ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವವರಿಗೆ ಬಿಗ್ ಶಾಕ್: ನೀವು ಓದಲೇಬೇಕಾದ ಸ್ಟೋರಿ!


 ಗಳೂರು:- ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವವರಿಗೆ BWSSB ಬಿಗ್ ಶಾಕ್ ಕೊಟ್ಟಿದೆ.

 ಕಳೆದ ವರ್ಷ ಬೇಸಿಗೆಯಲ್ಲಿ ಬೆಂಗಳೂರಿಗರಿಗೆ ನೀರಿಗೆ ಹಾಹಾಕಾರ ಉಂಟಾಗಿತ್ತು. ಅದರಲ್ಲೂ ಅಪಾರ್ಟ್ಮೆಂಟ್​ ನಿವಾಸಿಗಳು ಅಕ್ಷರಶಃ ಪರದಾಡಿದ್ರು. ಟ್ಯಾಂಕರ್ ಮೂಲಕ ಜಲಮಂಡಳಿಯೇ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಿತ್ತು.

ಆದರೆ ಈ ಬಾರಿ ಜಲಮಂಡಳಿ ತನ್ನ ವರಸೆ ಬದಲಿಸಿದೆ.

ಅಪಾರ್ಟ್​ಮೆಂಟ್​​ಗಳು ಕೊಳವೆ ಬಾವಿ ಮೂಲಕ ನೀರಿನ ಅವಶ್ಯಕತೆ ಪೂರೈಕೆ ಮಾಡಿಕೊಳ್ತಿತ್ತು. ಆದರೆ ಬೆಂಗಳೂರಲ್ಲಿ ಅಂತರ್ಜಲ ಮಟ್ಟ ಇಳಿದು ಹೋಗಿದ್ದು, ಬೇಸಿಗೆ ಕಾಲದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಹೀಗಾಗಿ ಕಳೆದ ವರ್ಷ ಅಪಾರ್ಟ್ಮೆಂಟ್​ ನಿವಾಸಿಗಳು ನೀರಿಗಾಗಿ ಪರದಾಡಿದ್ರು. ಈ ಬಾರಿಯೂ ಅಂತಹ ವಾತಾವರಣ ನಿರ್ಮಾಣ ಆಗಲಿದ್ದು, ಜಲಮಂಡಳಿ ನೀರು ಪೂರೈಕೆಗಾಗಿ ಅಪಾರ್ಟ್ಮೆಂಟ್​ನಲ್ಲೂ ಕಾವೇರಿ ಕನೆಕ್ಷನ್ ಕಡ್ಡಾಯ ಎಂದಿದ್ದು, ಇಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡದಿರಲು ನಿರ್ಧರಿಸಿದೆ.

ಯಾವೆಲ್ಲಾ ಅಪಾರ್ಟ್​​ ಮೆಂಟ್ಗಳು ಇನ್ನು ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡಿಲ್ಲ ಅವರಿಗೆ ವೈಯುಕ್ತಿಕವಾಗಿಯೇ ಸಂಪರ್ಕ ಪಡೆದುಕೊಳ್ಳುವಂತೆ ಪತ್ರಗಳನ್ನು ನೀಡಿದ್ದೇವೆ. ಯಾರೆಲ್ಲಾ ಗ್ರೌಂಡ್​ ವಾಟರ್ ಅನ್ನು ಹೆಚ್ಚು ಬಳಕೆ ಮಾಡ್ತಿದ್ದಾರೆ ಅವರು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಲು ಅಗತ್ಯ ಕಾನೂನು ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸುತ್ತಿದ್ದೇವೆ ಎಂದು BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

Post a Comment

Previous Post Next Post