ಗಳೂರು: ಭಯೋತ್ಪಾದನಾ ಚಟುವಟಿಕೆ ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡಿದ ಆರೋಪದಡಿ ನಗರದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಮಹಿಳೆಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದಾರೆ
ಮೊಹಮ್ಮದ್ ಫೈಕ್, ಎಂಡಿ ಫರ್ದೀನ್, ಸೈಫುಲ್ಲಾ ಖುರೇಷಿ, ಜೀಶನ್ ಅಲಿ, ಶಮಾ ಪರ್ವೀನ್
ಗುಜರಾತ್ ಎಟಿಎಸ್ ಈ ಹಿಂದೆ ನಾಲ್ವರು ಅಲ್ ಖೈದಾ ಕಾರ್ಯಕರ್ತರಾದ ಮೊಹಮ್ಮದ್ ಫೈಕ್, ಎಂಡಿ ಫರ್ದೀನ್, ಸೈಫುಲ್ಲಾ ಖುರೇಷಿ ಮತ್ತು ಜೀಶನ್ ಅಲಿ ಎಂಬುರವನ್ನು ಬಂಧಿಸಿತ್ತು. ಆರೋಪಿಗಳ ತನಿಖೆಯ ಸಮಯದಲ್ಲಿ ಬಂಧಿತರು ಮತ್ತು ಶಮಾ ಪರ್ವೀನ್ ನಡುವಿನ ಸಂಪರ್ಕದ ಬಗ್ಗೆ ಪೊಲೀಸರು ತಿಳಿದುಕೊಂಡರು. ನಂತರ ಸಾಕ್ಷ್ಯಗಳ ಆಧಾರದ ಮೇಲೆ, ಎಟಿಎಸ್ ತಂಡವು ಕರ್ನಾಟಕ್ಕೆ ಬಂದು ಆಕೆಯನ್ನು ಬಂಧಿಸಿತು.
ಬೆಂಗಳೂರಿನ ನ್ಯಾಯಾಲಯದ ನ್ಯಾಯಾಧೀಶರ ಎದುರು ಶಂಕಿತ ಮಹಿಳೆಯನ್ನು ಅಧಿಕಾರಿಗಳು ಹಾಜರುಪಡಿಸಿದ್ದರು. ಬಳಿಕ ಪ್ರಕರಣ ವರ್ಗಾವಣೆ ಆದೇಶ ಪಡೆದುಕೊಂಡು ಶಂಕಿತೆಯನ್ನು ಗುಜರಾತ್‌ಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಹಾಗೂ ಉಗ್ರ ಚಟುವಟಿಕೆಗೆ ಪ್ರೇರೇಪಣೆ ನೀಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ. ಸ್ಥಳೀಯವಾಗಿ ಯಾರಾದರೂ ಶಂಕಿತ ಮಹಿಳೆಯ ಜತೆಗೆ ಗುರುತಿಸಿಕೊಂಡಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
Post a Comment