ರ್ನಾಟಕ ಸರ್ಕಾರವು ಪದೇ ಪದೇ ಮದ್ಯದ ಬೆಲೆಯನ್ನು ಏರಿಕೆ ಮಾಡುತ್ತಿದ್ದು. ಮದ್ಯದ ಬೆಲೆ ಏರಿಕೆ ಮಾಡುವ ಮೂಲಕ ಲಾಭ ಮಾಡಿಕೊಳ್ಳಬೇಕು ಎನ್ನುವ ಲೆಕ್ಕಾಚಾರವನ್ನು ಮಾಡಿದ್ದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಕ್ಕೆ ರಾಜ್ಯದ ಮದ್ಯ ಪ್ರಿಯರು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದಲೂ ಮದ್ಯದ ಬೆಲೆ ಮೂರ್ನಾಲ್ಕು ಬಾರಿ ಹೆಚ್ಚಳವಾಗಿದೆ.
ಈ ರೀತಿ ನಿರಂತರವಾಗಿ ಮದ್ಯ ಬೆಲೆ ಏರಿಕೆ ಆಗುವುದನ್ನು ವಿರೋಧಿಸಿ ತಮ್ಮದೇ ರೀತಿಯಲ್ಲಿ ಮದ್ಯ ಪ್ರಿಯರು ಉತ್ತರವನ್ನು ನೀಡಿದ್ದಾರೆ. ಅದು ಏನು ಹಾಗೂ ಯಾವ ರೀತಿಯ ಉತ್ತರವನ್ನು ನೀಡಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆ ಆಗುತ್ತಿರುವುದನ್ನು ವಿರೋಧಿಸಿ ಮದ್ಯ ಪ್ರಿಯರು ತಮ್ಮದೇ ರೀತಿಯಲ್ಲಿ ಉತ್ತರವನ್ನು ಕೊಟ್ಟಿದ್ದಾರೆ. ಹೌದು ಮದ್ಯದ ಬೆಲೆಯನ್ನು ಏರಿಕೆ ಮಾಡುವ ಮೂಲಕ ಭರ್ಜರಿ ಆದಾಯವನ್ನು ಗಳಿಕೆ ಮಾಡಬಹುದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಲೆಕ್ಕಾಚಾರ ಹಾಕಿಕೊಂಡಿತ್ತು. ಹೀಗಾಗಿ, ಮೇ 15 ರಿಂದ ಮದ್ಯದ ಬೆಲೆ ಏರಿಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಕೇವಲ ಬಿಯರ್ ಬೆಲೆಯನ್ನು ಹೆಚ್ಚಳ ಮಾಡಲಾಗಿತ್ತು. ಇದಾದ ಮೇಲೆ ಬಿಯರ್‌ನೊಂದಿಗೆ ವಿವಿಧ ಮದ್ಯದ ಬೆಲೆಯನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರವು ಹೆಚ್ಚಳ ಮಾಡಿತ್ತು.
ಈ ರೀತಿ ಬೆಲೆ ಏರಿಕೆಗೆ ಕರ್ನಾಟಕದ ಮದ್ಯ ಪ್ರಿಯರು ಬುದ್ಧಿ ಕಲಿಸಿದ್ದು. ಮದ್ಯ ಪ್ರಿಯರ ಖಡಕ್ ನಿರ್ಧಾರದಿಂದಾಗಿ ರಾಜ್ಯ ಸರ್ಕಾರದ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಾಗಿದೆ. ಇಷ್ಟಕ್ಕೂ ರಾಜ್ಯದ ಮದ್ಯ ಪ್ರಿಯರು ಏನು ಮಾಡಿದ್ದಾರೆ ಅಂತ ನೋಡೋಣ.
ಮದ್ಯ ಮಾರಾಟ ಕುಸಿತ: ಕರ್ನಾಟಕ ಸರ್ಕಾರವು ಮದ್ಯ ಕುಡಿಯುವವರು ಹೇಗಿದ್ದರೂ ಅಥವಾ ಬೆಲೆ ಏರಿಕೆಯಾದರೂ ಕುಡಿಯುತ್ತಾರೆ ಎಂದು ಲೆಕ್ಕಾಚಾರ ಹಾಕಿಕೊಂಡಿರಬೇಕು. ಆದರೆ, ಮದ್ಯ ಪ್ರಿಯರು ರಾಜ್ಯದಲ್ಲಿ ಮದ್ಯ ಖರೀದಿ ಮಾಡುವುದನ್ನೇ ಕಡಿಮೆ ಮಾಡಿದ್ದಾರೆ. ಹೌದು ಮದ್ಯದ ಬೆಲೆ ಏರಿಕೆಯಾಗುತ್ತಿ
ರುವ ಹಿನ್ನೆಲೆಯಲ್ಲಿ ಹಾಗೂ ಹೊರ ರಾಜ್ಯಗಳ ಪ್ರಭಾವದಿಂದಾಗಿ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಇದರಿಂದ ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿರುವ ಅಬಕಾರಿ ಆದಾಯ ಮೂಲಕ್ಕೆ ಪೆಟ್ಟು ಬಿದ್ದಂತೆ ಆಗಿದೆ.
ಮದ್ಯ ಖರೀದಿ ಇಳಿಕೆ: ಇನ್ನು ಮದ್ಯ ಮಾರಾಟದಲ್ಲಿ ಎಷ್ಟು ಇಳಿಕೆಯಾಗಿದೆ ಎನ್ನುವ ಬಗ್ಗೆ ಪ್ರಜಾವಾಣಿ ವರದಿ ಮಾಡಿದೆ. ಈ ವರದಿಯ ಪ್ರಕಾರ, ಕರ್ನಾಟಕದಲ್ಲಿ 2024 - 2025ನೇ ಸಾಲಿನಲ್ಲಿ 2023 - 2024 ನೇ ಸಾಲಿಗಿಂತ ಭರ್ಜರಿ ಇಳಿಕೆ ಕಂಡಿದೆ ಎಂದು ಹೇಳಲಾಗಿದೆ.
ಮದ್ಯದ ಬೆಲೆ ಏರಿಕೆಗೆ ವಿರೋಧ: ರಾಜ್ಯದಲ್ಲಿ ಮದ್ಯ ಬೆಲೆ ಏರಿಕೆಗೆ ಮದ್ಯ ಪ್ರಿಯರು ಹಾಗೂ ಮದ್ಯ ತಯಾರಿಕ ಸಂಸ್ಥೆಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಇದರ ನಡುವೆಯೂ ಮದ್ಯದ ಬೆಲೆ ಇಳಿಸುವ ಬಗ್ಗೆ ರಾಜ್ಯ ಸರ್ಕಾರವು ಯಾವುದೇ ನಿರ್ಧಾರಕ್ಕೆ ಮುಂದಾಗಿಲ್ಲ. ಅಲ್ಲದೇ ಮದ್ಯದ ಅಂಗಡಿಗಳು ಬೆಲೆ ಏರಿಕೆಯನ್ನು ವಿರೋಧಿಸಿ ಮದ್ಯದ ಅಂಗಡಿಗಳ ಬಂದ್‌ಗೂ ಮುಂದಾಗಿವೆ.

Post a Comment