ಪಾಕಿಸ್ತಾನಕ್ಕೆ ಬೆಂಬಲಿಸಿದ ಟರ್ಕಿಯ ನಿಜ ಬಣ್ಣ ಬಯಲು ..!


  ರತದ ವಿರುದ್ಧದ ಸಮರದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿದ್ದೀಗ ಜಗತ್ ಜಾಹೀರಾಗಿದೆ. ಕದನ ವಿರಾಮ ಘೋಷಣೆಯಾದ 15 ದಿನಕ್ಕೇ ಪಾಕಿಸ್ತಾನ ಸರ್ಕಾರ ಮತ್ತು ಸೈನ್ಯ ಎರಡೂ ಟರ್ಕಿಗೆ ಅಭಿನಂದನೆ ಸಲ್ಲಿಸಿದೆ. ಇದರ ಭಾಗವಾಗೇ ಎನ್ನುವಂತೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಇಬ್ರೂ ಟರ್ಕಿಗೆ ಭೇಟಿ ನೀಡಿದ್ದಾರೆ.

ಈ ವೇಳೆ ಅವರು ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ. ಆದರೆ ಇದೀಗ ಈ ಭೇಟಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಿಜವಾಗಿಯೂ ಧನ್ಯವಾದ ಹೇಳುವ ಉದ್ದೇಶವೇ ಅಥವಾ ಪಾಕಿಸ್ತಾನ ಒಳಗೊಳಗೇ ಬೇರೆಯದ್ದೇ ಹುನ್ನಾರ ನಡೆಸಿದೆಯಾ ಅನ್ನೋ ಪ್ರಶ್ನೆ ಮೂಡಿಸಿದೆ.


ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸ್ವತಃ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಭೇಟಿಯನ್ನು ದೃಢಪಡಿಸಿದರು ಮತ್ತು ಭಾರತ ಪಾಕಿಸ್ತಾನದ ಮಧ್ಯೆ ಯುದ್ಧದ ಸಮಯದಲ್ಲಿ ಟರ್ಕಿ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಲಾಯ್ತು ಎಂದು ಬರೆದಿದ್ದಾರೆ. ಆದರೆ ರಾಜಕೀಯ ವಲಯಗಳಲ್ಲಿ, ಇದನ್ನು ರಾಜತಾಂತ್ರಿಕ ಕಾರ್ಯತಂತ್ರದ ಒಂದು ಭಾಗವೆಂದು ಪರಿಗಣಿಸಲಾಗುತ್ತಿದೆ. ವಿಶೇಷವಾಗಿ ಭಾರತದ ಪ್ರತೀಕಾರದ ನಿಲುವಿನಿಂದ ಪಾಕಿಸ್ತಾನ ಆತಂಕಗೊಂಡಿರುವ ಸಮಯದಲ್ಲಿ ಈ ಭೇಟಿ ಮತ್ತು ಮಾತುಕತೆ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಸರ್ಕಾರಿ ಒಡೆತನದ ವಾಹಿನಿ ಪಿಟಿವಿ ಪ್ರಕಾರ, ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಶಹಬಾಜ್ ಷರೀಫ್ ಮತ್ತು ಅಧ್ಯಕ್ಷ ಎರ್ಡೋಗನ್ ನಡುವೆ ನಿಯೋಗ ಮಟ್ಟದ ಮಾತುಕತೆಗಳು ನಡೆದಿವೆ. ಇದರಲ್ಲಿ ವಿದೇಶಾಂಗ ಸಚಿವ ಇಶಾಕ್ ದಾರ್, ಮಾಹಿತಿ ಸಚಿವ ಅತಾವುಲ್ಲಾ ತರಾರ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಕೂಡ ಉಪಸ್ಥಿತರಿದ್ರು ಎಂದು ಉಲ್ಲೇಖಿಸಲಾಗಿದೆ.

Post a Comment

Previous Post Next Post