ಕೆಲಸ ಮಾಡುವ ಸ್ಥಳದಲ್ಲಿ ನೀಡಲಾಗುವ ಕಾಫಿಯಲ್ಲಿ ಕೆಫೆಸ್ಟಾಲ್ ಮತ್ತು ಕಾಹ್ವಿಯೋಲ್‌ನಂತಹ ಹಾನಿಕಾರಕ ಸಂಯುಕ್ತಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಕೊಲೆಸ್ಟ್ರಾಲ್...ಇನ್ನಷ್ಟು ಸುದ್ದಿ
ಅನೇಕ ಕಂಪನಿಗಳು ಸಾಮಾನ್ಯವಾಗಿ ಕಾಫಿ (Coffee) ಮತ್ತು ಚಹಾವನ್ನು (Tea) ಕೆಲಸ ಮಾಡುವವರಿಗಾಗಿ ಒದಗಿಸುತ್ತವೆ. ಆದರೆ, ಇತ್ತೀಚಿನ ಅಧ್ಯಯನವೊಂದು ಅಂತಹ ಕಾಫಿಯನ್ನು ಕುಡಿಯುವುದರಿಂದ ಹೃದಯಾಘಾತದ (Heart Attack) ಅಪಾಯ ಹೆಚ್ಚಾಗಬಹುದು. ಕೆಲಸದ ಸ್ಥಳಗಳಲ್ಲಿ ನೀಡಲಾಗುವ ಕಾಫಿ, ಹೊರಗೆ ಸಿಗುವ ಕಾಫಿಗಿಂತ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟ ಹೆಚ್ಚಿಸುವ ಹೆಚ್ಚು ಹಾನಿಕಾರಕ ಸಂಯುಕ್ತಗಳನ್ನು ಹೊಂದರುತ್ತದೆ ಎಂದು ತಿಳಿಸಿದೆ. ಕೆಲಸದ ಸ್ಥಳದಲ್ಲಿ ಪ್ರತಿದಿನ ಕಾಫಿ ಕುಡಿಯುವುದರಿಂದ ಹೃದ್ರೋಗ ಸಮಸ್ಯೆಗಳು ಉಂಟಾಗಬಹುದು ಎಂದು ತಿಳಿಸಿದೆ.
ಮನೆಯಲ್ಲಿ ಅಥವಾ ಅಂಗಡಿಯಲ್ಲಿ ತಯಾರಿಸಿದ ಕಾಫಿಗಿಂತ ಕಚೇರಿಯಲ್ಲಿ ತಯಾರಿಸಿದ ಕಾಫಿ ಅನಾರೋಗ್ಯಕರ ಎಂಬುವುದಕ್ಕೆ ಅದರ ಶೋಧನೆ ಪ್ರಕ್ರಿಯೆಯೇ ಕಾರಣ ಎಂದು ಹೇಳಲಾಗುತ್ತದೆ. ಸ್ವೀಡನ್‌ನ ಸಂಶೋಧಕರು 14 ಕಚೇರಿಗಳಲ್ಲಿ ಯಂತ್ರಗಳ ಮೂಲಕ ಪಡೆಯಲಾಗುವ ಕಾಫಿ ಮಾದರಿಗಳನ್ನು ವಿಶ್ಲೇಷಿಸಿ, ಅವುಗಳನ್ನು ಮನೆಯಲ್ಲಿ ಅಥವಾ ಬೇರೆಡೆ ತಯಾರಿಸಿದ ಕಾಫಿಯೊಂದಿಗೆ ಹೋಲಿಸಿದಾಗ, ಕಚೇರಿ ಕಾಫಿಯಲ್ಲಿ ಹೆಚ್ಚಿನ ಮಟ್ಟದ ಕೆಫೆಸ್ಟಾಲ್ ಮತ್ತು ಕಹ್ವಿಯೋಲ್ ಇರುವುದನ್ನು ಪತ್ತೆ ಹಚ್ಚಿದೆ. ಅಧಿಕ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ಅಪಾಯಕಾರಿ ಆಗಿದೆ.

Post a Comment