ಪುನೀತ್ ಬಿಟ್ಟ ಆ ಚಿತ್ರ ಗಣೇಶ್​ಗೆ ಸಿಕ್ತು ಮತ್ತು ರಾತ್ರೋ ರಾತ್ರಿ ಸೂಪರ್​ಸ್ಟಾರ್ ಆದರು..


  ಲ್ಡನ್ ಸ್ಟಾರ್ ಗಣೇಶ್ (Ganesh) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಅವರು ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಗಣೇಶ್ ಅವರ ಬದುಕು ಬದಲಿಸಿದ್ದು 'ಮುಂಗಾರು ಮಳೆ' ಚಿತ್ರ. ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರು ನಟಿಸಬೇಕಿತ್ತು

ಆದರೆ, ಈ ಚಿತ್ರವು ಗಣೇಶ್ ಅವರ ಕೈ ಸೇರಿತು ಮತ್ತು ಸೂಪರ್ ಹಿಟ್ ಆಯಿತು. ಆ ಬಗ್ಗೆ ಇಲ್ಲಿದೆ ವಿವರ.


ಯೋಗರಾಜ್ ಭಟ್ ಅವರು 'ಮುಂಗಾರು ಮಳೆ' ಚಿತ್ರವನ್ನು ಮಾಡಲು ನಿರ್ಧರಿಸಿದ್ದರು. ಈ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಅವರು ಕೂಡ ಅಂದುಕೊಂಡು ಇರಲಿಲ್ಲ. ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರು ನಟಿಸಬೇಕಿತ್ತು. ಈ ಸಿನಿಮಾದ ಕಥೆಯನ್ನು ರಾಘಣ್ಣ ಮತ್ತು ಪುನೀತ್​ ಕಥೆ ಕೂಡ ಕೇಳಿದ್ದರು. ಆದರೆ, ಪುನೀತ್ ಈ ಚಿತ್ರವನ್ನು ಮಾಡದಿರಲು ನಿರ್ಧರಿಸಿದರು.


'ನಾವು ಆರೆಂಟು ನಿರ್ಮಾಪಕರಿಗೆ ಹೇಳಿದ್ದೆವು. ಸಿನಿಮಾಗೆ ಏನು ಬೇಕೋ ಅದು ಇದೆ ಎಂದು ಅಪ್ಪು ಹಾಗೂ ರಾಘಣ್ಣ ಹೇಳಿದರು. ಈಗ ಪುನೀತ್ ಅವರ ಇಮೇಜ್​ಗೆ ತಕ್ಕಂತೆ ಸಿನಿಮಾ ಮಾಡಲು ಹೋಗಿ ಕಥೆಯನ್ನು ಗಬ್ಬೆಬಿಸಬೇಡಿ ಎಂದು ಅಪ್ಪು ಕೋರಿಕೊಂಡರು. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಸಜೇಶನ್ ಕೊಟ್ಟರು. ಅವರು ಕೊಟ್ಟಿದ್ದು ಅರ್ಥಪೂರ್ಣ ನಿರ್ದೇಶನ ಆಗಿತ್ತು' ಎಂದಿದ್ದಾರೆ ಅವರು.


ಪುನೀತ್ ರಾಜ್​ಕುಮಾರ್ ಅವರೇ ಮುಂಗಾರು ಮಳೆಯನ್ನು ಮಾಡಿದ್ದರೆ ಅವರ ಹೆಸರಿಗೆ ಮತ್ತೊಂದು ಯಶಸ್ಸು ಸೇರ್ಪಡೆ ಆಗಿರುತ್ತಿತ್ತು. ಆದರೆ, ಅವರು ಅದನ್ನು ಮಾಡಲಿಲ್ಲ. ಹೊಸಬರಿಗೆ ಬರಲು ಅವಕಾಶ ಮಾಡಿಕೊಟ್ಟರು. ಪುನೀತ್ ರಾಜ್​ಕುಮಾರ್ ಅವರು ಈ ಸಿನಿಮಾವನ್ನು ಬಿಡದೆ ಇದ್ದಿದ್ದರೆ ಅದು ಗಣೇಶ್​ಗೆ ಸಿಗುತ್ತಿರಲಿಲ್ಲವೇನೋ. ಇಂದು ಗಣೇಶ್ ಸೂಪರ್ ಹಿಟ್ ಆಗಲು ಅವರು ಕೂಡ ಒಂದು ಕಾರಣ ಆದರು.


ಗಣೇಶ್ ಅವರು ಸದ್ಯ ಹಲವು ಹಿಟ್ ಚಿತ್ರಗಳನ್ನು ನಡೆದಿದ್ದಾರೆ. ಕಳೆದ ವರ್ಷ ಬಂದ 'ಕೃಷ್ಣಂ ಪ್ರಣಯ ಸಖಿ' ಚಿತ್ರವು ಸೂಪರ್ ಹಿಟ್ ಆಯಿತು. ಈ ಚಿತ್ರ ಗಮನ ಸೆಳೆದಿತ್ತು. ಸಿನಿಮಾದ ಹಾಡುಗಳು ಹಿಟ್ ಆಯಿತು. ಈಗ 'ಪಿನಾಕ' ಹಾಗೂ 'ಯುವರ್ ಸಿನ್ಸಿಯರ್ಲಿ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ.

Post a Comment

Previous Post Next Post