Health Care: ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!


 ಸಾಂದರ್ಭಿಕ ಚಿತ್ರ

ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ.

ಸಾಮಾನ್ಯವಾಗಿ ಜಂತು ಹುಳುಗಳ (Worm) ಸಮಸ್ಯೆ ಚಿಕ್ಕ ಮಗು (Baby) ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ (Children’s) ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲದೇ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ. ಇದರಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಿ ಕ್ರಮೇಣ ದೇಹದ ಎಲ್ಲಾ ಪೌಷ್ಟಿಕಾಂಶ (Protein) ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ನೈರ್ಮಲ್ಯದ ಕೊರತೆ. ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ. ಕೆಲವೊಂದು ಬಾರಿ ಡಬಲ್ ಡೋಸ್ ತೆಗೆದುಕೊಂಡರೂ ಅಷ್ಟೇನೂ ಪ್ರಯೋಜನ ಆಗುವುದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು ಅಂತ ತಲೆಕೆಡಿಸಿಕೊಂಡಿದ್ದರೆ, ಈ ಮನೆಮದ್ದನ್ನು ಟ್ರೈ ಮಾಡಿ. ಇದು ಜಂತು ಹುಳುಗಳ ಸಮಸ್ಯೆಯನ್ನು ತೊಡೆದು ಹಾಕುತ್ತದೆ.

ಜಂತು ಹುಳು ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದುಗಳು

ಸಾಮಾನ್ಯವಾಗಿ ಮಕ್ಕಳಾಗಲಿ ಅಥವಾ ದೊಡ್ಡವರಾಗಿರಲಿ, ಹೊಟ್ಟೆಯಲ್ಲಿ ಜಂತು ಹುಳುಗಳ ಸಮಸ್ಯೆ ಇದ್ದರೆ, ಜೀರ್ಣಕ್ರಿಯೆ ಸುಗಮವಾಗಿ ನಡೆಯುವುದಿಲ್ಲ. ಇವುಗಳ ಜೊತೆಗೆ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಮನೆಯಲ್ಲಿ ತರಕಾರಿಗಳನ್ನು ಬೇಯಿಸುವ ಮುನ್ನ ಜೀರಿಗೆಯೊಂದಿಗೆ ಬಾಣಲೆಯಲ್ಲಿ ಹುರಿದು, ನಂತರ ಬಿಸಿ ನೀರು ಮತ್ತು ಉಪ್ಪು ಹಾಕಿ ನೆನೆಸಿ. ಇದು ಹೊಟ್ಟೆಯಲ್ಲಿ ಚೆನ್ನಾಗಿ ಜೀರ್ಣವಾದರೆ ಹುಳುವಿನ ಸಮಸ್ಯೆ ಸುಲಭವಾಗಿ ದೂರವಾಗುತ್ತದೆ.

ತುಳಸಿ ಎಲೆಗಳನ್ನು ಕುದಿಸಿ ಅದರ ನೀರನ್ನು ಪಾನೀಯವಾಗಿ ಬಳಸಬಹುದು. ತುಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಾಣುಗಳನ್ನು ಕೊಲ್ಲುವ ಸಾಮಾರ್ಥ್ಯವನ್ನು ಹೊಂದಿದೆ. ಹೀಗಾಗಿ ಈ ಔಷಧವು ಹೊಟ್ಟೆಯಲ್ಲಿ ಹುಳುಗಳು ಮತ್ತು ಇತರ ಸಮಸ್ಯೆಗಳನ್ನು ಗುಣಪಡಿಸುತ್ತದೆ.

ಇವುಗಳ ಜೊತೆಗೆ ಲವಂಗವನ್ನು ತಿನ್ನುವುದರಿಂದಲೂ ಜಂತು ಹುಳುಗಳು ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ನಿವಾರಣೆ ಆಗುತ್ತದೆ. ಇದಕ್ಕಾಗಿ ಊಟದ ನಂತರ ಬೆಚ್ಚಗಿನ ನೀರಿನೊಂದಿಗೆ ಲವಂಗವನ್ನು ನುಂಗಿ. ಲವಂಗದಲ್ಲಿರುವ ಯುಜೆನಾಲ್ ಅಂಶವು ಹೊಟ್ಟೆಯಲ್ಲಿರುವ ಜಂತು ಹುಳುಗಳು ಮತ್ತು ಅವುಗಳ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಇದು ನಮ್ಮ ಹೊಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಅಸಿಡಿಟಿ, ಅನಗತ್ಯ ನೋವು ಮತ್ತು ಇತರ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಅರಿಶಿನದಲ್ಲಿ ’ ಕರ್ಕ್ಯುಮಿನ್ ’ ಎಂಬ ಅಂಶ ಇರುವ ಕಾರಣ ಇದು ಆಂಟಿ ಸೆಪ್ಟಿಕ್ ಮತ್ತು ಆಂಟಿ ಮೈಕ್ರೋಬಿಯಲ್ ಗುಣ ಲಕ್ಷಣಗಳನ್ನು ಹೊಂದಿದೆ. ಒಂದು ಗ್ಲಾಸ್ ಮಜ್ಜಿಗೆಗೆ 1 ಟೇಬಲ್ ಚಮಚ ಅರಿಶಿನ ಹಾಕಿ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳ ಸಮಸ್ಯೆ ನಿವಾರಣೆ ಆಗುತ್ತದೆ.

ಒಟ್ಟಾರೆ ನಮ್ಮ ದೇಹ ಆರೋಗ್ಯಕರವಾಗಿರಲು ಈ ಎಲ್ಲಾ ಔಷಧಿಗಳನ್ನು ಬಳಸಬೇಕು. ಈ ಔಷಧಿಗಳು ಸಂಪೂರ್ಣವಾಗಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿವೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.

Post a Comment

Previous Post Next Post