ಅತ್ಯಾಚಾರ ಮಾಡಿರುವವರ ಬಗ್ಗೆ ಮಾತನಾಡುವುದಿಲ್ಲ; ಡಿ.ಕೆ.ಸುರೇಶ್​ ಹೀಗೇಳಿದ್ದೇಕೆ? DK Suresh


 K Suresh: ವಿಧಾನಸೌಧದಲ್ಲಿ ಅತ್ಯಾಚಾರ ಮಾಡಿರುವವರ ಕುರಿತು ನಾನು ಮಾತನಾಡುವುದಿಲ್ಲ. ಮಾಧ್ಯಮಗಳು ಇಂತಹವರ ಬಗ್ಗೆ ಕೇಳುತ್ತಿದ್ದೀರಾ? ಆತನ ಅತ್ಯಾಚಾರ ಪ್ರಕರಣಗಳ ಬಗ್ಗೆ, ಆರೋಪ ಪಟ್ಟಿಯಲ್ಲಿರುವ ಅಂಶಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡಲಿ ಎಂದು ಮಾಜಿ ಸಂಸದ ಡಿ.ಕೆ.

 ಸುರೇಶ್ ಕಿಡಿಕಾರಿದರು.


ಬೆಂಗಳೂರು ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ​ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹೆದರಿಸುತ್ತಿದ್ದಾರೆ ಎಂಬ ಶಾಸಕ ಮುನಿರತ್ನ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಮಾಜಿ ಸಂಸದ ಉದತ್ತರಿಸಿದ್ದೀಗೆ.


ಆತ ಓರ್ವ ರೇಪಿಸ್ಟ್ ಎಂದು ದೂರುದಾರರು ಹೇಳಿದ್ದಾರೆ. ದೇವಾಲಯ ಎಂದು ಪರಿಗಣಿಸಿರುವ ವಿಧಾನಸೌಧದಲ್ಲಿ ಇಂತಹ ನೀಚ ಕೃತ್ಯ ಎಸಗಿರುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅತ್ಯಾಚಾರದ ಬಗ್ಗೆ ನೀವು ಆತನನ್ನು ಪ್ರಶ್ನೆ ಮಾಡಿದ್ದೀರಾ? ಈ ಪ್ರಕರಣಗಳಲ್ಲಿ ಆತ ನಿರ್ದೋಷಿ ಎಂದು ತೀರ್ಮಾನ ಆಗುವವರೆಗೂ ಆತನನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಹರಿಹಾಯ್ದರು.


ಆತನಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿರುವುದು ಈಗಲ್ಲ. ಒಕ್ಕಲಿಗರ ತಾಯಂದಿರನ್ನು ಕೆಟ್ಟದಾಗಿ ಬಳಸಿಕೊಳ್ಳಲು ಆಲೋಚಿಸಿದಾಗ. ಒಕ್ಕಲಿಗರ ಬಗ್ಗೆ ಯಾವೆಲ್ಲಾ ಅವಾಚ್ಯ ಶಬ್ಧ ಬಳಸಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಈಗ ಈ ರೀತಿ ಮುಖವಾಡ ಹಾಕಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಮುನಿರತ್ನ ಅವರು ಎಸ್.ಎಂ ಕೃಷ್ಣ ಹಾಗೂ ಡಿ.ಕೆ. ರವಿ ಅವರ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೇಳಿರುವುದರ ಬಗ್ಗೆ ಪ್ರಶ್ನಿಸಿದಾಗ, 'ಕೊರಂಗು ಮುನಿರತ್ನ ನಾಯ್ಡು ಕಬ್ಬಿಣದ ಪ್ರತಿಮೆ ಮಾಡಬೇಕು ಎಂಬ ಅರ್ಜಿಯೂ ನನಗೆ ಬಂದಿದೆ. ಈ ಬಗ್ಗೆ ನಾನು ಡಿಸಿಎಂ ಬಳಿ ಮನವಿ ಮಾಡುತ್ತೇನೆ' ಎಂದು ತಿರುಗೇಟು ನೀಡಿದರು.

Post a Comment

Previous Post Next Post