ಪಹಲ್ಗಾಮ್ ದಾಳಿಯ (Pahalgam Attack) ನಂತರ ಭಾರತ, ಪಾಕಿಸ್ತಾನದ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಯುದ್ಧದ ಭಯದಲ್ಲಿ ಪಾಕಿಸ್ತಾನ (Pakistana) ಕಂಗಾಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಮರ ಜೋರಾಗಿದೆ. ಪ್ರಧಾನಿ ಮೋದಿ (Narendra Modi) ಸಭೆ ನಡೆಸುತ್ತಿರುವಾಗ ಪಾಕಿಸ್ತಾನಿ ಸೇನೆ ಭಾರತದ ದಾಳಿ ಭೀತಿಯಲ್ಲಿ ಗಡಿಯಲಿ ಪ್ರತಿದಾಳಿಗೆ ಸಜ್ಜಾಗಿದೆ. ಕೇಂದ್ರ ಸಚಿವರಿಂದ ಯಾವುದೇ ಹೇಳಿಕೆ ಬಂದಿಲ್ಲ, ಸರ್ಕಾರವೂ ಏನನ್ನೂ ಹೇಳುತ್ತಿಲ್ಲ. ಆದರೆ ಭಾರತದ ನಾಯಕರು ಸಭೆ ಮೇಲೆ ಸಭೆ ಮಾಡ್ತಿದ್ದು, ಇದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ನಿದ್ರೆ ಗೆಡಿಸಿದೆ. ಪ್ರಧಾನಿ ಮೋದಿ ಅವರು ಮದ್ದು,ಗುಂಡುಗಳ ಬಗ್ಗೆ ಮರೆತುಬಿಡುವ 'ಮೈಂಡ್ ಗೇಮ್'ನಲ್ಲಿ ಸಿಲುಕಿಸಿದ್ದಾರೆ. ಎಂಟು ದಿನಗಳಿಂದ ಪಾಕಿಸ್ತಾನಿ ನಾಯಕರು ಶರಣಾಗತಿಯ ಬಗ್ಗೆ ಮಾತಾಡ್ತಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವರು, 'ನಾವು ಯುದ್ಧವನ್ನು ಹೇಗಾದ್ರೂ ತಪ್ಪಿಸಬೇಕೆಂದು ಬಯಸುತ್ತೇವೆ' ಎಂದು ಕೂಡ ಹೇಳಿದ್ದಾರೆ.
ಕೆಣಕಿದ ಪಾಕ್ಗೆ ಕಾದಿದೆ ಗಂಡಾಂತರ!
ಪೆಹಲ್ಗಾಮ್ ದಾಳಿಯ ಸಮಯದಲ್ಲಿ ಪ್ರಧಾನಿ ಮೋದಿ ಸೌದಿ ಅರೇಬಿಯಾದಲ್ಲಿದ್ದರು, ಆದರೆ ಸುದ್ದಿ ತಿಳಿದ ತಕ್ಷಣ ಪ್ರವಾಸವನ್ನು ಅರ್ಧದಲ್ಲೇ ಬಿಟ್ಟು ಭಾರತಕ್ಕೆ ಮರಳಿದರು. ಬಂದ ಕೂಡಲೇ ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು. ಭಾರತ ಪಾಕ್ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ರು. ಇದಾದ ನಂತರ, ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆಯನ್ನು ಕರೆದಿದ್ರು. ಮೋದಿ ನಡೆಸುತ್ತಿರುವ ಸಭೆಗಳು ಇದೀಗ ಪಾಕಿಸ್ತಾನದ ಉಸಿರುಗಟ್ಟಿಸುತ್ತಿದೆ. ಪಾಕ್ ಸರ್ಕಾರ ಪಹಲ್ಗಾಮ್ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಲು ಪ್ರಾರಂಭಿಸಿತ್ತು.

Post a Comment