ಸಿದ್ದರಾಮಯ್ಯ ರಾಜೀನಾಮೇಗೆ ಯತ್ನಾಳ್ ಆಗ್ರಹ
ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ. ಒಮ್ಮೆ ರಾಜೀನಾಮೆ ಕೊಟ್ಟರೆ ಮತ್ತೊಮ್ಮೆ ಅಧಿಕಾರ ಸಿಗೊಲ್ಲ ಎನ್ನುವ ಭಯ ಇದೆ ಅಂತ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ರಾಜೀನಾಮೆ ಕೊಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡ್ತಾರೆ ಅನ್ನೋ ಭಯ ಸಿದ್ದರಾಮಯ್ಯನವರಿಗೆ ಇದೆ ಎಂದಿದ್ದಾರೆ.
ವಿಜಯಪುರ: ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ (MUDA Scam) ಸಿಎಂತ ಸಿದ್ದರಾಮಯ್ಯಗೆ (CM Siddaramaiah) ಲೋಕಾಯುಕ್ತರು (Lokayukta) ನೋಟಿಸ್ ಕೊಟ್ಟಿದ್ದಾರೆ. ನವೆಂಬರ್ 6 ಅಂದರೆ, ಬುಧವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಜಯಪುರ ಶಾಸಕ (Vijayapura MLA) ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಂತ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಂತ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ, ವಿಚಾರಣೆಗೆ ಹಾಜರಾಗಲಿ. ನ್ಯಾಯಾಲಯ ನಿರ್ದೋಷಿ ಎಂದು ಹೇಳಿದ ಮೇಲೆ ಬೇಕಾದರೆ ಮತ್ತೆ ಸಿಎಂ ಆಗಲಿ ಅಂತ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಳ್ಳುವ ಭಯ
ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ. ಒಮ್ಮೆ ರಾಜೀನಾಮೆ ಕೊಟ್ಟರೆ ಮತ್ತೊಮ್ಮೆ ಅಧಿಕಾರ ಸಿಗೊಲ್ಲ ಎನ್ನುವ ಭಯ ಇದೆ ಅಂತ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ರಾಜೀನಾಮೆ ಕೊಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡ್ತಾರೆ ಅನ್ನೋ ಭಯ ಸಿದ್ದರಾಮಯ್ಯನವರಿಗೆ ಇದೆ ಎಂದಿದ್ದಾರೆ.
ಡಿಕೆಶಿ ಸಿಎಂ ಆದ್ರೆ ಮತ್ತೆ ತಾವು ಸಿಎಂ ಆಗಲ್ಲ ಎಂಬ ಭಯ
ಡಿಕೆಶಿ ಸಿಎಂ ಆದ್ರೆ ಮುಂದೆ ಯಾವತ್ತೂ ಸಿಎಂ ಆಗೋಕೆ ಆಗಲ್ಲ ಅಂತ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಿಲ್ಲ ಅಂತ ಯತ್ನಾಳ್ ಹೇಳಿದ್ದಾರೆ. ಸಿಎಂ ಹುದ್ದೆಯಲ್ಲಿ ಉಳಿಸೋಕೆ ಮತ ನೀಡಿ ಅಂತ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಹೇಳಿರೋದಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಮತದಾನಕ್ಕೂ ನೋಟಿಸ್‌ಗೂ ಯಾವುದೇ ಸಂಬಂಧವೇ ಇಲ್ಲ. ಜನರು ಸಿದ್ದರಾಮಯ್ಯರನ್ನು ನಂಬೋದಿಲ್ಲ ಅಂತ ವ್ಯಂಗ್ಯವಾಡಿದ್ರು.
ಚುನಾವಣೆ ಭಯದಿಂದ ವಕ್ಫ್ ಅಸ್ತ್ರ ವಾಪಸ್
ಚುನಾವಣೆ ಭಯದಿಂದಲೇ ವಕ್ಫ್ ಅಸ್ತ್ರ ವಾಪಸ್ ಪಡೆದಿದ್ದಾರೆ. ಚುನಾವಣೆ ಆದ್ಮೇಲೆ ಮತ್ತೆ ವಕ್ಫ್ ಜಾರಿ ಮಾಡ್ತಾರೆ. ಹಿಂದೆ ಇದೇ ರೀತಿ ಕಾಂಗ್ರೆಸ್ ಮಾಡಿದೆ. ವಕ್ಫ್ ವಿರುದ್ಧ ಅಹೋರಾತ್ರಿ ಹೋರಾಟಕ್ಕೆ ಬೆಂಬಲ ನೀಡಲು ಅನೇಕರು ಬರುತ್ತಿದ್ದಾರೆ. ವಕ್ಫ್ ವಿಚಾರ ಬಹಳಷ್ಟು ಗಂಭೀರವಾಗಿದೆ. ಹೀಗಾಗಿ ನಾವು ಗಂಭೀರವಾಗಿ ಹೋರಾಟಕ್ಕೆ ಇಳಿದಿದ್ದೇವೆ ಅಂತ ಯತ್ನಾಳ್ ಹೇಳಿದ್ರು.
ಸಿದ್ದರಾಮಯ್ಯಗೆ ನೋಟಿಸ್ ಕೊಟ್ಟ ಲೋಕಾಯುಕ್ತ
ಮುಡಾ (Muda) ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಲೋಕಾಯುಕ್ತ ನೋಟಿಸ್ (Notice) ಜಾರಿ ಮಾಡಿದೆ. ನವೆಂಬರ್ 6 ರಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರ್ ಆಗುವಂತೆ ಲೋಕಾಯುಕ್ತ (Lokayukta) ಎಸ್ಪಿ ಟಿ.ಜೆ.ಉದೇಶ್ ಅವರಿಂದ ನೋಟಿಸ್ ಜಾರಿ ಮಾಡಲಾಗಿದೆ. ಮುಡಾ 50:50 ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ A2,A3,A4 ವಿಚಾರಣೆ ನಡೆಸಲಾಗಿದೆ. ಕಳೆದ ವಾರ A2 ಸಿಎಂ ಪತ್ನಿ ಪಾರ್ವತಿ ವಿಚಾರಣೆ ಮುಕ್ತಾಯಗೊಂಡಿದೆ. ಇದೀಗ A1 ಆರೋಪಿ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಮಾಡಲಾಗಿದೆ. ಖುದ್ದು ಲೋಕಾಯುಕ್ತ ಎದುರು ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ವಿಚಾರಣೆ ಎದುರಿಸುವೆ ಎಂದ ಸಿಎಂ
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದ್ದು, ಈ ಕುರಿತು ಸಿದ್ದರಾಮಯ್ಯ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸವಣೂರು ತಾಲೂಕಿನ ಹುರುಳಿಕೊಪ್ಪಿ ಗ್ರಾಮದಲ್ಲಿ ಸಿಎಂ ಮಾತನಾಡಿದ್ದು, ಏನು ಮುಡಾ ಹಗರಣ? ಲೋಕಾಯುಕ್ತರಿಂದ ನೋಟಿಸ್ ಬಂದಿದೆ. ವಿಚಾರಣೆಗೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Post a Comment