ಕರ್ನಾಟಕದ ಜನತೆ ಕೇಂದ್ರ ಸರ್ಕಾರಕ್ಕೆ ಕೊಟ್ಟ ರೇಟಿಂಗ್ ಎಷ್ಟು : ಪಿಎಂ ಹುದ್ದೆಗೆ ರಾಹುಲ್ ಗಾಂಧಿಗೆ ಎಷ್ಟು ಮಾರ್ಕ್ಸ್?


  ಸದಿಲ್ಲಿ : ಸಿದ್ದರಾಮಯ್ಯನವರ ಸರ್ಕಾರ ಕರ್ನಾಟಕದಲ್ಲಿ ಎರಡು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಹೈದರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಸಂಸ್ಥೆ, ಸಮೀಕ್ಷೆಯೊಂದನ್ನು ನಡೆಸಿತ್ತು. ಆ ಸರ್ವೇ ವರದಿ, ಕಾಂಗ್ರೆಸ್ ಪಾಲಿಗೆ ಅಷ್ಟು ಅಶಾದಾಯಕವಾಗಿರಲಿಲ್ಲ. ಬದಲಿಗೆ, ಬಿಜೆಪಿ ಖುಷಿ ಪಡುವ ಸುದ್ದಿಯಾಗಿತ್ತು.

ಕರ್ನಾಟಕದ ಮತದಾರರು ಕೇಂದ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮತ್ತು ಪ್ರಧಾನಮಂತ್ರಿ ಹುದ್ದೆಗೆ ಯಾರು ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೋ, ಅದನ್ನೂ ಈ ಸಂಸ್ಥೆ ಪ್ರಕಟಿಸಿದೆ. ಅದರ ಪ್ರಕಾರ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯವರೇ ಬೆಸ್ಟ್ ಚಾಯ್ಸ್ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ. ಕಳೆದ ವಾರ ಹೊಸಪೇಟೆಯಲ್ಲಿ ಕಾಂಗ್ರೆಸ್ ಭರ್ಜರಿ ಸಾಧನಾ ಸಮಾವೇಶವನ್ನು ನಡೆಸಿತ್ತು. ಸಮೀಕ್ಷೆಯಲ್ಲಿನ ಫಲಿತಾಂಶದ ಪ್ರಕಾರ ಬಿಜೆಪಿಯು 136 - 159 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗಿತ್ತು. ಪೀಪಲ್ಸ್ ಪಲ್ಸ್ ಸಮೀಕ್ಷೆಯು ಬಿಜೆಪಿಗೆ ಲಾಭ ತಂದು ಕೊಡಲಿದೆಯೇ ಎನ್ನುವ ಚರ್ಚೆ ಆರಂಭವಾಗಿತ್ತು.ಈ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಲು ಯಾರು ಸೂಕ್ತ ಎನ್ನುವ ಉತ್ತರಕ್ಕೆ ಸಿದ್ದರಾಮಯ್ಯ ಮೊದಲ ಆಯ್ಕೆ ಎಂದು ಜನರು ಹೇಳಿದ್ದಾರೆ. ಏಪ್ರಿಲ್ 17ರಿಂದ ಮೇ 18ರ ಅವಧಿಯಲ್ಲಿ, 10,481 ಮತದಾರರ ಅಭಿಪ್ರಾಯಗಳನ್ನು ಪಡೆದು ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ. ಯಾರಿಗೆ ಎಷ್ಟು ಮಾರ್ಕ್ಸ್ (ಸಿಎಂ - ಕರ್ನಾಟಕ)


ಅಭ್ಯರ್ಥಿ / ಪಕ್ಷ ಶೇಕಡಾವಾರು (%)

ಸಿದ್ದರಾಮಯ್ಯ 29.2

ಡಿಕೆ ಶಿವಕುಮಾರ್ 10.7

ಎಚ್ ಡಿ ಕುಮಾರಸ್ವಾಮಿ 7.6

ಬಿಎಸ್ ಯಡಿಯೂರಪ್ಪ 5.5

ಬಿವೈ ವಿಜಯೇಂದ್ರ 5.2

ಯಾರಾದರೂ ಬಿಜೆಪಿ ಅಭ್ಯರ್ಥಿ 16.9

ಯಾರಾದರೂ ಕಾಂಗ್ರೆಸ್ ಅಭ್ಯರ್ಥಿ 3.6

ಯಾರಾದರೂ ಜೆಡಿಎಸ್ ಅಭ್ಯರ್ಥಿ 0.3

ಇತರರು 21.0

ಕರ್ನಾಟಕದ ಮತದಾರ ದೇಶದ ಪ್ರಧಾನಿಯಾಗಿ ಯಾರನ್ನು ನೋಡಲು ಬಯಸುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ :

ನರೇಂದ್ರ ಮೋದಿ - ಶೇ. 59.1

ರಾಹುಲ್ ಗಾಂಧಿ - ಶೇ. 17.3

ಯೋಗಿ ಆದಿತ್ಯನಾಥ್ - ಶೇ. 10.9

ಮಲ್ಲಿಕಾರ್ಜುನ ಖರ್ಗೆ - ಶೇ. 2.3

ಇತರರು - ಶೇ. 10.4

ಕೇಂದ್ರ ಸರ್ಕಾರದ ಇದುವರೆಗಿನ ಕಾರ್ಯವೈಖರಿಯ ಬಗ್ಗೆ ಕರ್ನಾಟಕದ ಜನತೆ ಏನು ಹೇಳುತ್ತಾರೆ?

ಅತ್ಯುತ್ತಮ - ಶೇ. 29.6

ಉತ್ತಮ - ಶೇ. 36.7

ಎವರೇಜ್ - ಶೇ. 17.5

ಕಳಪೆ - ಶೇ. 9.7

ತೀರಾ ಕಳಪೆ - ಶೇ. 6.5

Post a Comment

Previous Post Next Post