ಮಗೆ ಅರಿವಿಲ್ಲದೇ ನಿಮ್ಮ ಸಾವು ಬಾತ್‌ರೂಮ್‌ನಲ್ಲಿ ಅಡಗಿರಬಹುದು! ಇದು ಭಯಪಡಿಸಲು ಹೇಳುತ್ತಿರುವುದಲ್ಲ, ಆದರೆ ಗ್ಯಾಸ್ ಗೀಜರ್ ರೂಪದಲ್ಲಿ ಇದಾಗಲೇ ಹಲವರು ಪ್ರಾಣ ಕಸಿದಿದೆ ಗ್ಯಾಸ್ ಗೀಜರ್. ನಿಮ್ಮ ಮನೆಯಲ್ಲಿಯೂ ಇದ್ದರೆ ಕೂಡಲೇ ಈ ಕ್ರಮ ತೆಗೆದುಕೊಳ್ಳಿ...
ಸ್ನಾನದ ಉದ್ದೇಶಕ್ಕೆ ಗ್ಯಾಸ್ ಗೀಜರ್ ಬಳಸುವುದು ಸರ್ವೇ ಸಾಮಾನ್ಯ.
ಹಲವರ ಮನೆಯಲ್ಲಿ ಇದು ಇದ್ದೇ ಇರುತ್ತದೆ. ಕಡಿಮೆ ಗ್ಯಾಸ್ ಇದ್ದರೆ ಸಾಕು, ಬಿಸಿಬಿಸಿ ಸ್ನಾನ ಮಾಡಬಹುದಾಗಿರುವ ಕಾರಣ, ಹಲವು ಮನೆಗಳಲ್ಲಿ ಗ್ಯಾಸ್ ಗೀಜರ್ ಇಟ್ಟುಕೊಳ್ಳಲಾಗುತ್ತಿದೆ. ಆದರೆ ನಿಮಗೆ ಗೊತ್ತೆ? ಗ್ಯಾಸ್ ಗೀಜರ್‌ನಿಂದ ಇದಾಗಲೇ ಹಲವರ ಪ್ರಾಣ ಹೋಗಿದೆ. ಇದಕ್ಕೆ ಕಾರಣ, ಕಾರ್ಬನ್ ಮಾನಾಕ್ಸೈಡ್ ಅನಿಲ. ಇದು ಅತ್ಯಂತ ವಿಷಕಾರಿಯಾಗಿದ್ದು, ಉಸಿರಾಟದ ಸಮಸ್ಯೆ ತಂದೊಡ್ಡು ಪ್ರಾಣವನ್ನೇ ತೆಗೆಯಬಲ್ಲದು.
ಹಾಗೆಂದು ಹೆದರುವ ಅಗತ್ಯವಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಗ್ಯಾಸ್ ಗೀಜರ್ ಇದ್ದರೆ, ಕೆಲವೊಂದು ಟಿಪ್ಸ್ ಫಾಲೋ ಮಾಡಿದರೆ ಸಾಕು. ಆ ಬಗ್ಗೆ ವೈದ್ಯೆ ಡಾ.ರಿಚಾ ತಿವಾರಿ ಮಾಹಿತಿ ನೀಡಿದ್ದಾರೆ. ನೀವೇನು ಮಾಡಬಹುದು ಎನ್ನುವ ಮೊದಲು ಇದು ಏಕೆ ಅಪಾಯಕಾರಿ, ಪ್ರಾಣಕ್ಕೆ ಏಕೆ ಕುತ್ತು ಬರುತ್ತದೆ ಎನ್ನುವುದನ್ನು ಒಮ್ಮೆ ತಿಳಿದುಕೊಳ್ಳಬೇಕು. ಏಕೆಂದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿಬಿಸಿ ನೀರಿಗಾಗಿ ಇದರ ಅಗತ್ಯ ಹೆಚ್ಚು ಕಂಡುಬರುತ್ತದೆ. ಮನೆಗಳಲ್ಲಿ ಮಾತ್ರವಲ್ಲದೇ ಹೋಟೆಲ್‌ಗಳ ಬಾತ್‌ರೂಮ್‌ನಲ್ಲಿಯೂ ಇದನ್ನು ಇಡಲಾಗುತ್ತದೆ. ಆದರೆ ಸ್ವಲ್ಪವೇ ಎಡವಟ್ಟಾದರೂ, ಜೀವಕ್ಕೇ ಅಪಾಯ ಆಗಬಹುದು. ಉಸಿರು ಕಟ್ಟುತ್ತಿರುವುದು ತಿಳಿದರೂ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಹೊರಗಡೆ ಬರಲು ಅಂಜಿ (ಅದರಲ್ಲಿಯೂ ಹೆಚ್ಚಾಗಿ ಸ್ತ್ರೀಯರು) ಸ್ನಾನದ ಮನೆಯಲ್ಲಿಯೇ ಉಸಿರುಚೆಲ್ಲುತ್ತಿದ್ದಾರೆ.
ಮೊದಲೇ ಹೇಳಿದಂತೆ ಇದಕ್ಕೆ ಗ್ಯಾಸ್‌ನಿಂದ ಹೊರ ಸೂಸುವ ವಿಷಕಾರಿ ಅನಿಲ ಕಾರಣ. ಆದ್ದರಿಂದ ನೀವು ಮಾಡಬೇಕಾದದ್ದು ಇಷ್ಟೇ. ಗ್ಯಾಸ್ ಇದ್ದರೆ ಅದಕ್ಕೆ ಸಾಕಷ್ಟು ಸ್ಥಳಾವಕಾಶ ಇರಬೇಕು. ಗ್ಯಾಸ್ ಇಡುವ ಕೋಣೆಯಲ್ಲಿ ಗ್ಯಾಸ್ ಹೊರಗೆ ಹೋಗಲು ಕಿಟಕಿ ಅಥವಾ ವೆಂಟಿಲೇಟರ್ ಇರಲೇಬೇಕು. ಅದ್ಯಾವುದೂ ಇಲ್ಲದಿದ್ದರೆ ವಿಷಕಾರಿ ಅಂಶವು ಬಾತ್‌ರೂಮ್‌ನಲ್ಲಿಯೇ ಸುತ್ತಾಡಿ ಉಸಿರುಕಟ್ಟಿಸುತ್ತದೆ. ಇನ್ನೊಂದು ಮುಖ್ಯ ಆಗಿರುವ ವಿಷಯ ಏನೆಂದರೆ, ಸ್ನಾನ ಮಾಡುವ ಸಮಯದಲ್ಲಿ ಗೀಸರ್ ಆಫ್ ಮಾಡಿಕೊಂಡು ಬಿಡಿ. ಎಷ್ಟು ಬೇಕೋ ಅಷ್ಟು ನೀರನ್ನು ಮೊದಲೇ ಬಿಸಿ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ ನಂತರ ಸ್ನಾನ ಮಾಡಿ. ತಲೆ ಸ್ನಾನ ಮಾಡಲು ಹೆಚ್ಚು ಹೊತ್ತು ಬಿಸಿ ನೀರು ಬೇಕು ಎನ್ನುವ ಕಾರಣಕ್ಕೆ ಆನ್ ಮಾಡಿಟ್ಟುಕೊಳ್ಳಲೇಬೇಡಿ ಎಂದು ವೈದ್ಯೆ ಎಚ್ಚರ ನೀಡಿದ್ದಾರೆ.
ಗ್ಯಾಸ್ ಗೀಸರ್ ಬಳಸುವಾಗ ಎಕ್ಸಾಸ್ಟ್ ಫ್ಯಾನ್ ಇದ್ದರೆ ಅದನ್ನು ಆನ್ ಮಾಡಿಟ್ಟುಕೊಳ್ಳಿ. ಒಂದು ವೇಳೆ ಗ್ಯಾಸ್ ಗೀಸರ್‌ನಿಂದ ಮೊದಲೇ ವಾಸನೆ ಬರುತ್ತಿದ್ದರೆ ಅದನ್ನು ಬಳಸೇಬೇಡಿ. ಹೆಚ್ಚು ಮಂದಿ ಮನೆಯಲ್ಲಿ ಇದನ್ನು ಬಳಸುತ್ತಿದ್ದರೆ, ಒಬ್ಬರಾದ ಮೇಲೆ ಇನ್ನೊಬ್ಬರು ಸ್ವಿಚ್ ಆನ್ ಮಾಡುವ ಬದಲು ಸ್ವಲ್ಪ ಟೈಮ್ ಗ್ಯಾಪ್ ಕೊಡಿ. ಒಂದು ವೇಳೆ ಸ್ನಾನ ಮಾಡುವ ಸಮಯದಲ್ಲಿ ಕೆಮ್ಮು ಬಂದರೆ ಇಲ್ಲವೇ ಉಸಿರುಗಟ್ಟಿದಂತ ಕಂಡರೆ, ನೀವು ಯಾವ ಸ್ಥಿತಿಯಲ್ಲಿ ಇದ್ದರೂ ಪರವಾಗಿಲ್ಲ, ಇದು ಹೆಣ್ಣುಮಕ್ಕಳಿಗೆ ಕಷ್ಟವಾದರೂ ಸರಿ. ಕೂಡಲೇ ಬಾಗಿಲು ತೆರೆದು ಹೊರಗಡೆ ಬನ್ನಿ. ಅಲ್ಲಿಯೇ ಟವಲ್ ಇರುತ್ತದಲ್ಲ, ಅದನ್ನಾದರೂ ಮುಚ್ಚಿಕೊಂಡು ಬನ್ನಿ. ಆದರೆ, ಮರ್ಯಾದೆಗೆ ಅಂಜಿ ಹೊರಕ್ಕೆ ಬರದೇ ಇದ್ದರೆ ಸಾವು ಬರುವುದು ಖಂಡಿತ.
Post a Comment