ಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ರಾಬರಿ ಮಾಡ್ತಾ ಇದ್ದ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿನಿಮಾ ಸ್ಟೈಲ್‌ನಲ್ಲಿ ಪಕ್ಕಾ ಪ್ಲಾನ್ ಮಾಡಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಹಣಕ್ಕೆ ಬೇಡಿಕೆ ಇಡ್ತಾ ಇದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳೇ ಇವರ ಟಾರ್ಗೆಟ್
ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಟಾರ್ಗೆಟ್ ಟಾರ್ಗೆಟ್ ಮಾಡಿ ರಾಬರಿ ಮಾಡುವ ಗ್ಯಾಂಗ್ ಒಂದು ಆಕ್ಟಿವ್ ಆಗಿತ್ತು. ಸಿನಿಮಾ ಸ್ಟೈಲ್‌ನಲ್ಲಿ ಸಿನಿಮಾ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಡ್ತಾ ಇದ್ದರು. ಮೊದಲು ಕೋಟಿ ಕುಳಗಳ ಬಗ್ಗೆ ಡಿಟೇಲ್ಸ್ ಸಂಗ್ರಹಿಸಿ, ಬಳಿಕ ಆ ವ್ಯಕ್ತಿ ಬಳಸುವ ವಾಹನಗಳಿಗೆ ಮಿನಿ ಮ್ಯಾಗ್ನಟಿಕ್ ಜಿಪಿಎಸ್ ಆಳವಡಿಸಿ ಟ್ರ್ಯಾಕ್ ಮಾಡಿ ಜಿಪಿಎಸ್ ಲೋಕೇಷನ್ ಮೂಲಕ ಕಾರನ್ನು ಹಿಂಬಾಲಿಸುತ್ತಿದ್ದರು.
ಮ್ಯಾಗ್ನಟಿಕ್ ಜಿಪಿಎಸ್ ಆಳವಡಿಸಿ ಕೃತ್ಯ
ಟೆಕ್ನಿಕಲಿ ಅಡ್ವಾನ್ಸ್ಡ್ ಆಗಿದ್ದ ಕಿಡ್ನಾಪರ್ಸ್‌ಗಳು, ಪಕ್ಕಾ ಪ್ಲಾನ್ ಮಾಡಿ ಕಿಡ್ನಾಪ್ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಇಗ್ಗಲೂರಿನ ಮುರಳಿ, ಮದನ್, ಲಕ್ಷ್ಮೀ ನಾರಾಯಣ ಮತ್ತು ಸೈಯದ್ ಜಾಫರ್ ಬಂಧಿತ ಆರೋಪಿಗಳಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಜಲಂದರ ಎಂಬುವವರು ನೀಡಿದ್ದ ದೂರು ಆಧರಿಸಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗ್ಯಾಂಗ್ ಹಿಸ್ಟರಿ ಕೇಳಿ ಬೆಚ್ಚಿ ಬಿದ್ದ ಪೊಲೀಸರು
ಇವರರು ಮೋಸ್ಟ್ ನಟೋರಿಯಸ್ ಗ್ಯಾಂಗ್ ಆಗಿದ್ದು, ಇವರು ನಡೆಸುತ್ತಿದ್ದ ಕೃತ್ಯದ ಕುರಿತು ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಕೊಲೆ, ಕೊಲೆ ಯತ್ನ, ಕಿಡ್ನಾಪ್ ಮತ್ತು ರಾಬರಿ ಪ್ರಕರಣಗಳಲ್ಲಿ ಈ ಆರೋಪಿಗಳು ಪೊಲೀಸರಿಗೆ ಬೇಕಾಗಿತ್ತು.
ಕೋಟಿ ಕುಳಗಳ ಬೇಟೆ ಹೇಗೆ!
ಹಣ ಲೂಟಿಗೆ ಬೇಟೆಯಾಡುವ ವ್ಯಕ್ತಿಗಳ ಬಗ್ಗೆ ಈ ಗ್ಯಾಂಗ್ ಮೊದಲೇ ಮಾಹಿತಿ ಸಂಗ್ರಹ ಮಾಡುತ್ತಿತ್ತು. ಬಳಿಕ ಕೋಟಿ ಕುಳಗಳು ಬಳಸುವ ವಾಹನಗಳಿಗೆ ಮಿನಿ ಮ್ಯಾಗ್ನೆಟಿಕ್ ಜಿಪಿಎಸ್ ಅಳವಡಿಕೆ ಮಾಡುತ್ತಿದ್ದರು. ಕನಿಷ್ಠ ಹದಿನೈದು ದಿನ ಆ ವ್ಯಕ್ತಿಯ ಚಲನವಲನದ ಬಗ್ಗೆ ವಾಚ್ ಮಾಡಿ ಅಂತಿಮವಾಗಿ ಸಮಯ ನೋಡಿ ಸಿನಿಮಾ ಸ್ಟೈಲ್ ನಲ್ಲಿ ಇಡೀ ಗ್ಯಾಂಗ್ ದಾಳಿ ಮಾಡುತ್ತಿತ್ತು, ಕಾರು ಸಮೇತ ಕಿಡ್ಯಾಪ್ ಮಾಡಿ ಬಳಿಕ ಹಲ್ಲೆ ಮಾಡಿ ಮಾರಕಾಸ್ತ್ರಗಳಿಂದ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಹಣ ಕೊಡದಿದ್ದರೆ ಕೃಷ್ಣಗಿರಿ ಕಾಡಿಗೆ ಶಿಫ್ಟ್
ಒಂದು ವೇಳೆ ಹಣ ನೀಡಲು ಒಪ್ಪದಿದ್ದರೆ ವ್ಯಕ್ತಿಗಳನ್ನು ಕೃಷ್ಣಗಿರಿ ಕಾಡಿಗೆ ಶಿಫ್ಟ್ ಮಾಡುತ್ತಿದ್ದರು. ಇದೇ ರೀತಿ ಉದ್ಯಮಿ ಜಲಂದರ ಕೂಡ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಕಿಡ್ನಾಪ್ ಆಗಿದ್ದರು. ಉದ್ಯಮಿ ಜಲಂದರ್ ಅವರಿಂದ ಬರೋಬ್ಬರಿ 30 ಲಕ್ಷ ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಆದ್ರೆ ಇತ್ತೀಚೆಗೆ ಮತ್ತೆ ಕಾರಿಗೆ ಜಿಪಿಎಸ್ ಅಳವಡಿಕೆ ಮಾಡಿ, ಕಾರ್ ವಾಶ್ ಮಾಡುವ ವೇಳೆ ಜಿಪಿಎಸ್ ಪತ್ತೆಯಾದ ಹಿನ್ನೆಲೆ ಉದ್ಯಮಿ ದೂರು ನೀಡಿದ್ದರು. ದೂರು ಆಧರಿಸಿದ ಪೊಲೀಸರು ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.

Post a Comment