂಡು ರಾಜ್ಯ ಮುಖ್ಯ ಚುನಾ ವಣಾಧಿ ಕಾರಿಗಳನ್ನು ಭೇಟಿ ಆಗಲಿದ್ದಾರೆ.
-ಸಿದ್ದರಾಮಯ್ಯ, ಸಿಎಂ
ಕಾಂಗ್ರೆಸ್ ಚುನಾವಣ ಅಕ್ರಮ ಮಾಡಿದ್ದಕ್ಕೆ ಇಂದಿರಾ ಗಾಂಧಿಯ ಸದಸ್ಯತ್ವವನ್ನೇ ನ್ಯಾಯಾಲಯ ರದ್ದು ಮಾಡಿತ್ತು. ಈಗ ಇವರು ಚುನಾವಣ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೋರ್ಟ್‌ಗೆ ಸಾಕ್ಷಿ ಕೊಡಲಾಗದೆ ಬೀದಿರಂಪ ಮಾಡುತ್ತಿದ್ದಾರೆ.
- ಆರ್. ಅಶೋಕ್, ವಿಪಕ್ಷ ನಾಯಕ
Post a Comment