Channapatna By-Election: ಚನ್ನಪಟ್ಟಣ ಅಖಾಡಕ್ಕೆ ದೊಡ್ಡಗೌಡರ ಎಂಟ್ರಿ! ಮೊಮ್ಮಗನ ಪರ ದೇವೇಗೌಡರ ಮತಬೇಟೆ


  ದೇವೇಗೌಡರು ಇಂತಹ ಇಳಿವಯಸ್ಸಿನಲ್ಲೂ ಮೊಮ್ಮಗನ ಪರವಾಗಿ ನಿರಂತರವಾಗಿ ಪ್ರಚಾರ ನಡೆಸಲಿದ್ದಾರೆ. ಮತ್ತೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಭಿಕ್ಷೆ ಕೇಳಲಿದ್ದಾರೆ. ಚನ್ನಪಟ್ಟಣ ನಗರದಲ್ಲಿ ರೋಡ್ ಶೋ ಮಾಡಲಿದ್ದಾರೆ.

ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆ (Channapatna By Election) ಕಣ ರಂಗೇರುತ್ತಿದೆ. ಚುನಾವಣೆ ಕಣದಲ್ಲಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರಚಾರ ಮುಂದುವರೆಸಿದ್ದಾರೆ. ಮತ್ತೊಂದೆಡೆ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಪತ್ನಿ ರೇವತಿ (Revathi) ಕೂಡ ಪ್ರಚಾರ ನಡೆಸಿದ್ದಾರೆ. ಇದೀಗ ಮೊಮ್ಮಗನ ಗೆಲುವಿಗಾಗಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಕೂಡ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಚನ್ನಪಟ್ಟಣ ರಣಕಣ ಮತ್ತಷ್ಟು ರಂಗು ಪಡೆಯಲಿದೆ.

ಚನ್ನಪಟ್ಟಣಕ್ಕೆ ದೊಡ್ಡಗೌಡರ ಎಂಟ್ರಿ!

ಚನ್ನಪಟ್ಟಣದಲ್ಲಿ ದೇವೇಗೌಡರಿಗೆ ಭಾರೀ ಜನಪ್ರಿಯತೆ ಇದ್ದು, ಇಂದು ಮೊಮ್ಮಗನ ಗೆಲುವುಗಾಗಿ ಚನ್ನಪಟ್ಟಣದಲ್ಲಿ ಮತಶಿಖಾರಿ ನಡೆಸಲಿದ್ದಾರೆ. ಇಂದು 4 ಜಿ.ಪಂ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಚನ್ನಪಟ್ಟಣದ ಕೋಡಂಬಳ್ಳಿ ಜಿ.ಪಂ ವ್ಯಾಪ್ತಿಯ ವಿರುಪಾಕ್ಷೀಪುರ, ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ, ವೈ.ಟಿ ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ದೇವೇಗೌಡರು ಪ್ರಚಾರ ಮಾಡುತ್ತಾರೆ.

 ದೇವೇಗೌಡರು ಇಂತಹ ಇಳಿವಯಸ್ಸಿನಲ್ಲೂ ಮೊಮ್ಮಗನ ಪರವಾಗಿ ನಿರಂತರವಾಗಿ ಪ್ರಚಾರ ನಡೆಸಲಿದ್ದಾರೆ. ಮತ್ತೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಭಿಕ್ಷೆ ಕೇಳಲಿದ್ದಾರೆ. ಚನ್ನಪಟ್ಟಣ ನಗರದಲ್ಲಿ ರೋಡ್ ಶೋ ಮಾಡಲಿದ್ದಾರೆ.

ಪತ್ನಿ ರೇವತಿಯಿಂದ ಪತಿ ನಿಖಿಲ್ ಪರವಾಗಿ ಮತಬೇಟೆ!

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಅವರು ನಿನ್ನೆ ಪ್ರಚಾರ ನಡೆಸಿದರು. ಯುವಮತದಾರರನ್ನು ಸೆಳೆಯುವ ಪ್ಲಾನ್‌ನಿಂದಾಗಿ, ಚನ್ನಪಟ್ಟಣದ ಮಹಿಳಾ ಕಾಲೇಜು ಮುಂಭಾಗ ರೇವತಿ ಮತಯಾಚನೆ ಮಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿ ನಿಖಿಲ್ ಕುಮಾರಸ್ವಾಮಿಗೆ ಮತ ನೀಡುವಂತೆ ಪತ್ನಿ ರೇವತಿ ಮತ್ತು ಜೆಡಿಎಸ್ ಮಹಿಳಾ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಕಣ್ಣೀರಾಕುತ್ತಾ ನಿಖಿಲ್ ಪ್ರಚಾರ!

ಚನ್ನಪಟ್ಟಣ ಕನ್ನಮಂಗಲ ಗ್ರಾಮದಲ್ಲಿ ಪ್ರಚಾರದ ವೇಳೆ ನಿಖಿಲ್‌ ಕುಮಾರಸ್ವಾಮಿ ಕಣ್ಣೀರು ಹಾಕುತ್ತಾ ಮತಯಾಚಿಸಿದ್ದರು. ಎರಡು ಚುನಾವಣೆಯಲ್ಲಿ ಪೆಟ್ಟು ತಿಂದಿದ್ದೇನೆ. ರಾಜಕೀಯ ಷಡ್ಯಂತ್ರಕ್ಕೆ ಬಲಿ ಆಗಿರುವೆ ಅಂತೆಲ್ಲ ನೋವು ಹೇಳಿಕೊಂಡಿದ್ದರು. ನಿಖಿಲ್‌ ಕಣ್ಣೀರು ಅಸ್ತ್ರವನ್ನೇ ಬಳಸಿಕೊಂಡು ಯೋಗೇಶ್ವರ್‌ ಪ್ರಚಾರ ಮಾಡುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಕಣ್ಣೀರಿಗೆ ಅವರಪ್ಪ-ಅಮ್ಮ ಕಾರಣ ಅಂದಿರುವ ಡಿಕೆ ಸುರೇಶ್‌, ಕುಮಾರಣ್ಣನ ನೋಟು, ಯೋಗೇಶಣ್ಣಂಗೆ ಓಟು ಅಂತ ಕರೆಕೊಟ್ಟಿದ್ದಾರೆ. ಇತ್ತ ನಿಖಿಲ್‌ ಕಣ್ಣೀರನ್ನ ಕಾಂಗ್ರೆಸ್ ಪಕ್ಷದ ಸಚಿವರು ಕೂಡ ಟೀಕಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕರ ಟೀಕೆಗಳಿಗೆ ನಯವಾಗಿಯೇ ಟಾಂಗ್ ನೀಡಿರುವ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ, ಕಟುಕರಿಗೆ ಕಣ್ಣೀರು ಬರಲ್ಲ. ನಾನು ಕೂಡ ಕಣ್ಣೀರು ಹಾಕಿದ್ದೇನೆ. ಜನರ ಕಷ್ಟಕ್ಕೆ ಕಣ್ಣೀರು ಹಾಕಿದ್ದೇನೆ. ಜನರ ಕಷ್ಟ ನೋಡಿ ಕಣ್ಣೀರು ಬರುತ್ತೆ, ಆದರೆ ಕೆಲ ಕಟುಕ ರಾಜಕಾರಣಿಗಳಿಗೆ ಕಣ್ಣೀರು ಬರಲ್ಲ. ಅವರಿಗೆ ಭಯ ಭಕ್ತಿ ಇಲ್ಲ ಎಂದು ಹೇಳಿದ್ದಾರೆ.

ನಿಖಿಲ್‌ ಗೆಲುವಿನ ಭವಿಷ್ಯ ಹೇಳಿದ ಕೇರಳ ಜ್ಯೋತಿಷಿ

ನಿಖಿಲ್ ಗೆಲುವಿನ ಬಗ್ಗೆ ಟೆನ್ಷನ್​ನಲ್ಲಿರುವ ತಾತಾ ಹೆಚ್‌‌ಡಿಡಿ, ನಿಖಿಲ್ ರಾಜಕೀಯ ಜೀವನದ ಬಗ್ಗೆಎಚ್​​​ಡಿಡಿ ಕೇರಳ ಮೂಲದ ಜ್ಯೋತಿಷಿಯೊಬ್ಬರ ಬಳಿ ಭವಿಷ್ಯ ಕೇಳಿದ್ದಾರಂತೆ. ನಿಖಿಲ್​ಗೆ ರಾಜಯೋಗವಿದೆ, ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಗೆದ್ದೇ ಗೆಲ್ತಾರೆ ಅಂತ ಜ್ಯೋತಿಷಿ ಹೇಳಿದ್ದಾರಂತೆ.

ಅತ್ತ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಸಹ ವಿವಿಧ ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಸಿಪಿವೈ ಪರವಾಗಿ ಡಿಕೆ ಬ್ರದರ್ಸ್ ಅಖಾಡದಲ್ಲಿದ್ದಾರೆ. ಇತ್ತ ಎನ್‌ಡಿಎ ಅಭ್ಯರ್ಥಿ ಪರವಾಗಿ ಇಡೀ ಕುಟುಂಬವೇ ಪ್ರಚಾರಕ್ಕೆ ಇಳಿದಿದೆ. ಮೊದಮೊದಲು ಸಿಪಿ ಯೋಗೇಶ್ವರ್‌ಗೆ ಟಕ್ಕರ್ ಕೊಡಲು ನಿಖಿಲ್‌ಗೆ ಸಾಧ್ಯಾನಾ ಎನ್ನುವ ಪರಿಸ್ಥಿತಿ ಎದುರಾಗಿತ್ತು. ಆದರೆ ಚನ್ನಪಟ್ಟಣದ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಗೆಲುವಿನ ಮಾಲೆ ಯಾರಿಗೆ ಎನ್ನುವುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.

Post a Comment

Previous Post Next Post