DK Shivakumar-HDK: 'ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡಬಹುದು!' ಹೆಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ್ ವ್ಯಂಗ್ಯ


 ಹೆಚ್‌ಡಿಕೆ ವಿರುದ್ಧ ಡಿಕೆಶಿ ವ್ಯಂಗ್ಯ

ಕುಮಾರಸ್ವಾಮಿಗೆ ದೇಶ, ರಾಷ್ಟ್ರ, ಧರ್ಮದಲ್ಲಿ ಬಗ್ಗೆ ಭಕ್ತಿ ಇಲ್ಲ. ಒಮ್ಮೆಯಾದರೂ ಧ್ವಜಾರೋಹಣಕ್ಕೆ ಬರಲಿಲ್ಲ. ನಮ್ಮ ಗ್ಯಾರಂಟಿ ತರಹ ಒಂದು ಕೆಲಸ ಮಾಡಲಿಲ್ಲ. ರಾಮನಗರದಲ್ಲಿ ಕೆಲಸ ಮಾಡಿದ್ದರೆ ನಿಖಿಲ್ ಯಾಕೆ ಸೋಲುತ್ತಿದ್ರು? ಅಂತ ಡಿಕೆಶಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ರಾಮನಗರ: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಗುಡುಗಿದ್ದಾರೆ. ಚನ್ನಪಟ್ಟಣ (Channapatna) ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಕ್ಕೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಸಿಪಿ ಯೋಗೇಶ್ವರ್ (CP Yogeshwar) ಪರ ಮತಯಾಚನೆ ಮಾಡಿದ ಡಿಕೆಶಿ, ರಾಮನ ತಂದೆ ದಶರಥ ಮಹಾರಾಜನ ದೇವಸ್ಥಾನ ಇಲ್ಲ, ರಾಮನ ಬಂಟ ಆಂಜನೇಯನ ದೇವಸ್ಥಾನ ಇದೆ. ಕೆಲವೊಂದು ದೇವಸ್ಥಾನಕ್ಕೆ ಹೋಗಿದ್ದೆ, ಅಭಿವೃದ್ಧಿ ಆಗಿದೆ. ಯಾರು ಮಾಡಿದ್ದೆ ಅಂತ ಕೇಳಿದ್ರೆ ಯೋಗೇಶ್ವರ್ ಅಂದ್ರು. ಕುಮಾರಸ್ವಾಮಿ ಒಂದು ದೇವಸ್ಥಾನ ಅಭಿವೃದ್ಧಿ ಮಾಡಿದ್ದಾರಾ? ಒಂದು ಕೆರೆ ತುಂಬಿಸಿದ್ದಾರಾ? ಸಿಎಂ ಆಗಿದ್ದಾಗ ಜೆಡಿಎಸ್ ಕಾರ್ಯಕರ್ತರಿಗೆ (JDS Workers) ಒಂದು ಅಧಿಕಾರ ಕೊಟ್ರಾ? ಈಗ ಮತ ಕೇಳಲು ಹಕ್ಕು ಏನಿದೆ? ಅಂತ ಪ್ರಶ್ನಿಸಿದ್ರು.

ಕುಮಾರಸ್ವಾಮಿಗೆ ದೇಶ, ರಾಷ್ಟ್ರ, ಧರ್ಮದಲ್ಲಿ ಬಗ್ಗೆ ಭಕ್ತಿ ಇಲ್ಲ. ಒಮ್ಮೆಯಾದರೂ ಧ್ವಜಾರೋಹಣಕ್ಕೆ ಬರಲಿಲ್ಲ. ನಮ್ಮ ಗ್ಯಾರಂಟಿ ತರಹ ಒಂದು ಕೆಲಸ ಮಾಡಲಿಲ್ಲ. ರಾಮನಗರದಲ್ಲಿ ಕೆಲಸ ಮಾಡಿದ್ದರೆ ನಿಖಿಲ್ ಯಾಕೆ ಸೋಲುತ್ತಿದ್ರು? ಅಂತ ಡಿಕೆಶಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ

ನಾವು ಸತ್ರು ಇಲ್ಲೇ, ಯೋಗೇಶ್ವರ್‌ನ ಚಕ್ಕೆರೆಗೆ ಹಾಕೋದು. ಬೆಂಗಳೂರಿಗೆ ತೆಗೆದುಕೊಂಡು ಹೋಗ್ತೀರಾ? ಅಂತ ಪ್ರಶ್ನಿಸಿದ್ರು. ಅದೇನೋ ಕುಮಾರಸ್ವಾಮಿ ಹೇಳ್ತಿದ್ದಾರೆ ಗವರ್ನರ್ ರೂಲ್ ಅಂತ. ನಿನ್ನ ಹಣೆಲೂ ಬರೆದಿಲ್ಲ ಅದು. ಬಿಜೆಪಿಯವರು ಸೇರಿಸಿಕೊಂಡಿದ್ದಾರೆ, ನಾವು ಹತ್ರನೂ ಸೇರಿಸಲ್ಲ. ಯೋಗೇಶ್ವರ್ ಕೇಳಿಕೊಂಡ್ರು, ಅದಕ್ಕೆ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ ಅಂತ ಡಿಕೆಶಿ ಹೇಳಿದ್ರು. ಅಧಿಕಾರ ಇಲ್ಲದಾಗ ಏನು ಮಾಡ್ತೀಯಾ?

ದುಡ್ಡು ಏನ್ ಕೊಟ್ರು ಬೇಡ ಅನ್ನಬೇಡಿ. ಯೋಗೇಶ್ವರ್‌ಗೆ ಮತಕೊಡಿ. ನಾನು ಯೋಗೇಶ್ವರ್ ಪರವಾಗಿದ್ದೇನೆ ಅಂತ ಡಿಕೆಶಿ ಹೇಳಿದ್ರು. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನು ಮಾಡಲಿಲ್ಲ, ಈಗ ಏನು ಮಾಡ್ತಿಯಾ? ಅಂತ ಹೆಚ್‌ಡಿಕೆಗೆ ಡಿಕೆಶಿ ಟಾಂಗ್ ಕೊಟ್ರು.

ಬಿಜೆಪಿ ಜೊತೆ ಜೆಡಿಎಸ್ ಮರ್ಜ್ ಆಗಬಹುದು

ಕಾಂಗ್ರೆಸ್‌ಗೆ ಅಭ್ಯರ್ಥಿ ಇರಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಿನ್ನ ಮನೆಯನ್ನು ಬಿಗಿಯಾಗಿ ಇಟ್ಟುಕೊಳ್ಳಲು ಆಗಲಿಲ್ಲ, ನಾನು ಎಂಥೆತಾ ಅಭ್ಯರ್ಥಿ ಇಟ್ಟಿದ್ದೆ ಎಂದು ಕುಮಾರಸ್ವಾಮಿಗೆ ಗೊತ್ತಿಲ್ಲ. ಕುಮಾರಸ್ವಾಮಿ ನುಡಿಮುತ್ತುಗಳನ್ನ ಜನರು ಮಾತನಾಡುತ್ತಿದ್ದಾರೆ. ದುಡ್ಡುಕಾಸು ಕೊಟ್ರೆ ಆಗುತ್ತೆ ಎಂಬುದು ಕುಮಾರಸ್ವಾಮಿ ಹೇಳಿದ್ದಾರೆ. ಬಹುಶಃ ಬಿಜೆಪಿ ಜೊತೆಗೆ ಜೆಡಿಎಸ್ ಮರ್ಜ್ ಮಾಡಬಹುದು. ಅದೇ ಬದಲಾವಣೆ ಆಗಬಹುದು ಅಂತ ಕುಮಾರಸ್ವಾಮಿಗೆ ಡಿಕೆಶಿ ಟಾಂಗ್ ಕೊಟ್ರು.ನನಗೆ ವಿಶ್ವಾಸ ದ್ರೋಹವಾಗಿದೆ

ಇನ್ನು ಮತಯಾಚನೆ ಮಾಡಿ ಮಾತನಾಡಿದ ಯೋಗೇಶ್ವರ್, ಡಿಕೆಶಿ ಚನ್ನಪಟ್ಟಣಕ್ಕೆ ಅನುದಾನ ಕೊಟ್ಟಿದ್ದಾರೆ. ಜನರು ಸಹ ವಿಶ್ವಾಸದಲ್ಲಿದ್ದಾರೆ. ನನ್ನ ಜೊತೆಗೆ ಐದಾರು ತಿಂಗಳು ಇದ್ದು, ನನ್ನನ್ನ ಅವೈಡ್ ಮಾಡಿದರು. ಅದನ್ನ ನಾನು ಹೇಳಿದ್ದೇನೆ ವಿಶ್ವಾಸದ್ರೋಹ ಆಗಿದೆ.ಕುಮಾರಸ್ವಾಮಿ ಹೇಳಿದ ರೀತಿ ಬದಲಾವಣೆ ಆಗಲ್ಲ

ದೇವೇಗೌಡರು ದೊಡ್ಡವರು ಬಂದು ಪ್ರಚಾರ ಮಾಡಬಹುದು. ಆದರೆ ಕುಮಾರಸ್ವಾಮಿ ಹೇಳಿದ ರೀತಿ ಚುನಾವಣೆ ಫಲಿತಾಂಶದಿಂದ ಯಾವ ಬದಲಾವಣೆ ಆಗಲ್ಲ ಅಂತ ಯೋಗೇಶ್ವರ್ ಹೇಳಿದ್ದಾರೆ.

Post a Comment

Previous Post Next Post