BREAKING: ಮತ್ತೆ ಬೆಂಗಳೂರಲ್ಲಿ ಟೋಯಿಂಗ್ ಆರಂಭ


 ಗಳೂರು: ನಗರದಲ್ಲಿ ಟೋಯಿಂಗ್ ಹಗಲು ದರೋಡೆಯ ಕಾರಣಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಟೋಯಿಂದ್ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಬೆಂಗಳೂರಲ್ಲಿ ಟೋಯಿಂಗ್ ಪುನರಾರಂಭಗೊಳಿಸಲಾಗುತ್ತಿದೆ.

[ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅಧಿಕೃತ ಮಾಹಿತಿ ನೀಡಿದ್ದು, ಬಾಡಿಗೆ ಟೋಯಿಂಗ್ ವಾಹನ ಬಳಸದೇ ಪೊಲೀಸ್ ಇಲಾಖೆಯ ವಾಹನ ಬಳಸಿಕೊಂಡು ಬೆಂಗಳೂರಲ್ಲಿ ಟೋಯಿಂಗ್ ಪುನರಾರಂಭಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿದು ಬಂದಿದೆ.

ಅಂದಹಾಗೇ 2022ರಲ್ಲಿ ಬೆಂಗಳೂರಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಂತ ಬಸವರಾಜ ಬೊಮ್ಮಾಯಿ ಅವರು ಟೋಯಿಂಗ್ ರದ್ದುಗೊಳಿಸಿದ್ದರು. ಪಾರ್ಕಿಂಗ್ ಅಲ್ಲದ ಜಾಗದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದದ್ದನ್ನು ಟೋಯಿಂಗ್ ಮಾಡುತ್ತಿದ್ದದ್ದು ನಿಲ್ಲಿಸಲಾಗಿತ್ತು. ಬದಲಾಗಿ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೇ ದಂಡಾಸ್ತ್ರ ಪ್ರಯೋಗದ ಆದೇಶ ಮಾಡಲಾಗಿತ್ತು. ಇದೀಗ ಮತ್ತೆ ಟೋಯಿಂಗ್ ಬೆಂಗಳೂರಲ್ಲಿ ಆರಂಭಗೊಳ್ಳಲಿದೆ.

Post a Comment

Previous Post Next Post