ಅಮಿತ್ ಶಾ-ವಿಜಯೇಂದ್ರ
ದೆಹಲಿಯಲ್ಲಿ ಇಂದು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು, ರೆಬೆಲ್ ಗಳ ಪ್ರತ್ಯೇಕ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.
ದೆಹಲಿ: ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ಮುಂದುವರೆದಿದೆ. ಹೈಕಮಾಂಡ್ (BJP Highcomand) ನೋಟಿಸ್ (Notice) ಬಳಿಕವೂ ಕೂಡ ಯತ್ನಾಳ್ (Yatnal) ಬಣದ ಸದಸ್ಯರು ನೇರವಾಗಿಯೇ ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಿವೈ ವಿಜಯೇಂದ್ರ ಅವರು ಕೇಂದ್ರದ ಬಿಜೆಪಿ ನಾಯಕರಾದ ಅಮಿತ್ ಶಾ ಅವರನ್ನು ಭೇಟಿಯಾಗಿ ಪಕ್ಷದ ಆಂತರಿಕ ಕಲಹದ ಕುರಿತು ಚರ್ಚಿಸಿದ್ದಾರೆ.
ಅಮಿತ್ ಶಾ ಭೇಟಿಯಾದ ಬಿವೈವಿ
ದೆಹಲಿ ಪ್ರವಾಸದಲ್ಲಿರುವ ಬಿವೈ ವಿಜಯೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಳಿಕ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಗೆ ಪ್ರಯತ್ನಿಸಿದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ವಿಜಯೇಂದ್ರ ಅವರ ಭೇಟಿಗೆ ಇಂದು ಸಮಯ ನೀಡಿದ್ದರು. ಇಂದು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು, ರೆಬೆಲ್ ಗಳ ಪ್ರತ್ಯೇಕ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.
ರೆಬಲ್ಸ್ ಟೀಂ ಹೋರಾಟದ ಕುರಿತು ಚರ್ಚೆ
ರೆಬೆಲ್ ಟೀಮ್ ನ ಎರಡನೇ ಹಂತದ ಪ್ರತ್ಯೇಕ ಹೋರಾಟದ ಬಗ್ಗೆಯೂ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ. ಜನವರಿ 4 ರಿಂದ ಬಳ್ಳಾರಿಯಿಂದ ಪ್ರತ್ಯೇಕ ವಕ್ಪ್ ಹೋರಾಟಕ್ಕೆ ಕಾರ್ಯತಂತ್ರ ರೂಪಿಸಿರುವ ಯತ್ನಾಳ್ ಟೀಮ್, ಪಕ್ಷದ ಚೌಕಟ್ಟಿನೊಳಗೆ ಮಾಡದೇ, ತಮ್ಮ ಸ್ವ ಹಿತಾಸಕ್ತಿಗೆ ಮಾಡ್ತಿದ್ದಾರೆಂದು ದೂರು ನೀಡಿದ್ದಾರೆ. ಜೊತೆಗೆ ಸರ್ಕಾರದ ಸಚಿವರ ಮೇಲಿನ ಭ್ರಷ್ಟಾಚಾರ ಆರೋಪಗಳ ವಿರುದ್ಧ ಹೋರಾಟ ಮಾಡಬೇಕಿದೆ. ಆದ್ರೆ, ಇದಕ್ಕೆಲ್ಲ ರೆಬೆಲ್ ನಾಯಕರುಗಳು ಹಾಗೂ ಕೆಲ ಹಿರಿಯ ನಾಯಕರು ಸಹಕಾರ ಕೊಡ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ.
ನೀವು ನಿಮ್ಮ ಕೆಲಸ ಮಾಡಿ ಎಂದ ಅಮಿತ್ ಶಾ!
ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡ ಅಮಿತ್ ಶಾ ಅವರು, ಅಂತಿಮವಾಗಿ ನೀವು ನಿಮ್ಮ ಕೆಲಸ ಮಾಡಿ ಎಂದು ಅಮಿತ್ ಶಾ ಅವರು ಸಲಹೆ ನೀಡಿದ್ದಾರೆ. ಇನ್ನೂ ಜನವರಿ ಅಂತ್ಯದ ವೇಳೆಗೆ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದ್ದ ನಡುವೆ ಅಮಿತ್ ಶಾ ಹಾಗೂ ವಿಜಯೇಂದ್ರ ಭೇಟಿ ಮಹತ್ವ ಎನಿಸಿಕೊಂಡಿದೆ.
ಯತ್ನಾಳ್ ಅಂಡ್ ಟೀಂಗೆ ಸಂದೇಶ ಮುಟ್ಟಿಸಿದ್ರಾ ಬಿವೈವಿ?
ಇನ್ನೂ ಮೋದಿ, ಅಮಿತ್ ಶಾ ಭೇಟಿ ಮೂಲಕ ವಿರೋಧಿಗಳಿಗೂ ಬಿವೈ ವಿಜಯೇಂದ್ರ ಖಡಕ್ ಸಂದೇಶ ರವಾನಿಸಿದ್ದಾರೆ. ನೀವು ಏನೇ ಮಾಡಿದ್ರು ರಾಷ್ಟ್ರೀಯ ನಾಯಕರು ನನ್ನ ಜೊತೆ ಇದ್ದಾರೆಂಬ ಸಂದೇಶ ನೀಡಿದ್ದಾರೆ. ಇನ್ನೊಂದೆಡೆ ರೆಬೆಲ್ ನಾಯಕರುಗಳು ಮೋದಿ ಹಾಗೂ ಅಮಿತ್ ಶಾ ಅವರ ಭೇಟಿಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ.

Post a Comment