ಕಾ : ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಮೇಲೆ ನಿಷೇಧ ಹೇರಿದ ಬಳಿಕ ಬಾಂಗ್ಲಾದೇಶದಲ್ಲಿ ಯುದ್ಧ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯವನ್ನು ಸ್ವತಃ ಮಧ್ಯಂತರ ಪ್ರಧಾನಿ ಮುಹಮ್ಮದ್ ಯೂನಸ್ ಒಪ್ಪಿಕೊಂಡಿದ್ದಾರೆ.
[ದೇಶದ ಒಳಗೆ ಮತ್ತು ಹೊರಗೆ ಪ್ರಕ್ಷುಬ್ದಕರ ಸನ್ನಿವೇಶ ನಿರ್ಮಾಣವಾಗಿದೆ ಎಂದು ಯೂನಸ್ ಹೇಳಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶದ ಸೇನಾಮುಖ್ಯಸ್ಥ ಜನರಲ್ ವಾಕರ್ ಉಲ್ ಜಮನ್ ಯೂನಸ್ ರನ್ನು ಕೆಳಗಿಳಿಸಲು ಎಲ್ಲಾ ಪ್ರಯತ್ನಗಳನ್ನೂ ನಡೆಸುತ್ತಿರುವ ವಿಷಯ ಬಹಿರಂಗೊಂಡಿದೆ. ದೇಶದ ಗುಪ್ತಚರ ಪಡೆಗಳು ಸೇನಾ ಮುಖ್ಯಸ್ಥರ ಹುನ್ನಾರವನ್ನು ಬಯಲಿಗೆಳೆದಿದ್ದು, ಯೂನಸ್ ಗೆ ಈಗ ಮತ್ತೊಂದು ತಲೆಬಿಸಿ ಎದುರಾಗಿದೆ.
ಇದೇ ವೇಳೆ ಮಧ್ಯಂತರ ಸರ್ಕಾರವನ್ನು ಒಪ್ಪದ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ಚುನಾವಣೆ ನಡೆಸುವಂತೆ ಬಲವಾದ ಆಗ್ರಹ ಕೇಳಿಬಂದಿದೆ.
ಕಳೆದ ವರ್ಷ ಶೇಖ್ ಹಸೀನಾ ಪದಚ್ಯುತಿಯ ಬಳಿಕ ದೇಶದಲ್ಲಿ ದಂಗೆಯ ಪರಿಸ್ಥಿತಿ ಹತೋಟಿಗೆ ಬಂದಿದೆ. ಚುನಾವಣೆ ನಡೆಸದಿದ್ದರೆ ನನ್ನ ಮನಸಾಕ್ಷಿ ಒಪ್ಪುವುದಿಲ್ಲ . ಈಗಿನ ಮಧ್ಯಂತರ ಸರ್ಕಾರವು ಹಲವು ಪಕ್ಷಗಳ ಬೆಂಬಲದೊಂದಿಗೆ ನ್ಯಾಯ ಸಮ್ಮವಾಗಿಯೇ ನಡೆಯುತ್ತಿದೆ ಎಂದು ಯೂನಸ್ ಹೇಳಿದ್ದಾರೆ. ಕಳೆದೆರೆಡು ದಿನಗಳಿಂದ ಅವರು 20 ಕ್ಕೂ ಹೆಚ್ಚು ಪಕ್ಷಗಳ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Post a Comment