ವ್ಲಾಡಿಮಿರ್ ಪುಟಿನ್ ನಿಜವಾಗಿಯೂ ಹುಚ್ಚನಾಗಿದ್ದಾನೆ: ರಷ್ಯಾಗೆ ಖಡಕ್​ ಎಚ್ಚರಿಕೆ ಕೊಟ್ಟ ಡೊನಾಲ್ಡ್​ ಟ್ರಂಪ್! Donald Trump


 onald Trump : ಯೂಕ್ರೇನ್ ಮತ್ತು ರಷ್ಯಾ ನಡುವಿನ ಕದನ ವಿರಾಮ ಮಾತುಕತೆಯ ಸಂದರ್ಭದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ನಡೆಸಿದ ಮಿಲಿಟರಿ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶಗೊಂಡಿದ್ದಾರೆ. ಪುಟಿನ್ ಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಅಸಹನೆಯನ್ನು ಟ್ರಂಪ್​ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಇತ್ತೀಚೆಗೆ ಟ್ರೂತ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ನನಗೆ ರಷ್ಯಾದ ಅಧ್ಯಕ್ಷ ಪುಟಿನ್ ಬಹಳ ದಿನಗಳಿಂದಲೂ ತಿಳಿದಿದೆ ಮತ್ತು ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ. ಆದರೆ, ಈಗಿರುವ ಪುಟಿನ್ ಸರಿಯಿಲ್ಲ. ಅವರು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ. ಈ ವ್ಯಕ್ತಿಗೆ ಏನಾಗಿದೆ ಎಂದು ನನಗೆ ತಿಳಿದಿಲ್ಲ. ಅವರು ಯೂಕ್ರೇನ್ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಿದ್ದಾರೆ. ಅವರು ಯಾವುದೇ ಕಾರಣವಿಲ್ಲದೆ ಯೂಕ್ರೇನಿಯನ್ ನಗರಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ. ನಗರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಜನರನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದಾರೆ. ನನಗೆ ಅದು ಸ್ವಲ್ಪವೂ ಇಷ್ಟವಿಲ್ಲ ಎಂದು ಟ್ರಂಪ್​ ಹೇಳಿದ್ದಾರೆ.


ಪುಟಿನ್ ಅವರು ಯೂಕ್ರೇನ್​ನ ಒಂದು ಭಾಗವನ್ನಷ್ಟೇ ಬಯಸದೆ, ಇಡೀ ಯೂಕ್ರೇನ್ ಅನ್ನು ಬಯಸುತ್ತಾರೆ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಬಹುಶಃ ಅದು ನಿಜವಿರಬಹುದು. ಆದರೆ, ಅವರು ಹಾಗೆ ಮಾಡಿದರೆ, ಅದು ರಷ್ಯಾದ ಪತನಕ್ಕೆ ಕಾರಣವಾಗುತ್ತದೆ. ಇನ್ನು ಯೂಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ಮಾತಿನ ಮೂಲಕ ತಮ್ಮ ದೇಶಕ್ಕೆ ಯಾವುದೇ ಒಳ್ಳೆಯದನ್ನು ಮಾಡುತ್ತಿಲ್ಲ. ಅವರ ಬಾಯಿಂದ ಹೊರಬರುವ ಪ್ರತಿಯೊಂದು ಮಾತು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅವರು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು ಎಂದು ಟ್ರಂಪ್​ ಹೇಳಿದರು.

Post a Comment

Previous Post Next Post