ತ್ತರ ಕೊರಿಯಾ & ಅಮೆರಿಕ ನಡುವೆ ಕಿರಿಕ್ ಆಗಾಗ ಶುರುವಾಗುತ್ತೆ, ದಿಢೀರ್ ಅಂತಾ ಎಲ್ಲಾ ತಣ್ಣಗೂ ಆಗುತ್ತದೆ. ಅದರಲ್ಲೂ ಉತ್ತರ ಕೊರಿಯಾ ದೇಶದಲ್ಲಿ ಸರ್ವಾಧಿಕಾರಿ ಆಡಳಿತವನ್ನ ನಡೆಸುತ್ತಿದ್ದರೆ, ಮತ್ತೊಂದು ಕಡೆ ಅಮೆರಿಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.
ಹೀಗಿದ್ದಾಗ ಉತ್ತರ ಕೊರಿಯಾ & ಅಮೆರಿಕ ಆಜನ್ಮ ವೈರಿಗಳು. ಇಬ್ಬರ ನಡುವೆ ಇರುವ ಶತ್ರುತ್ವ ಕೊನೆಗೆ ನ್ಯೂಕ್ಲಿಯರ್ ಅಂದ್ರೆ ಪರಮಾಣು ಅಸ್ತ್ರದ ತನಕ ತಂದು ನಿಲ್ಲಿಸಿದೆ. ಇಷ್ಟೆಲ್ಲದರ ನಡುವೆಯೇ ದಿಢೀರ್ ಅಮೆರಿಕ ವಿರುದ್ಧ ರೊಚ್ಚಿಗೆದ್ದು ಕೂತಿದೆ ಉತ್ತರ ಕೊರಿಯಾ!
ಹೌದು, ಉತ್ತರ ಕೊರಿಯಾ ಕೂಡ ಪರಮಾಣು ಅಸ್ತ್ರ ಇರುವ ದೇಶವಾಗಿದೆ. ಹೀಗಾಗಿ ಇದೇ ಉತ್ತರ ಕೊರಿಯಾ ವಿಚಾರದಲ್ಲಿ ಅಮೆರಿಕ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಯಾವುದೇ ಕ್ಷಣ ಏನು ಬೇಕಾದರೂ ಆಗಬಹುದು ಎಂಬ ಭಯದ ವಾತಾವರಣ ಆವರಿಸಿದೆ. ಹೀಗಿದ್ದಾಗ ಟ್ರಂಪ್ ಅಂದ್ರೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಹೊಸ ಪ್ಲಾನ್ ಕುರಿತು ಇದೀಗ ಉತ್ತರ ಕೊರಿಯಾ ಭಾರಿ ಆಕ್ರೋಶ ಹೊರ ಹಾಕಿದೆ. ಹಾಗಾದ್ರೆ ಇದಕ್ಕೆ ಕಾರಣ ಏನು? ಮುಂದೆ ಓದಿ.
ಟ್ರಂಪ್‌ಗೆ ಉತ್ತರ ಕೊರಿಯಾ ಟಾಂಗ್!
ಅಂದಹಾಗೆ ಅಮೆರಿಕ ರಕ್ಷಣೆಗೆ ಅಂತಾ ಡೊನಾಲ್ಡ್ ಟ್ರಂಪ್ ಹೊಸ ಅಸ್ತ್ರದ ಬಗ್ಗೆ ಪ್ರಸ್ತಾಪವನ್ನ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಪ್ರಸ್ತಾಪ ಮಾಡಿರುವ ಹೊಸ ಅಸ್ತ್ರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ್ದು, ಗೋಲ್ಡನ್ ಡೋಮ್ ಎಂಬ ಹೊಸ ವ್ಯವಸ್ಥೆ ಬಗ್ಗೆ ಮಾತನಾಡಿದ್ದರು ಟ್ರಂಪ್ ಅವರು. ಆದರೆ ಇದೀಗ ಗೋಲ್ಡನ್ ಡೋಮ್ ವಿರುದ್ಧ ರೊಚ್ಚಿಗೆದ್ದಿರುವ ಉತ್ತರ ಕೊರಿಯಾ, ಭವಿಷ್ಯದಲ್ಲಿ ಇದರಿಂದ ದೊಡ್ಡ ಅನಾಹುತ ಎದುರಾಗಲಿದೆ ಎಂದು ಆರೋಪವನ್ನ ಮಾಡಿದೆ. ಇದರ ಜೊತೆಗೆ ಪರಮಾಣು ಯುದ್ಧ ಸಾಧ್ಯತೆ ಬಗ್ಗೆ ಕೂಡ ಆರೋಪ ಮಾಡಿದೆ ಉತ್ತರ ಕೊರಿಯಾ ದೇಶ. ಈ ಮೂಲಕ ಮತ್ತೆ ಉತ್ತರ ಕೊರಿಯಾ & ಅಮೆರಿಕ ನಡುವೆ ದೊಡ್ಡ ಕಿರಿಕ್ ಶುರುವಾಗಿದೆ.

Post a Comment