Siddaramaiah: ಸಿದ್ದರಾಮಯ್ಯ & ಟೀಂಗೆ ಡಿಕೆಶಿ ಚೆಕ್‌ಮೆಟ್‌! ಸ್ವಾಭಿಮಾನಿ ಸಮಾವೇಶಕ್ಕೆ ಡಿಸಿಎಂ ಎಂಟ್ರಿ; ಸಿಎಂ ಆಪ್ತರೆಲ್ಲಾ ಸೈಲೆಂಟ್!


ಸಿದ್ದರಾಮಯ್ಯ ಮತ್ತೊಮ್ಮೆ ಅಹಿಂದ ನಾಯಕರಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಆದ್ರೆ ಮುಖ್ಯಮಂತ್ರಿಯಾಗಿ ಅಹಿಂದ ನಾಯಕ ಅಂತ ಬಿಂಬಿಸಿಕೊಳ್ಳೋದಕ್ಕೆ ಪಕ್ಷದ ವೇದಿಕೆಯಿಂದ ಅವಕಾಶ ಸಿಕ್ಕಿಲ್ಲ. ಸಿದ್ದರಾಮಯ್ಯ ಒಬ್ಬರಿಗೆ ಕ್ರೆಡಿಟ್‌‌‌ ಸಲ್ಲಬೇಕು ಅನ್ನೋ ಅಹಿಂದ ವರ್ಗದ ಕನಸಿಗೆ ಡಿ.ಕೆ.ಶಿವಕುಮಾರ್‌ ಪಕ್ಷ ನಿಷ್ಠೆ ಅನ್ನೋ ಚೆಕ್‌ಮೆಟ್‌ ಇಟ್ಟಿದ್ದು ಮಾತ್ರ ಅಚ್ಚರಿ ಮೂಡಿಸಿದೆ.

ಹಾಸನ: ಸ್ವಾಭಿಮಾನಿ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಇದೀಗ ಕೊಂಚ ಹಿನ್ನಡೆಯಾಗಿದೆ. ಅಹಿಂದ (Ahinda) ಐಡಿಯಾ ಇಟ್ಕೊಂಡು ಮತ್ತೆ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಿಸಲು ಅವರ ಆಪ್ತವಲಯ ಮುಂದಾಗಿತ್ತು. ಆದರೆ ಇದೀಗ ಹೈಕಮಾಂಡ್ (High Command) ಅದಕ್ಕೆ ಬ್ರೇಕ್ ಹಾಕಿ, ಪಕ್ಷದ ವೇದಿಕೆ ಮೂಲಕ ಸಮಾವೇಶ ಮಾಡ್ಬೇಕು ಎಂದು ಹೇಳಿದೆ. ಇದೀಗ ಪಕ್ಷದ ರಾಜ್ಯ ಅಧ್ಯಕ್ ಡಿಕೆ ಶಿವಕುಮಾರ್ (DK Shivakumar) ಅವರು ಈ ಅಹಿಂದ ಸಮಾವೇಶದ ಸ್ವರೂಪವನ್ನೇ ಬದಲಾಯಿಸಿ, ಪಕ್ಷದ ಕಾರ್ಯಕ್ರಮವಾಗಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ & ಟೀಂಗೆ ಡಿಕೆ ಶಿವಕುಮಾರ್ ಚೆಕ್‌ಮೆಟ್‌ ಇಟ್ಟಿದ್ದಾರೆ.

ಹಾಸನದಲ್ಲಿ ಡಿಸೆಂಬರ್‌ 5ಕ್ಕೆ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ವಾರದ ಹಿಂದೆ ಹೆಚ್‌ಸಿ ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ಕೆ.ಎನ್‌.ರಾಜಣ್ಣ ಅವರು ಹಾಸನಕ್ಕೆ ಹೋಗಿದ್ದರು ಈ ವೇಳೆ ಇದು ಅಹಿಂದ ಸಮಾವೇಶದ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದರು. ಸ್ವಾಭಿಮಾನಿ ಸಮಾವೇಶದ ಹೆಸರಲ್ಲಿ ಸಿದ್ದರಾಮಯ್ಯರನ್ನ ಅಹಿಂದ ನಾಯಕ ಅಂತ ವೈಯಕ್ತಿಕವಾಗಿ ಬಿಂಬಿಸೋ ಪ್ರಯತ್ನನೂ ಮಾಡಿದ್ರು. ಆದರೆ ಇವತ್ತು ಅಹಿಂದ ಸ್ವಾಭಿಮಾನಿ ಸಮಾವೇಶದ ರೂಪುರೇಷೆಯನ್ನೇ ಡಿ.ಕೆ.ಶಿವಕುಮಾರ್‌ ಬದಲಿಸಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಅಲ್ಲ

ಅಹಿಂದ ಸ್ವಾಭಿಮಾನಿ ಸಮಾವೇಶ ಆಗಬಾರದು.. ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲೇ ಸ್ವಾಭಿಮಾನಿ ಸಮಾವೇಶ ನಡೆಸ್ಬೇಕು. ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಅಲ್ಲ ಅಂತ ಮಾತಲ್ಲೇ ಸಿದ್ದರಾಮಯ್ಯ ಅಂಡ್‌ ಟೀಂಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿಕೆಶಿ ಚೆಕ್‌ಮೆಟ್‌ ಇಟ್ಟಿದ್ದಾರೆ.ಡಿಕೆಶಿ ಕರೆದ ಸಭೆಗೆ ಸಿದ್ದು ಆಪ್ತರೆಲ್ಲ ಗೈರು!

ಸಿದ್ದರಾಮೋತ್ಸವ 2.O ಆಗ್ಬೇಕಿದ್ದ ಸಮಾವೇಶ ಈಗ ಪಕ್ಷದ ಸಮಾವೇಶವಾಗಿ ಬದಲಾಗಿದೆ. ಇದೇ ವಿಷ್ಯದಲ್ಲಿ ಚರ್ಚೆ ಮಾಡೋಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿನ್ನೆ ಸಭೆ ಕರೆದಿದ್ರು. ಆದ್ರೆ ಸಭೆಗೆ ಸಚಿವ ಮಹದೇವಪ್ಪ ಬಂದ್ರು ಹೋದ್ರು. ಉಳಿದಂತೆ ಹಾಸನ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣನೂ ಬಂದಿರಲಿಲ್ಲ. ಸಚಿವ ಕೆ.ಜೆ.ಜಾರ್ಜ್‌ ಕೂಡ ಇರ್ಲಿಲ್ಲ. ಸಚಿವ ವೆಂಕಟೇಶ್‌‌ಕೂಡ ಕಾಣಿಸಲಿಲ್ಲ, ಸಮಾವೇಶ ವಿಚಾರವಾಗಿ ಅರ್ಜೆಂಟಾಗಿ ಸಭೆ ಕರೆದಿದ್ದು ಅಂತೇಳಿ ಡಿ.ಕೆ.ಶಿವಕುಮಾರ್‌‌ ಸುಮ್ಮನಾದರು.

ಅಹಿಂದ ಕಾರ್ಯಕ್ರಮದ ಹೆಸರು ಬದಲಿಸಿದ್ದ ಸಿದ್ದು ಆಪ್ತರು

ಉಪಚುನಾವಣೆ ಗೆಲ್ಲುತ್ತಿದ್ದಂತೆ ಶೋಷಿತ ಸಮುದಾಯಗಳ ಮುಖಂಡರು ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಆಮೇಲೆ ಸಿದ್ದರಾಮಯ್ಯ ಸಿಎಂ ಆಗಿರೋದ್ರಿಂದ ಸಮಸ್ಯೆ ಆಗಬಾರದು ಅಂತ ಸ್ವಾಭಿಮಾನಿ ಸಮಾವೇಶ ಅಂತ ಹೆಸರನ್ನ ಬದಲಿಸಿದ್ರು. ಇದರ ಹಿಂದೆ ಹಲವು ಲೆಕ್ಕಾಚಾರಗಳು ಇತ್ತು.

ಮುಡಾ ಕೇಸ್‌‌ನಿಂದ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌‌ ಮಾಡೋ ಪ್ಲ್ಯಾನ್ ಆಗಿತ್ತು

ಮುಡಾ ಕೇಸ್‌‌ನಿಂದ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌‌ ಆಗ್ಬೇಕು, ಸ್ವಪಕ್ಷದಲ್ಲೇ CM ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಶಕ್ತಿ ತೋರಿಸ್ಬೇಕು, ಅಹಿಂದ ಶಕ್ತಿ ಪ್ರದರ್ಶನ ಮಾಡಿ ವರಿಷ್ಠರಿಗೆ ಶಕ್ತಿ ಪ್ರದರ್ಶಿಸಬೇಕು, ದೆಹಲಿ BJPಯವರಿಗೂ ಸಿದ್ದು ಸಾಮರ್ಥ್ಯವನ್ನ ತೋರಿಸ್ಬೇಕು, ಗರ್ವಭಂಗ ಮಾಡ್ತೀನಿ ಅಂದಿದ್ದ ಗೌಡ್ರಿಗೂ ಸಂದೇಶ ರವಾನಿಸಬೇಕು ಎಂಬ ಪ್ಲ್ಯಾನ್ ನಲ್ಲಿ ಸಿದ್ದರಾಮಯ್ಯ ಟೀಂ ಇತ್ತು.

ಇದಕ್ಕೆಲ್ಲಾ ಕಾರಣ ಎಐಸಿಸಿ ಅಧ್ಯಕ್ಷರಿಗೆ ಬರೆದಿದ್ದ ಅನಾಮಧೇಯ ಪತ್ರನಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಸ್ವಾಭಿಮಾನಿ ಸಮಾವೇಶದ ಉದ್ದೇಶ ಏನಂತ ಪರೋಕ್ಷವಾಗಿ ಹೇಳಿದ್ದರು. ಆದ್ರೆ ಇದೀಗ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಕಾರ್ಯಕ್ರಮದ ಇಡೀ ಸ್ವರೂಪವನ್ನೇ ಬದಲಿಸಿದ್ದಾರೆ.

ಅಹಿಂದ ನಾಯಕರು, ಜಾತಿವಾರು ಸಮುದಾಯದ ಪ್ರಮುಖರು ಬರಲಿ, ಆದ್ರೆ ಇಡೀ ಸಮಾವೇಶ ಕಾಂಗ್ರೆಸ್‌ ಪಕ್ಷದ ಚಿಹ್ನೆಯಡಿ ನಡೆಸಬೇಕು ಎಂದು ಡಿಕೆಶಿ ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆಲ್ಲಾ ಕಾರಣ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದಿದ್ದ ಅನಾಮಧೇಯ ಪತ್ರನಾ? ಸ್ವಾಭಿಮಾನಿ ಸಮಾವೇಶವನ್ನ ಸಿದ್ದರಾಮಯ್ಯ ವೈಯಕ್ತಿಕ ಸಮಾವೇಶ ಮಾಡ್ತಿದ್ದಾರೆ ಅಂತ ಖರ್ಗೆಯವರಿಗೆ ಅನಾಮಧೇಯ ಪತ್ರ ಹೋಗಿತ್ತು. ಈ ಪತ್ರವನ್ನ ಖರ್ಗೆಯವರು ಗಂಭೀರವಾಗಿ ಪರಿಗಣಿಸಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ ಡಿ.ಕೆ.ಶಿವಕುಮಾರ್‌ ಗಂಭೀರವಾಗಿ ತಗೊಂಡಿದ್ರು. ಅದಕ್ಕೆ ಮೊನ್ನೆ ದೆಹಲಿಗೆ ಹೋಗಿದ್ದ ಡಿ.ಕೆ.ಶಿವಕುಮಾರ್‌‌ ಎಐಸಿಸಿ ನಾಯಕರಿಗೂ ವಿಷ್ಯ ಮುಟ್ಟಿಸಿದ್ರು.

[1ಡಿಕೆಶಿ ಚೆಕ್‌ಮೆಟ್‌ ಇಟ್ಟಿದ್ಯಾಕೆ?

1. ಕಾಂಗ್ರೆಸ್‌ ಪಕ್ಷದ ವರ್ಚಸ್ಸನ್ನ ಹೆಚ್ಚಿಸೋ ಉದ್ದೇಶ.

2. ಮುಂಬರುವ ಸ್ಥಳೀಯ ಸಂಸ್ಥೆ ಗೆಲ್ಲಿಸೋ ಉದ್ದೇಶ.

3. ಹಾಸನದಲ್ಲೂ ಕಾಂಗ್ರೆಸ್‌‌ ಶಕ್ತಿ ಹೆಚ್ಚಿಸುವ ಉದ್ದೇಶ.

4. ಸಿದ್ದು ಟೀಂ ವೇಗಕ್ಕೆ ಕಡಿವಾಣ ಹಾಕಿದಂತಾಗುತ್ತೆ.

5. ಪಕ್ಷಕ್ಕೆ, ಅಧ್ಯಕ್ಷ ಸ್ಥಾನಕ್ಕೂ ಗೌರವ ಸಿಕ್ಕಂತಾಗುತ್ತೆ.

6. ಕಾರ್ಯಕರ್ತರನ್ನೂ ಮತ್ತೆ ಗೌರವಿಸದಂತಾಗುತ್ತೆ.

ಇದೆಲ್ಲಾ ಲೆಕ್ಕಾಚಾರಗಳನ್ನ ಹಾಕೊಂಡೇ ಡಿ.ಕೆ.ಶಿವಕುಮಾರ್‌‌ ದಿಢೀರ್‌ ಅಂತಾ ಹಾಸನ ಸಿದ್ದರಾಮಯ್ಯ ಸಮಾವೇಶವನ್ನ ಪಕ್ಷದ ಕಾರ್ಯಕ್ರಮವನ್ನಾಗಿ ಬದಲಿಸಿದ್ದಾರೆ. ಬರೀ ಹಾಸನದಲ್ಲಷ್ಟೇ ಅಲ್ಲ.. ಇದೇ ತಿಂಗಳಲ್ಲೇ ಚನ್ನಪಟ್ಟಣದಲ್ಲೂ ಅಭಿನಂದನಾ ಸಮಾವೇಶ, ಶಿಗ್ಗಾವಿಯಲ್ಲೂ ಕಾಂಗ್ರೆಸ್‌ ಸಮಾವೇಶ ಆಯೋಜಿಸಲು ಸೂಚಿಸಿದ್ದಾರೆ.

ಸಿದ್ದರಾಮಯ್ಯ ಮತ್ತೊಮ್ಮೆ ಅಹಿಂದ ನಾಯಕರಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಆದ್ರೆ ಮುಖ್ಯಮಂತ್ರಿಯಾಗಿ ಅಹಿಂದ ನಾಯಕ ಅಂತ ಬಿಂಬಿಸಿಕೊಳ್ಳೋದಕ್ಕೆ ಪಕ್ಷದ ವೇದಿಕೆಯಿಂದ ಅವಕಾಶ ಸಿಕ್ಕಿಲ್ಲ. ಸಿದ್ದರಾಮಯ್ಯ ಒಬ್ಬರಿಗೆ ಕ್ರೆಡಿಟ್‌‌‌ ಸಲ್ಲಬೇಕು ಅನ್ನೋ ಅಹಿಂದ ವರ್ಗದ ಕನಸಿಗೆ ಡಿ.ಕೆ.ಶಿವಕುಮಾರ್‌ ಪಕ್ಷ ನಿಷ್ಠೆ ಅನ್ನೋ ಚೆಕ್‌ಮೆಟ್‌ ಇಟ್ಟಿದ್ದು ಮಾತ್ರ ಅಚ್ಚರಿ ಮೂಡಿಸಿದೆ.

Post a Comment

Previous Post Next Post