Manmohan Singh: ಮನಮೋಹನ್ ಸಿಂಗ್​​ಗೆ ಮರಣೋತ್ತರ ಭಾರತ ರತ್ನಕ್ಕೆ ಮನವಿ: ತೆಲಂಗಾಣ ವಿಧಾನಸಭೆಯಿಂದ ನಿರ್ಣಯ


 ಮನಮೋಹನ್ ಸಿಂಗ್​​ಗೆ ಭಾರತ ರತ್ನ ನೀಡುವಂತೆ ತೆಲಂಗಾಣ ವಿಧಾನಸಭೆಯಿಂದ ನಿರ್ಣಯ

 ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಎಮ್‌ಎನ್‌ಆರ್‌ಇಜಿಎ ಮುಂತಾದ ಕಾರಣಗಳಿಗಾಗಿ ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡಬೇಕೆಂದು ತೆಲಂಗಾಣ ವಿಧಾನಸಭೆ ಆಗ್ರಹಿಸಿರುವುದು ಸೂಕ್ತ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸುಭರಂಶ್ ಕುಮಾರ್ ರೈ ಹೇಳಿದ್ದಾರೆ.

ಹೈದರಾಬಾದ್: ಮಾಜಿ ಪ್ರಧಾನಿ (Former PM) ಪದ್ಮವಿಭೂಷಣ (Padma Vibhushan) ಡಾ. ಮನಮೋಹನ್ ಸಿಂಗ್ (Manmohan Singh) ಅವರಿಗೆ ಮರಣೋತ್ತರವಾಗಿ ಭಾರತ ರತ್ನ (Bharat Ratna) ನೀಡಬೇಕೆಂದು ತೆಲಂಗಾಣ ವಿಧಾನಸಭೆಯಲ್ಲಿ (Telangana Legislative Assembly) ನಿರ್ಣಯ ಅಂಗಿಕರಿಸಲಾಗಿದೆ. ಕೇಂದ್ರ ಸರ್ಕಾರವು ಮಾಜಿ ಪ್ರಧಾನಿಗೆ ಭಾರತ ರತ್ನ ನೀಡ ಬೇಕಂಬ ಕಾಂಗ್ರೆಸ್​ ನಾಯಕರ ಆಗ್ರಹದ ನಡುವೆ ತೆಲಂಗಾಣ ಸರ್ಕಾರದಿಂದ ಈ ನಿರ್ಣಯ ಅಂಗಿಕಾರವಾಗಿದ್ದು, ರಾಜ್ಯಸಭೆಯ (Rajya Sabha) ಕಾಂಗ್ರೆಸ್ ಪಕ್ಷದ (Congress Party) ಉಪನಾಯಕ (Deputy Leader) ಪ್ರಮೋದ್ ತಿವಾರಿ (Pramod Tiwari) ಅವರು ಮಾತನಾಡಿ, “ತೆಲಂಗಾಣ ರಾಜ್ಯದ ನಿರ್ಣಯವನ್ನು ಅಂಗೀಕರಿಸುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಮನಮೋಹನ ಜೀ ನಮ್ಮ ದೇಶದ ಮಹಾನ್ ನಾಯಕರಾಗಿದ್ದು, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು” ಎಂದರು.

ಈ ವೇಳೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶುಭರಂಶ್ ಕುಮಾರ್ ರೈ ಮಾತನಾಡಿ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಎಮ್‌ಎನ್‌ಆರ್‌ಇಜಿಎ ಮುಂತಾದ ಕಾರಣಗಳಿಗಾಗಿ ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡಬೇಕೆಂದು ತೆಲಂಗಾಣ ವಿಧಾನಸಭೆ ಒತ್ತಾಯಿಸಿದ್ದು ಸೂಕ್ತವಾಗಿದ್ದು, ದೇಶದ ಅತ್ಯುನ್ನತ ಗೌರವ ಅವರಿಗೆ ಸಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಆರೋಪ; ಕಾಂಗ್ರೆಸ್​ ನಿಂದ ನಿರ್ಣಯ ಅಂಗಿಕಾರ

2013 ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡುವಂತೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಡಿದ ಶಿಫಾರಸಿಗೆ ಪಕ್ಷವು ಪ್ರತಿಕ್ರಿಯಿಸಲಿಲ್ಲ ಎಂದು ಕಾಂಗ್ರೆಸ್ ಸಂಸದೀಯ ಸಮಿತಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಆರೋಪ ಮಾಡಿದ ತರುವಾಯು ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿರುವ ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯವಾಗಿದೆ.

ನಿರ್ಣಯ ಅಂಗೀಕರಿಸುವ ಮೊದಲು, ಸೋನಿಯಾ ಗಾಂಧಿ ಅವರನ್ನು ಕೇಳಿದ್ದಿರಾ: ಬಿಜೆಪಿ ಟಾಂಗ್​

ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, “ಮಾಜಿ ಪ್ರಧಾನಿ ಅವರಿಗೆ ಭಾರತ ರತ್ನ ನೀಡುವಂತೆ ವಿಧಾನಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸುವ ಮೊದಲು, ರೆಡ್ಡಿ ಅವರು ಸೋನಿಯಾ ಗಾಂಧಿ ಅವರನ್ನು ಕೇಳಬೇಕು ಎಂದರು. ಶರ್ಮಿಷ್ಠಾ ಮುಖರ್ಜಿ ಅವರು ಬಹಿರಂಗಪಡಿಸಿದಂತೆ, ಇದೇ ರೀತಿಯ ಪ್ರಸ್ತಾಪವನ್ನು ಪ್ರಣಬ್ ಅವರ ವಿಷಯದಲ್ಲಿ ಕೇಳಿದಾಗ ಡಾ. ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಪುಲೋಕ್ ಚಟರ್ಜಿ ಅವರು ಮನವಿಯನ್ನು ಯಾಕೆ ಕಳುಹಿಸಲಿಲ್ಲ. ಇದು ಸರಿಯಾದ ವಿಧಾನನಾ? ಎಂದು ಪ್ರಶ್ನಿಸಿರುವ ಅವರು ನೆಹರೂ-ಗಾಂಧಿ ಕುಂಟುಂಬದ ಹೊರತು ಯಾವುದೇ ಪ್ರಧಾನಿಯಾದರೂ ಅಸುರಕ್ಷಿತವಾಗಿದ್ದಾರೆ ಎಂದರು. 2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಅವರು 26 ಡಿಸೆಂಬರ್ 2024 ರಂದು ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡರ ನಂತರ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಗುರುವಾರ ದೆಹಲಿಯ ಏಮ್ಸ್‌ನಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಶನಿವಾರ ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು.

ಆರ್ಥಿಕ ಸುಧಾರಣೆಗೆ ನಾಂದಿ

1991ರಲ್ಲಿ ಸಿಂಗ್ ಅವರು ಹಣಕಾಸು ಸಚಿವಾಲಯದ ಅಧಿಕಾರವನ್ನು ವಹಿಸಿಕೊಂಡಾಗ, ಭಾರತದ ವಿತ್ತೀಯ ಕೊರತೆಯು GDP ಯ 8.5 ಪ್ರತಿಶತದ ಸಮೀಪದಲ್ಲಿತ್ತು, ಪಾವತಿಗಳ ಸಮತೋಲನದ ಕೊರತೆಯು ದೊಡ್ಡದಾಗಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು GDP ಯ 3.5 ಪ್ರತಿಶತದ ಸಮೀಪದಲ್ಲಿತ್ತು. ವಿಷಯಗಳನ್ನು ಇನ್ನಷ್ಟು ಹದಗೆಡಿಸಲು, ವಿದೇಶಿ ಮೀಸಲು ಎರಡು ವಾರಗಳ ಆಮದುಗಳಿಗೆ ಪಾವತಿಸಲು ಸಾಕಾಗಿತ್ತು, ಇದು ಭಾರತೀಯ ಆರ್ಥಿಕತೆಯು ಆಳವಾದ ಬಿಕ್ಕಟ್ಟಿನಲ್ಲಿದೆ ಎಂದು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಸಿಂಗ್ ಅವರು ಮಂಡಿಸಿದ ಕೇಂದ್ರ ಬಜೆಟ್ 1991-92 ಮೂಲಕ ಹೊಸ ಆರ್ಥಿಕ ಯುಗವನ್ನು ತರಲಾಯಿತು.

 ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಇದು ಒಂದು ಮಹತ್ವದ ತಿರುವು, ಇದು ದಿಟ್ಟ ಆರ್ಥಿಕ ಸುಧಾರಣೆಗಳು, ಪರವಾನಗಿ ರಾಜ್ ರದ್ದತಿ ಮತ್ತು ಖಾಸಗಿ ಮತ್ತು ವಿದೇಶಿ ಬಂಡವಾಳ ಹರಿದುಬರಲು ಅನೇಕ ಕ್ಷೇತ್ರಗಳನ್ನು ತೆರೆಯಲು ಸಾಕ್ಷಿಯಾಗಿದೆ. ವಿದೇಶಿ ನೇರ ಹೂಡಿಕೆ (ಎಫ್‌ಡಿಐ), ರೂಪಾಯಿ ಅಪಮೌಲ್ಯೀಕರಣ, ತೆರಿಗೆಗಳಲ್ಲಿ ಮಿತಗೊಳಿಸುವಿಕೆ ಮತ್ತು ಸಾರ್ವಜನಿಕ ವಲಯದ ಕಂಪನಿಗಳ ಖಾಸಗೀಕರಣಕ್ಕೆ ಅವಕಾಶ ನೀಡಿದ ಹೊಸ ಆರ್ಥಿಕ ನೀತಿ ಮಾರ್ಗ. ಆರ್ಥಿಕ ಸುಧಾರಣೆಗಳ ಸಮಗ್ರ ನೀತಿಯನ್ನು ಪರಿಚಯಿಸುವಲ್ಲಿ ಅವರ ಪಾತ್ರವು ಈಗ ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ.

Post a Comment

Previous Post Next Post