ಘರ್ಷಣೆ
ಫುಟ್‌ಬಾಲ್ ಪಂದ್ಯದ ವೇಳೆ ರೆಫರಿ ನೀಡಿದ ವಿವಾದಿತ ತೀರ್ಪಿನಿಂದ ಘರ್ಷಣೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದ್ದು, ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಆಕ್ರಮಿಸಿದಾಗ ಘರ್ಷಣೆ ನಡೆದಿದೆ ಎಂದು ಸಾಕ್ಷಿಯೊಬ್ಬರು AFP ಗೆ ತಿಳಿಸಿದ್ದಾರೆ.
ನವದೆಹಲಿ: ಫುಟ್‌ಬಾಲ್ ಪಂದ್ಯವೊಂದರ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ ಕಾರಣ 100 ಕ್ಕೂ ಹೆಚ್ಚು ಮಂದಿ ಭೀಕರವಾಗಿ (Mass carnage) ಸಾವನ್ನಪ್ಪಿರುವ ಘಟನೆ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ (Football Match In Guinea) ನಡೆದಿದೆ.
ಭಾನುವಾರ ಈ ಘಟನೆ ಸಂಭವಿಸಿದ್ದು, ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ ನಂತರ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಶವಗಳು ಸಾಲುಗಟ್ಟಿದ ರೀತಿ ನೀಡಿ ಎಲ್ಲರ ಮನ ಕಲಕುವಂತೆ ಕಂಡು ಬಂದಿದೆ.
ಫುಟ್‌ಬಾಲ್ ಪಂದ್ಯದ ವೇಳೆ ರೆಫರಿ ನೀಡಿದ ವಿವಾದಿತ ತೀರ್ಪಿನಿಂದ ಘರ್ಷಣೆ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದ್ದು, ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಆಕ್ರಮಿಸಿದಾಗ ಘರ್ಷಣೆ ನಡೆದಿದೆ ಎಂದು ಸಾಕ್ಷಿಯೊಬ್ಬರು AFP ಗೆ ತಿಳಿಸಿದ್ದಾರೆ. 2021 ರ ದಂಗೆಯಲ್ಲಿ ಅಧಿಕಾರಕ್ಕೆ ಬಂದ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿ ಸಮಯದಲ್ಲಿ ಈ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯರೊಬ್ಬರು, ಆಸ್ಪತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರದಲ್ಲಿ ಶವಗಳ ಸಾಲುಗಳಿವೆ. ಇತರ ದೇಹಗಳು ಹಜಾರದಲ್ಲಿ ನೆಲದ ಮೇಲೆ ಬಿದ್ದಿವೆ, ಶವಾಗಾರ ತುಂಬಿದೆ. ಸುಮಾರು 100ಕ್ಕೂ ಮಂದಿ ಸತ್ತಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವೂ ರೆಫರಿಯವರ ವಿವಾದಾತ್ಮಕ ನಿರ್ಧಾರದಿಂದ ಪ್ರಾರಂಭವಾಯಿತು. ನಂತರ ಅಭಿಮಾನಿಗಳು ಕ್ರೀಡಾಂಗಣವನ್ನು ಆಕ್ರಮಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೋಗಳನ್ನು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಪಂದ್ಯದ ಹೊರಗೆ ಬೀದಿಯಲ್ಲಿ ಅವ್ಯವಸ್ಥೆಯ ದೃಶ್ಯಗಳು ಮತ್ತು ಹಲವಾರು ಮೃತ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಾಣುತ್ತಿವೆ. ಉದ್ರಿಕ್ತ ಫುಟ್ಬಾಲ್ ಪ್ರೇಕ್ಷಕರು ಎನ್ ಜೆರೆಕೋರ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಂದಹಾಗೆ ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಇಂತಹ ಪಂದ್ಯಾವಳಿಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಡೌಂಬೌಯಾ ಮುಂದಿನ ವರ್ಷ ನಡೆಯಲಿರುವ ನಿರೀಕ್ಷಿತ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಮೈತ್ರಿಗಳನ್ನು ರೂಪುಗೊಳ್ಳಿಸುವುದಕ್ಕೆ ಈ ಪಂದ್ಯಾವಳಿಯನ್ನು ಅಯೋಜಿಸಲಾಗಿತ್ತು ಎನ್ನಲಾಗಿದೆ.

Post a Comment