MYSURU: ಮಗಳಷ್ಟೇ ಅಲ್ಲ..ತಮ್ಮನ ಹೆಂಡತಿಯೂ ಮರ್ಯಾದೆ ತೆಗೆದಳು: ಬೂದನೂರು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌


 ಸೂರು: ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾಗಲು ಮನೆ ಬಿಟ್ಟು ಹೋಗಿದಕ್ಕೆ ಮನನೊಂದ ತಂದೆ-ತಾಯಿ ತಮ್ಮ ಕಿರಿಯ ಮಗಳ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.

 ಬೂದನೂರು ಗ್ರಾಮದ ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಪುತ್ರಿ ಹರ್ಷಿತಾ ಮೃತ ದುರ್ದೈವಿಗಳು.

ಮರ್ಯಾದೆಗೆ ಹೆದರಿ ಸಂಪೂರ್ಣ ಕುಟುಂಬವೇ ಕೊನೆಯಾದ ಘಟನೆ ಸಂಚಲನ ಮೂಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಡೆತ್‌ ನೋಟ್‌ ಪತ್ತೆಯಾಗಿದೆ.


ಡೆತ್‌ ನೋಟ್‌ನಲ್ಲಿ ಮೃತ ಮಹದೇವಸ್ವಾಮಿ, ಎರಡು ವರ್ಷಗಳ ಹಿಂದೆ ತಮ್ಮನ ಹೆಂಡತಿ ಕೇರಳದ ಕೂಲಿ ಕೆಲಸಗಾರನೊಂದಿಗೆ ಓಡಿ ಹೋಗಿದ್ದಳು. ಇದರಿಂದ ಕುಟುಂಬಕ್ಕೆ ಭಾರೀ ಅವಮಾನವಾಯಿತು. ಅಂದೇ ನಾವು ಸಾಮೂಹಿಕವಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದೆವು. ಆದರೆ ಸಂಬಂಧಿಕರ ಬುದ್ಧಿವಾದಿಂದ ಆ ನಿರ್ಧಾರದಿಂದ ಹಿಂದೆ ಸರಿದೆವು ಎಂದು ಬರೆದಿದ್ದಾರೆ.


ಇನ್ನು ತಮ್ಮ ಮಗಳ ಬಗ್ಗೆ ಕೂಡ ಬರೆದಿರುವ ಮಹದೇವಸ್ವಾಮಿ, ಹಿರಿಯ ಮಗಳು ಭರತ್ ಎಂಬ ಹುಡುಗನೊಂದಿಗೆ ಪ್ರೀತಿಯಲ್ಲಿದ್ದಳು. ಆತನಿಗೆ ಈ ಹಿಂದೆ ಲವ್ ಬ್ರೇಕ್‌ಅಪ್ ಆಗಿತ್ತು. ಆತನ ಹಿನ್ನಲೆ ಸರಿ ಇರಲಿಲ್ಲ. ಮುಗ್ಧ ಹುಡುಗಿಯರ ಜೀವನದ ಜೊತೆ ಆಟವಾಡುವುದೇ ಆತನ ಕೆಲಸ. ಈ ಬಗ್ಗೆ ಮಗಳಿಗೆ ಎಷ್ಟೇ ಸಲಹೆ ನೀಡಿದರೂ, ಆಕೆ ತನ್ನ ನಿರ್ಧಾರ ಬದಲಿಸಿದೇ ರಿಜಿಸ್ಟರ್ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಮಗಳ ಜೀವನ ಕಣ್ಣೇದುರೆ ಹಾಳಾಗುವುದನ್ನು ನಮಗೆ ನೋಡಲು ಆಗುವುದಿಲ್ಲ ಎಂದು ಬರೆದಿದ್ದಾರೆ.


ಇನ್ನು ತಮ್ಮ ಆಸ್ಥಿ ಬಗ್ಗೆ ಕೂಡ ಬರೆದಿರುವ ಅವರು, ಬೂದನೂರು ಗ್ರಾಮದ ಮನೆ, ಎಚ್.ಡಿ.ಕೋಟೆಯ ಮನೆ ಮತ್ತು ಜಮೀನನ್ನು ತಮ್ಮ ತಮ್ಮನಿಗೆ ನೀಡಬೇಕು ಎಂದು ಬರೆದಿದ್ದಾರೆ. ಮನೆಯಲ್ಲಿದ್ದ 2.5 ಲಕ್ಷ ರೂಪಾಯಿಗಳನ್ನು ಸಹೋದರನಿಗೆ ಹಸ್ತಾಂತರಿಸಲು ಕೂಡ ಸೂಚಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ತಮ್ಮ ಆಸ್ತಿಯನ್ನು ಮಗಳಿಗೆ ನೀಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

Post a Comment

Previous Post Next Post