Honey Trap: ಸುಂದರಿ ಸಿಗ್ನಲ್ ಕೊಟ್ಲೂ ಅಂತ 'ಹನಿ' ಹಿಂದೆ ಹೋದ ಅಂಕಲ್! ಮುಂದೇನಾಯ್ತು ಗೊತ್ತಾ?


 ಬೆಂಗಳೂರಿನಲ್ಲಿ ಸುಂದರ ಯುವತಿ ಕರೆದ್ಲು ಅಂತಾ ಹಿಂದೆ ಹೋದ ಅಂಕಲ್ ಒಬ್ಬರಿಂದ ಪೊಲೀಸರು ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ...ಇನ್ನಷ್ಟು ಸುದ್ದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪೊಲೀಸರ (Police) ಹೆಸರು ಹೇಳಿಕೊಂಡು ಹಣ ಪಡೆದು ವಂಚನೆ (Fraud) ಮಾಡ್ತಾ ಇರುವ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಬೆಂಗಳೂರಿನಲ್ಲಿ ಸುಂದರ ಯುವತಿ ಕರೆದ್ಲು ಅಂತಾ ಹಿಂದೆ ಹೋದ ಅಂಕಲ್ ಒಬ್ಬರಿಂದ ಪೊಲೀಸರು ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಒಂದು ವರ್ಷದ ಲವ್ ಕಹಾನಿ

ಹೌದು, ಇದು 57 ವರ್ಷದ ಅಂಕಲ್ ಹಾಗೂ 20 ವರ್ಷದ ಸುಂದರಿಯ ಒಂದು ವರ್ಷದ ಲವ್ ಕಹಾನಿ ಇದು. ನಯನಾ ಎಂಬ ಯುವತಿ ಕೇಳಿದ್ಲು ಅಂತಾ ಅಂಕಲ್ ಆಗಾಗ ಹಣ ಕೊಡ್ತಿದ್ರಂತೆ. ಸಿವಿಲ್‌ ಕಂಟ್ರಾಕ್ಟರ್ ಆಗಿರೋ ಅಂಕಲ್ ಒಳ್ಳೆ ಸೌಂಡ್ ಪಾರ್ಟಿ ಅಂತಾ ಪ್ಲಾನ್‌ ಮಾಡಿದ ಸುರ ಸುಂದರಿ. ಟೀ‌ ಕುಡಿದುಕೊಂಡು ಹೋಗಿ ಅಂತಾ ಮನೆಗೆ ಕರೆಯುತ್ತಾಳೆ. ಸುಂದರ ಯುವತಿ ಕರೆದ್ಲೂ ಅಂತ ಮನೆಗೆ ಬಂದಾಗ ಅವರನ್ನು ಫಾಲೋ ಮಾಡಿಕೊಂಡು ಬಂದ ಗ್ಯಾಂಗ್ ಒಂದು ನಾವು ಪೊಲೀಸರು ಎಂದು ಹೇಳಿಕೊಂಡು ಹಣ, ಮೊಬೈಲ್ ಹಾಗೂ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾರೆ.

Post a Comment

Previous Post Next Post