ಭೀಕರ ಅಪಘಾತಕ್ಕೆ ಯುವತಿ ಬಲಿ
ಆರೋಪಿ ಧನುಷ್‌ನನ್ನ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಸ್ ವಾಪಸ್ ಪಡೆಯಲು ಕೋಟಿ ಕೋಟಿ ಅಫರ್ ಕೊಟ್ಟಿದ್ರ ಅನ್ನೋ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನ ಡಿಸಿಪಿ ಅನಿತಾ ಹದ್ದಣ್ಣನವರ್ ಅಲ್ಲಗಳೆದಿದ್ದಾರೆ.
ಬೆಂಗಳೂರು: ಬೆಂಗಳೂರಿನ ಕೆಂಗೇರಿ (Kengeri) ಬಳಿ ಸಂಧ್ಯಾ ಅನ್ನೋರು ಅಪಘಾತಕ್ಕೆ (Car Accident) ಬಲಿಯಾಗಿದ್ದರು. ಈ ಸಾವಿನ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಕಾರಿನ ಕಿರಾತಕನ ಅಟ್ಟಹಾಸದ ಸತ್ಯ ಹೊರಬೀಳ್ತಿವೆ. ಇತ್ತ ನ್ಯಾಯಕ್ಕಾಗಿ ಕುಟುಂಬಸ್ಥರು (Family) ಪಟ್ಟು ಹಿಡಿದಿದ್ದು, ಸ್ನೇಹಿತೆಯನ್ನ (Friends) ಕಳೆದುಕೊಂಡ ಆಪ್ತರು ಕಣ್ಣೀರಾಗಿದ್ದಾರೆ.
ಕಡಲನು ಕಾಣ ಹೊರಟ ಮುಗಿಲಂತೆ ಸಂಧ್ಯಾ ಕೊರಗಿ ಕರಗಿದ್ದಾರೆ. ಎಲ್ಲರನ್ನ ನಕ್ಕು ಸಂತೈಸುತ್ತಿದ್ದ ಹಸನ್ಮುಖಿ ದಾರುಣ ಅಂತ್ಯ ಕಂಡಿದ್ದಾರೆ. ಬದುಕು ಕೊಡುವ ಕಷ್ಟವನ್ನೂ ಸುಖವೆಂದೇ ಸ್ವೀಕರಿಸಿದ್ದ ಜೀವ ಬಾರದ ಲೋಕಕ್ಕೆ ಪಯಣ ಬೆಳೆಸಿದೆ. ಕಂಠಪೂರ್ತಿ ಕುಡಿದ ಕಿರಾತಕನ ಅಟ್ಟಹಾಸಕ್ಕೆ ಬೆಳದಿಂಗಳ ಬಾಲೆ ಅನ್ಯಾಯವಾಗಿ ಮಸಣ ಸೇರಿದ್ದಾಳೆ. ಕೆಂಗೇರಿ ಬಳಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಂಧ್ಯಾ ದೇಹ ಛಿದ್ರ ಛಿದ್ರವಾಗಿ ಹೋಗಿದೆ.ನೂರಾರು ಕನಸು ಕಟ್ಟಿಕೊಂಡಿದ್ದವಳ ಬದುಕು ಕಾರು ಅಪಘಾತಕ್ಕೆ ನುಚ್ಚು ನೂರಾಗಿದೆ
ಕೆಂಗೇರಿ ಕಟುಕನ ಅಟ್ಟಹಾಸಕ್ಕೆ ಸಂಧ್ಯಾ ಬಲಿ
ಸಂಧ್ಯಾ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ಪತಿ ಹಾಗೂ ಸಹೋದರ ಕಣ್ಣೀರು ಹಾಕಿದ್ದಾರೆ. ಆಪ್ತರಿಗೆ ಬರಸಿಡಿಲು ಬಡಿದಂತಾಗಿದೆ. ಸಂಧ್ಯಾ ಕೆಲಸ ಮಾಡ್ತಿದ್ದ ಶಾಪ್ ಮಾಲೀಕರು ಕಣ್ಣೀರು ಹಾಕಿದ್ದಾರೆ. ನಮ್ ಶಾಪ್‌ಗೆ ಅವಳೇ ಮೇನ್ ಫಿಲ್ಲರ್ ಆಗಿದ್ಲು, ಆಕೆ ಜೀವನದಲ್ಲಿ ಹೀಗಾಗುತ್ತೆ ಅಂದುಕೊಂಡಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಕುಡಿದು ದುಡ್ಡಿನ ದೌಲತ್ತಲ್ಲಿ ದರ್ಪ ಮೆರೆದ ಆರೋಪಿ ದನುಷ್ ಅಟ್ಟಹಾಸ ಒಂದೊಂದೇ ಬಯಲಾಗುತ್ತಿದೆ. ಸಂಧ್ಯಾಗೆ ಡಿಕ್ಕಿ ಹೊಡೆದ ಕಿರಾತಕ ಬೈಕ್‌ವೊಂದಕ್ಕೂ ಡಿಕ್ಕಿ ಹೊಡೆದಿದ್ದ ಅನ್ನೋದು ಗೊತ್ತಾಗಿದೆ. ಬೈಕ್‌ನಲ್ಲಿದ್ದ ರಾಣೆಬೆನ್ನೂರು ಮೂಲದ ಅರ್ಬಾಜ್ ಪರಿಸ್ಥಿತಿ ಕೂಡ ಗಂಭೀರವಾಗಿದೆ. ಆ್ಯಕ್ಸಿಡೆಂಟ್ ಆಗ್ತಿದ್ದಂತೆ ಆಟೋ ಚಾಲಕರು ಅರ್ಬಾಜ್‌ನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಷಕರು ಕಣ್ಣೀರಾಗಿದ್ದಾರೆ.
ಸದ್ಯ ಆರೋಪಿ ಧನುಷ್‌ನನ್ನ ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇಸ್ ವಾಪಸ್ ಪಡೆಯಲು ಕೋಟಿ ಕೋಟಿ ಅಫರ್ ಕೊಟ್ಟಿದ್ರ ಅನ್ನೋ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನ ಡಿಸಿಪಿ ಅನಿತಾ ಹದ್ದಣ್ಣನವರ್ ಅಲ್ಲಗಳೆದಿದ್ದಾರೆ. ಕಾನೂನಾತ್ಮಕವಾಗಿಯೇ ಎಲ್ಲಾ ಪ್ರಕ್ರಿಯೆ ನಡೆಸಲಾಗಿದೆ. ಹಾಲ್ಕೋ ಹಾಲ್ ಕಂಟೆಂಟ್ ಸಿಕ್ಕಿದ್ದು, ಬ್ಲಡ್ ಸ್ಯಾಂಪಲ್ ಪಡೆಯಲಾಗಿದೆ. ಇದ್ರಲ್ಲಿ ನಮ್ಮ ಸಿಬ್ಬಂದಿಯಾಗಲಿ, ಬೇರೆ ಯಾರೂ ಕೂಡ ಭಾಗಿಯಾಗಿಲ್ಲ ಅಂತ ಎಂದಿದ್ದಾರೆ.
ಸಂದ್ಯಾಳ ಸಾವಿಗೆ ನ್ಯಾಯ ಸಿಗಬೇಕು ಅಂತ ಕುಟುಂಬಸ್ಥರು ಹೋರಾಟ ಮಾಡ್ತಿದ್ದಾರೆ.. ಆದ್ರೆ ಈ ಕೇಸ್ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡ್ಬೇಕಿದೆ.

Post a Comment