Pushpa 2 Tickets: ಬೆಂಗಳೂರೆಲ್ಲಾ 'ಪುಷ್ಪ'ಮಯ! ಇವ್ರನ್ನ ಹೇಳೋರು ಕೇಳೋರು ಯಾರು ಇಲ್ವಾ?


 ಪುಷ್ಪ 2

: ಕನ್ನಡದಲ್ಲಿ ಮರ್ಯಾದೆ ಪಶ್ನೆ, ಆರಾಮ್‌ ಅರವಿಂದ ಸ್ವಾಮಿ, ನಾ ನಿನ್ನ ಬಿಡಲಾರೆ ಎಂಬ ಸಿನಿಮಾಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಇಂಥ ಸಮಯದಲ್ಲಿ ಬೆಂಗಳೂರಿನಲ್ಲಿ ಇಷ್ಟು ಶೋಗಳು ಪುಷ್ಪ 2 ಗೆ ಕೊಟ್ಟಿದ್ದು ಅನ್ಯಾಯ ಅಲ್ಲದೇ ಮತ್ತೇನು?

 ಬೆಂಗಳೂರಿನಲ್ಲಷ್ಟೇ (Bengaluru) ಅಲ್ಲ, ಇಡೀ ಕರ್ನಾಟಕದಲ್ಲಿ (Karnataka) ಎಲ್ಲ ರೀತಿಯ ಜನರಿದ್ದಾರೆ. ತಮಿಳುನಾಡು (Tamil Nadu), ಆಂಧ್ರ (Andhra), ತೆಲಂಗಾಣ, (Telangana) ಕೇರಳ (Kerala) ಇಲ್ಲ ನಾರ್ತ್‌ ಇಂಡಿಯಾದಿಂದ ಬಂದು ಜನ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಈಗ್ಯಾಕೆ ಈ ಮ್ಯಾಟರ್‌ ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಅಲ್ಲು ಅರ್ಜುನ್‌ (Allu Arjun) ಅಭಿನಯದ ಪುಷ್ಪ (Pushpa) ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್‌ ಆಗಿತ್ತು. ಇದೀಗ ಪುಷ್ಪ 2 (Pushpa 2) ಸಿನಿಮಾ ರಿಲೀಸ್ ಆಗ್ತಿದೆ. ಸಂತೋಷದ ವಿಚಾರವೇ ಸರಿ. ನಮ್ಮ ಭಾರತದ ಸಿನಿಮಾ, ನಮ್ಮ ಸೌತ್ ಇಂಡಿಯಾದ ಸಿನಿಮಾ ಎಲ್ಲವನ್ನೂ ಒಪ್ಪಿಕೊಳ್ಳಬೇಕು.

 ಆದರೆ ಬೆಂಗಳೂರಿನಲ್ಲಿ ಪುಷ್ಪ 2 ಸಿನಿಮಾಗೆ ಸಿಕ್ಕಿರೋ ಸ್ಕ್ರೀನ್ಸ್‌, ಪುಷ್ಪ 2 ಸಿನಿಮಾ ಟಿಕೆಟ್‌ ಬೆಲೆ (Pushpa Ticket Price) ಕೇಳಿದ್ರೆ ನಿಜಕ್ಕೂ ಶಾಕ್‌ ಆಗದೇ ಇರದು. ನಮ್ಮ ಕನ್ನಡ ಸಿನಿಮಾಗಳಿಗೆ ಇರದಷ್ಟು ಟಿಕೆಟ್ ಬೆಲೆ ಪುಷ್ಪ 2 ಸಿನಿಮಾಗ್ಯಾಕೆ? ಅನ್ನೋ ಪ್ರಶ್ನೆ ಖಂಡಿತ ಬರುತ್ತೆ.

ಒಂದು ಟಿಕೆಟ್‌ ಬೆಲೆ 600 ರೂಪಾಯಿ!

ಪ್ರತಿ ಬಾರಿಯೂ ಪರಭಾಷೆಯ ದೊಡ್ಡ ಸಿನಿಮಾಗಳು ರಿಲೀಸ್ ಆದಾಗಲೂ ಬೆಂಗಳೂರಿನಲ್ಲಿ ನಮ್ಮ ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗುತ್ತಲೇ ಇದೆ. ಇದರ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿನೇ ಪುಷ್ಪ 2 ಸಿನಿಮಾ ತಂಡಕ್ಕೂ ಯಾರೂ ಹೇಳೋರು ಕೇಳೋರು ಇಲ್ಲ ಅನ್ನಿಸುತ್ತೆ. ಬೆಂಗಳೂರಿನಲ್ಲಿ ಬಹುತೇಕ ಸಿಂಗಲ್‌ ಸ್ಕ್ರೀನ್‌‌ಗಳಿಂದ ಹಿಡಿದು ಮಲ್ಟಿಪ್ಲೆಕ್ಸ್‌‌ಗಳಲ್ಲೂ ಪುಷ್ಪ 2 ಟಿಕೆಟ್ ಬೆಲೆ ಹೆಚ್ಚಿದೆ. ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರ, ಕಾಮಾಕ್ಯ ಅಂತ ಸಿಂಗಲ್‌ ಸ್ಕ್ರೀನ್‌ಗಳಲ್ಲೇ ಬೆಳಗ್ಗಿನ ಜಾವ 3:30ಕ್ಕೆ ಶೋ ಇಡಲಾಗಿದೆ.

ಮಧ್ಯರಾತ್ರಿ 3:30ಕ್ಕೆ ಶೋ ಯಾಕೆ?

ಅದೂ ಕೂಡ ಒಂದು ಟಿಕೆಟ್ ಬೆಲೆ 600 ರೂಪಾಯಿಂದ 1000 ರೂಪಾಯಿವರೆಗೂ ಇದೆ. ಇದನ್ನು ಯಾರು ಕೇಳೋದಿಲ್ವಾ? ನಮ್ಮ ಸ್ಟಾರ್‌ ಸಿನಿಮಾಗಳಿಗೆ ಬೆಳಗ್ಗಿನ ಜಾವ ಶೋಗಳು ಕೊಡೋದಿಲ್ಲ. ಫ್ಯಾನ್ಸ್‌ ಶೋನೇ ಹರಸಾಹಸ ಪಟ್ಟು ಪಡೆಯಬೇಕು. ಇದೆಲ್ಲದರ ನಡುವೆ ಪುಷ್ಪ 2 ಸಿನಿಮಾಗ್ಯಾಕೆ ಸ್ಪೆಷಲ್‌ ಟ್ರೀಟ್‌‌ಮೆಂಟ್‌ ಅಂತ ಜನ ಕೇಳುತ್ತಿದ್ದಾರೆ. ಎಲ್ಲಿಯವರೆಗೂ ಕನ್ನಡಿಗರು ಈ ಧೋರಣೆಯನ್ನು ಸಹಿಸಿಕೊಂಡು ಇರಬೇಕು ಅಂತ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.

ಇದು ಕೇವಲ ಒಂದು-ಎರಡು ಚಿತ್ರಮಂದಿರಗಳ ಕಥೆಯಲ್ಲಾ, ಎಲ್ಲಾ ಮಲ್ಟಿಪ್ಲೆಕ್ಸ್‌‌ಗಳಲ್ಲೂ ಬೆಳಗ್ಗೆ 6:30ಕ್ಕೆ ಮೊದಲ ಶೋ ಆರಂಭವಾಗಲಿದೆ. ಕನ್ನಡದಲ್ಲಿ ಮರ್ಯಾದೆ ಪಶ್ನೆ, ಆರಾಮ್‌ ಅರವಿಂದ ಸ್ವಾಮಿ, ನಾ ನಿನ್ನ ಬಿಡಲಾರೆ ಎಂಬ ಸಿನಿಮಾಗಳು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಇಂಥ ಸಮಯದಲ್ಲಿ ಬೆಂಗಳೂರಿನಲ್ಲಿ ಇಷ್ಟು ಶೋಗಳು ಪುಷ್ಪ 2 ಗೆ ಕೊಟ್ಟಿದ್ದು ಅನ್ಯಾಯ ಅಲ್ಲದೇ ಮತ್ತೇನು?

ಎಲ್ಲರೂ ಅಂತಲ್ಲ ಕೆಲವರು ಕನ್ನಡ ಸಿನಿಮಾಗಳನ್ನು 200 ರೂಪಾಯಿ ಕೊಟ್ಟು ನೋಡೋಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ಪರಭಾಷಿಗರ ಸಿನಿಮಾಗೆ 1000 ರೂಪಾಯಿ ಇದ್ರೂ ಓಕೆ ಅಂತಾರೆ. ಇದನ್ನೆಲ್ಲಾ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ವಾ? ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗೋದನ್ನು ತಡೆಯೋಕೆ ಯಾರು ಇಲ್ವಾ? ಇಂಥ ಸಮಯದಲ್ಲೇ ಎಲ್ಲ ಕನ್ನಡಿಗರು ಒಟ್ಟಾಗಿ ನಿಲ್ಲಬೇಕು. ಕನ್ನಡ ಸಿನಿಮಾಗಳಿಗೆ ಮೊದಲು ಪ್ರಾಮುಖ್ಯತೆ ಕೊಡಬೇಕು ಅನ್ನೋದು ಕನ್ನಡಿಗರ ವಾದ.

Post a Comment

Previous Post Next Post