CM Post: ಅಣ್ಣ ಸಿಎಂ ಆಗಬೇಕು ಎಂಬ ಡಿ.ಕೆ.ಸುರೇಶ್‌ ಆಸೆ ತಪ್ಪಲ್ಲ: ಕೆ.ಎನ್‌.ರಾಜಣ್ಣ


 ಸನ: ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರು ತನ್ನ ಅಣ್ಣ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಡುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವಲ್ಲ, ಮುಖ್ಯಮಂತ್ರಿ ಸ್ಥಾನ ಖಾಲಿಯಾದ ಮೇಲೆ ತಾನೇ ಆ ವಿಚಾರ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸುದ್ದಿಗಾರರೊಂದಿಗೆ ಹೇಳಿ

ಅಣ್ಣ ಸಿಎಂ ಆಗಬೇಕೆಂಬ ಆಸೆ ನನಗಿದೆ ಎಂಬ ಡಿ.ಕೆ. ಸುರೇಶ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲದರಲ್ಲೂ ತಪ್ಪು ಹುಡುಕುವ ಕೆಲಸ ಮಾಡಬಾರದು. ಸುರೇಶ್‌ ಆಸೆಯಲ್ಲಿ ತಪ್ಪಿಲ್ಲ. ಆಸೆ ಇದ್ದರೆ ಮಾತ್ರ ಜೀವನೋತ್ಸಾಹ ಇರುತ್ತದೆ. ಆಸೆ ಇಲ್ಲದವನು ಸನ್ಯಾಸಿಯಾಗುತ್ತಾನೆ ಎಂದರು. ಬಿಜೆಪಿ ಶಾಸಕ ಸುರೇಶ್‌ಗೌಡ ಅವರು ಬಿಜೆಪಿಗೆ ಡಿಕೆಶಿ ಆಹ್ವಾನಿಸಿದ್ದಾರೆಂಬ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ ಅವರು, ಸುರೇಶ್‌ ಗೌಡ ಹಿಂಭಾರವೂ ಅಲ್ಲ, ಮುಂಭಾರವೂ ಅಲ್ಲ. ಅವರ ಬಗ್ಗೆ ಏಕೆ ನಾವು ಮಾತಾಡಬೇಕು ಎಂದು ಪ್ರಶ್ನಿಸಿದರು.

ಹಾಸನ ಉಸ್ತುವಾರಿ ಬೇಡ: ಸಚಿವ ರಾಜಣ್ಣ ಪುನರುಚ್ಚಾರ

ನನಗೆ ಹಾಸನ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಬೇಡ ಎಂದು ಹೈಕಮಾಂಡ್‌ಗೆ ಪತ್ರ ಬರೆದಿರುವುದಾಗಿ ಕೆಲವು ದಿನಗಳ ಹಿಂದೆಯೇ ಹೇಳಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಶನಿವಾರ ನಡೆದ ಹಾಸನದ ಕೆಡಿಪಿ ಸಭೆಯಲ್ಲೂ ಹಾಸನ ಉಸ್ತುವಾರಿ ಬೇಡ. ಉಸ್ತುವಾರಿ ಬೇಡ ಎಂದು ಬರೆದುಕೊಟ್ಟು ಒಂದೂವರೆ ತಿಂಗಳಾಗಿದೆ ಎಂದು ಹೇಳಿದರು. ಆಗ ಶಾಸಕ ಶಾಸಕ ಬಾಲಕೃಷ್ಣ ಮಾತನಾಡಿ, ನೀವೇ ಮುಂದುವರಿಯಬೇಕು, ನೀವಿದ್ದರೆ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.

Post a Comment

Previous Post Next Post