BS Yediyurappa: ಬಿಎಸ್‌ವೈ ವಿರುದ್ಧ ಸಿದ್ದು ಸರ್ಕಾರದ 'ಬಿಡಿಎ ಹಗರಣ'ದ ಅಸ್ತ್ರ! ಟಿಜೆ ಅಬ್ರಹಾಂ ಅರ್ಜಿ ಮರುಪರಿಶೀಲನೆಗೆ ಸಂಪುಟ ಸಭೆ ಶಿಫಾರಸು


  ಬಿಎಸ್ ಯಡಿಯೂರಪ್ಪ

 ಯಡಿಯೂರಪ್ಪ ಭವಿಷ್ಯ ರಾಜ್ಯಪಾಲರ ಅಂಗಳದಲ್ಲಿದೆ. ಮೊನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಂತೆ, ಸರ್ಕಾರ ರಾಜ್ಯಪಾಲರಿಗೆ ನಿರ್ಣಯ ರವಾನಿಸಿದೆ.

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಾವುದೂ ಸರಿಯಾಗಿಲ್ಲ. ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ನಿರಂತರವಾಗಿ ಬಿಎಸ್ ಯಡಿಯೂರಪ್ಪ (BS Yadiyurappa) ಹಾಗೂ ಕುಟುಂಬದ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಬಿಎಸ್ ಯಡಿಯೂರಪ್ಪನವರಿಗೆ ಮತ್ತೊಂದಯ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪನವರ ವಿರುದ್ಧದ ಹಗರಣಗಳಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ (Prosecution) ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರ ರಾಜ್ಯಪಾಲರಿಗೆ (Governor) ಶಿಫಾರಸ್ಸು ಮಾಡಿದೆ.

ಯಡಿಯೂರಪ್ಪ ಭವಿಷ್ಯ ರಾಜ್ಯಪಾಲರ ಅಂಗಳದಲ್ಲಿ

ಹೌದು, ಯಡಿಯೂರಪ್ಪ ಭವಿಷ್ಯ ರಾಜ್ಯಪಾಲರ ಅಂಗಳದಲ್ಲಿದೆ. ಮೊನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಂತೆ, ಸರ್ಕಾರ ರಾಜ್ಯಪಾಲರಿಗೆ ನಿರ್ಣಯ ರವಾನಿಸಿದೆ. ಯಡಿಯೂರಪ್ಪ ಹಗರಣಗಳಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಕೋರಿ ಸರ್ಕಾರ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದೆ ಯಡಿಯೂರಪ್ಪನವರ ವಿರುದ್ಧದ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

 ಬಿಡಿಎ ಹಗರಣಕ್ಕೆ ಸರ್ಕಾರ ಮರು ಜೀವ ಕೊಡಲು ಮುಂದಾದ ಕಾಂಗ್ರೆಸ್

ಬಿಡಿಎ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮರು ಜೀವ ಕೊಡಲು ಮುಂದಾಗಿದೆ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ದ ಪ್ರಾಸಿಕ್ಯೂಷನ್‌ಗೆ ನೀಡಲು ತಿರಸ್ಕರಿಸಿದ್ದ ರಾಜ್ಯಪಾಲರ ಕ್ರಮವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದುಕೊಂಡಿದೆ. ದೂರುದಾರ ಟಿ.ಜೆ.ಅಬ್ರಹಾಂ ಅರ್ಜಿ ಮರುಪರಿಶೀಲನೆಗೆ ಸಚಿವ ಸಂಪುಟ ಶಿಫಾರಸ್ಸು ಮಾಡಿದೆ.

 2020 ನವೆಂಬರ್ 19 ರಂದು ಎಸಿಬಿಗೆ ದೂರು ನೀಡಿದ್ದ ಅಬ್ರಹಾಂ ತನಿಖೆಗೆ ಅನುಮತಿ ಕೋರಿದ್ದ ಎಸಿಬಿ ಮನವಿಯನ್ನು ರಾಜ್ಯಪಾಲರು ತಿರಸ್ಕಾರ ಮಾಡಿದ್ದರು. ಬಿಡಿಎನಿಂದ 516 ಕೋಟಿ ವೆಚ್ಚದಲ್ಲಿ ಮನೆಗಳ ನಿರ್ಮಾಣದಲ್ಲಿ ನಡೆದಿರುವ ಅಕ್ರಮ 2019 ರಲ್ಲಿ ಅಧಿಕಾರದಲ್ಲಿದ್ದ ಯಡಿಯೂರಪ್ಪ ನಿರ್ದೇಶನದಂತೆ ರಾಮಲಿಂಗಂ ಕಂಪನಿಗೆ ಟೆಂಡರ್ ನೀಡಲು 12 ಕೋಟಿಗೆ ಬೇಡಿಕೆ ಇಟ್ಟಿದ್ದ ಐಎಎಸ್ ಅಧಿಕಾರಿ ಡಾ.ಜಿ.ಸಿ.ಪ್ರಕಾಶ್ ಈ ಅಕ್ರಮದಲ್ಲಿ ಬಿಎಸ್‌ವೈ ಕುಟುಂಬ ಭಾಗಿಯಾಗಿದೆ ಎಂದು 16 ಆರೋಪಗಳನ್ನು ಹೊರಿಸಲಾಗಿತ್ತು.

 ಪುನರ್ ಪರಿಶೀಲನೆಗೆ ಶಿಫಾರಸ್ಸು

ಅದರಂತೆ ರಾಜ್ಯಪಾಲರ ಕ್ರಮ ವಾಪಾಸ್ ಪಡೆದು ಪುನರ್‌ ಪರಿಶೀಲನೆಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಈ ಮೂಲಕ ಬಿಜೆಪಿ ಹಾಗೂ ರಾಜ್ಯಪಾಲರನ್ನು ಕಟ್ಟಿಹಾಕಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ.

Post a Comment

Previous Post Next Post