ಗಳೂರು : ಹಾರ್ಟ್ ಬ್ಲಾಕ್ ಎನುವುದು ಸಾಮಾನ್ಯವಾಗಿ ಮೂರು ಹಂತಗಳಲ್ಲಿ ಆಗುತ್ತದೆ. ಮೊದಲ ಹಂತದಲ್ಲಿ ಹೆಚ್ಚು ಸಮಸ್ಯೆಯಾಗುವುದಿಲ್ಲ. ಆದರೆ, ಮೂರನೇ ಹಂತದಲ್ಲಿ ಪ್ರಾಣ ಕಳೆದುಕೊಳ್ಳುವ ಅಪಾಯ ಇರುತ್ತದೆ. ಹಾರ್ಟ್ ಬ್ಲೋಕೆಜ್ ಎಂದರೆ ಹೃದಯಾಘಾತದ ಅಪಾಯ. ಹೃದಯದ ಅಪ್ಪರ್ ಚೇಂಬರ್ ನಿಂದ ವಿದ್ಯುತ್ ಸಂಕೇತಗಳು ಹೃದಯದ ಕೆಳಗಿನ ಚೇಂಬರ್ ಗೆ ಸರಿಯಾಗಿ ತಲುಪದಿದ್ದಾಗ ಹಾರ್ಟ್ ಬ್ಲಾಕ್ ಆಗುತ್ತದೆ.
ಹಾರ್ಟ್ ನಲ್ಲಿ ಬ್ಲೋಕೆಜ್ ಇದ್ದಾಗ ನಮ್ಮ ದೇಹ ನಮಗೆ ಅನೇಕ ರೀತಿಯಲ್ಲಿ ಮುನ್ಸೂಚನೆ ನೀಡುತ್ತದೆ.
ಉಸಿರಾಟದ ಸಮಸ್ಯೆ :
ಕೆಲವೊಮ್ಮೆ ಪದೇ ಪದೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಉಸಿರಾಟ ಪ್ರಕ್ರಿಯೆ ಬಹಳ ಕಷ್ಟಕರವಾಗಿರುತ್ತದೆ. ಹೀಗಾಗುತ್ತಿದ್ದಾಗ ನಿಮಗೆ ನೀವೇ ಕಾರಣ ಕೊಟ್ಟು ಕೊಳುವ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಮೂರ್ಛೆ ಹೋಗುವುದು :
ಪದೇ ಪದೇ ಮೂರ್ಛೆ ಹೋಗುತ್ತಿದ್ದರೆ, ಅದು ಹೃದಯದಲ್ಲಿ ಬ್ಲೋಕೆಜ್ ಇರುವ ಸಂಕೇತವಾಗಿರಬಹುದು. ಹೃದಯಾಘಾತವಾದಾಗಲೂ ಈ ಸಂಕೇತ ಕಂಡು ಬರುತ್ತದೆ.ಇದರೊಂದಿಗೆ,ನಿಮ್ಮ ಹೃದಯ ಬಡಿತಡ ವೇಗ ವಿಪರೀತ ಹೆಚ್ಚಾಗುತ್ತದೆ.ಈ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಎದೆ ನೋವು :
ಹೃದಯದಲ್ಲಿ ಬ್ಲೋಕೆಜ್ ಇದ್ದರೆ ಎದೆ ನೋವು ಕಾಣಿಸಿಕೊಳ್ಳುತ್ತದೆ.ಹೆಚ್ಚಿನವರು ಈ ಲಕ್ಷಣವನ್ನು ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ, ಈ ಸಮಸ್ಯೆ ದೀರ್ಘಕಾಲದವರೆಗೆ ಕಾಡುತ್ತಿದ್ದರೆ ಸ್ಥಿತಿ ಹದಗೆಡಬಹುದು. ಹಾಗಾಗಿ ಎದೆ ಮತ್ತು ಸುತ್ತ ಮುತ್ತ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ.
ಮಹಾಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ ನಟ ಪ್ರಕಾಶ್ ರಾಜ್! ಸೋಶಿಯಲ್ ಮೀಡಿಯಾದಲ್ಲಿ ಶಾಕಿಂಗ್ ಫೋಟೋ ವೈರಲ್!!
ತಲೆಸುತ್ತುವುದು :
ಯಾವುದೇ ಕಾರಣವಿಲ್ಲದೆ ಆಗಾಗ ತಲೆಸುತ್ತುತ್ತಿದ್ದರೆ ಅದು ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ.ಇಂತಹ ಚಿಹ್ನೆಗಳು ಸಾಮಾನ್ಯವಾಗಿ ಅನೇಕ ಸಾಮಾನ್ಯ ಸಂದರ್ಭಗಳಲ್ಲಿ ಸಂಭವಿಸುತ್ತವೆ. ಹಾಗಂತ ತಲೆ ಸುತ್ತು ಹಾರ್ಟ್ ಬ್ಲಾಕೆಜ್ ಇದ್ದಾಗ ಮಾತ್ರ ಆಗುತ್ತದೆ ಎಂದು ಕೂಡಾ ಅಲ್ಲ.
ವಾಕರಿಕೆ :
ಯಾವುದೇ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದು ಕೂಡಾ ಹೃದಯದ ಬ್ಲೋಕೆಜ್ ಅನ್ನು ಸೂಚಿಸುತ್ತದೆ. ಜನರು ಸಾಮಾನ್ಯವಾಗಿ ಇಂಥಹ ಚಿಹ್ನೆಗಳ ಬಗ್ಗೆ ನಿರ್ಲಕ್ಷ್ಯ ತೋರಿ ಬಿಡುತ್ತಾರೆ. ನಿಮ್ಮ ದೇಹದಲ್ಲಿಯೂ ಇಂಥಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ತಜ್ಞರ ಸಲಹೆ ಪಡೆಯಿರಿ.
(ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳು ಮತ್ತು ಸಲಹೆಗಳನ್ನು ಕಾರ್ಯಗತಗೊಳಿಸುವ ಮೊದಲು, ದಯವಿಟ್ಟು ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು publicvahini News ಖಚಿತಪಡಿಸಿಕೊಳ್ಳುವುದಿಲ್ಲ.)

Post a Comment