MUDA Case: ಮುಡಾಗೆ 14 ಸೈಟ್ ಸೈಟ್ ಮರಳಿಸಿದ್ರೂ ತಪ್ಪಿಲ್ಲ ಸಂಕಷ್ಟ! ಸಿದ್ದು ನಡೆ ಮುಂದೇನು? ED ಶಾಕ್​ ಕೊಡುತ್ತಾ?


 ಸಿಎಂ ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)

CM ಪತ್ನಿ ಪಾರ್ವತಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋಗಿದ್ದರು. ಅಲ್ಲಿಗೇ ತಹಶೀಲ್ದಾರ್‌, ಮುಡಾ ಅಧಿಕಾರಿಗಳೂ ಬಂದು ರದ್ದತಿ ಪತ್ರಕ್ಕೆ ಸಹಿ ಹಾಕಿ ಪಾರ್ವತಿ ಅವರ ಹೆಸರಲ್ಲಿದ್ದ 14 ಸೈಟುಗಳ ಖಾತೆಯನ್ನು ರದ್ದುಗೊಳಿಸಿದ್ದಾರೆ.

ಬೆಂಗಳೂರು: ಜಾರಿ ನಿರ್ದೇಶನಾಲಯ (Enforcement Directorate ) ಮುಡಾ ಕೇಸ್‌ಗೆ (MUDA Case) ಎಂಟ್ರಿ ಕೊಟ್ಟಿದೆ. ಇಡಿ ಎಂಟ್ರಿ ಆಗ್ತಿದ್ದಂತೆ ಮುಖ್ಯಮಂತ್ರಿಗಳ (CM Siddaramaiah) ಪತ್ನಿ ಪಾರ್ವತಿಯವರು 14 ಸೈಟ್‌ಗಳನ್ನ ವಾಪಸ್‌ ಕೊಟ್ಟಿದ್ದಾರೆ. ನನ್ನ ಪತಿಯವರ ಘನತೆ ಮುಂದೆ 14 ಸೈಟುಗಳು ತೃಣಕ್ಕೆ ಸಮಾನ ಅಂತ ಪತ್ರದಲ್ಲಿ ಸಿಟ್ಟು ಹೊರಹಾಕಿದ್ದಾರೆ. ಸಿಎಂ ಪತ್ನಿಯವರ (CM Wife) ಪತ್ರ ಕೈ ಸೇರ್ತಿದ್ದಂತೆ ಸೈಟ್‌ ವಾಪಸ್‌ ಪ್ರಕ್ರಿಯೆ ಮುಗಿದಿದೆ.

62 ಕೋಟಿ ಕೊಟ್ಟರೆ 14 ಸೈಟು ವಾಪಸ್‌ ಕೊಡ್ತೀನಿ ಅಂತಿದ್ದ ಸಿದ್ದರಾಮಯ್ಯ ಈಗ 14 ಸೈಟು ವಾಪಸ್‌ ಕೊಡಿಸಿದ್ದಾರೆ. 62 ಕೋಟಿ ಅಲ್ಲ, 62 ಪೈಸೆಯನ್ನೂ ಮುಡಾದವರಿಂದ ಕೇಳದೇ 14 ಸೈಟುಗಳನ್ನ ವಾಪಸ್‌‌‌‌ ಮುಡಾದವರಿಗೆ ಪತ್ನಿ ಮೂಲಕ ಕೊಡಿಸಿದ್ದಾರೆ. ಮೊನ್ನೆ ರಾತ್ರಿಯಷ್ಟೇ ಸೈಟ್‌ ವಾಪಸ್‌ ತಗೊಳ್ಳಿ ಅಂತ ಸಿಎಂ ಪತ್ನಿ ಪತ್ರ ಬರೆದು, ನಿನ್ನೆ ಬೆಳಗ್ಗೆ ಮುಡಾದವರಿಗೆ ಆ ಪತ್ರ ಕೊಟ್ಟಿದ್ದರು. ಸಂಜೆ ಸೂರ್ಯ ಮುಳುಗುವ ಮೊದಲೇ 14 ಸೈಟುಗಳನ್ನ ಮುಡಾದವರು ವಾಪಸ್‌‌‌ ತಗೊಂಡಿದ್ದಾರೆ.

CM ಪತ್ನಿ ಪಾರ್ವತಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋಗಿದ್ದರು. ಅಲ್ಲಿಗೇ ತಹಶೀಲ್ದಾರ್‌, ಮುಡಾ ಅಧಿಕಾರಿಗಳೂ ಬಂದು ರದ್ದತಿ ಪತ್ರಕ್ಕೆ ಸಹಿ ಹಾಕಿ ಪಾರ್ವತಿ ಅವರ ಹೆಸರಲ್ಲಿದ್ದ 14 ಸೈಟುಗಳ ಖಾತೆಯನ್ನು ರದ್ದುಗೊಳಿಸಿದ್ದಾರೆ. 40 ವರ್ಷಗಳ ಸಿದ್ದರಾಮಯ್ಯನವರ ರಾಜಕೀಯದಲ್ಲಿ ಒಂದು ದಿನ, ಒಂದೇ ಒಂದು ದಿನ ಸಿದ್ದರಾಮಯ್ಯರ ಜೊತೆಗೆ ಕಾಣಿಸದ ಪಾರ್ವತಿ ಈಗ ಸದ್ದಿಲ್ಲದೇ ನೋಂದಣಿ ಕಚೇರಿಗೆ ಹೋಗಿ 14 ಸೈಟುಗಳನ್ನೂ ವಾಪಸ್‌‌ ಕೊಟ್ಟು ಬಂದಿದ್ದಾರೆ. ಮುಡಾ ಆಯುಕ್ತ ರಘುನಂದನ್‌, 14 ಸೈಟುಗಳ ಕ್ರಯಪತ್ರ ರದ್ದಾಗಿರುವುದನ್ನು ದೃಢಪಡಿಸಿದ್ದಾರೆ.

ಸಂಗಾತಿಯ ನಿರ್ಧಾರ ಸಿದ್ದರಾಮಯ್ಯರಿಗೇ ಗೊತ್ತಿಲ್ಲ

ಇನ್ನು ಈ ಸೈಟು ವಾಪಸಾತಿಗೂ ಮೊದಲೇ ಪತ್ನಿಯ ಪತ್ರದ ಬಗ್ಗೆ ರಿಯಾಕ್ಟ್‌ ಮಾಡಿದ್ದ ಸಿಎಂ ಸಿದ್ದರಾಮಯ್ಯ, ನನ್ನ ಗಮನಕ್ಕೆ ತರದೆ ಪತ್ರ ಬರೆದಿದ್ದಾರೆ. ಮನ ನೊಂದು ಪತ್ರ ಬರೆದಿದ್ದು, ರಾಜಕೀಯ ದ್ವೇಷದ ಕಾರಣಕ್ಕಾಗಿ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದರು.

ಇದನ್ನೂ ಓದಿ: Horn OK Please: ವಾಹನಗಳ ಹಿಂದೆ ‘ಹಾರ್ನ್ ಓಕೆ ಪ್ಲೀಸ್’ ಎಂದು ಏಕೆ ಬರೆಯುತ್ತಾರೆ? ಇದರ ಅರ್ಥವೇನು? ಶೇ 99 ಮಂದಿಗೆ ಗೊತ್ತಿಲ್ಲ!

ಸಿಎಂ ಹೀಗೆ ಸಮಜಾಯಿಷಿ ನೀಡೋದ್ರ ಹಿಂದೆಯೇ ದೊಡ್ಡ ಲೆಕ್ಕಾಚಾರ ಇರೋದು ಸ್ಪಷ್ಟ, ಏಕೆಂದರೆ ಕೇವಲ ಎರಡು ತಿಂಗಳ ಹಿಂದೆ ಈ ಸೈಟುಗಳಿಗೆ 62 ಕೋಟಿ ರೂಪಾಯಿಗಳ ಬೆಲೆ ಕಟ್ಟಿದ್ದ ಸಿದ್ದರಾಮಯ್ಯ ಈಗ ಏಕಾಏಕಿ ಸೈಟುಗಳ ಮೇಲಿನ ವ್ಯಾಮೋಹವನ್ನೇ ಕಳಚಿಕೊಳ್ಳಲು ಅವರದ್ದೇ ಆದ ಕಾರಣಗಳಿವೆ.

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋ ಬಹುದೊಡ್ಡ ಪ್ರಯತ್ನವೇ ಸೈಟ್‌ ವಾಪಸ್‌‌ ಅಸ್ತ್ರ. 2ನೇಯದ್ದು ಕಾನೂನು ಹೋರಾಟದ ವೇಳೆ ಸೈಟ್‌ ವಾಪಸ್‌ ಕೊಟ್ಟಿದ್ದು ಪ್ರಬಲ ಅಸ್ತ್ರವಾಗಿ ಸಿದ್ದರಾಮಯ್ಯರಿಗೆ ವರದಾನ ಆಗಲಿದೆ ಅನ್ನೋ ನಂಬಿಕೆ. 40 ವರ್ಷಗಳ ರಾಜಕೀಯದಲ್ಲಿ ಕ್ಲೀನ್ ಅನ್ನೋ ಇಮೇಜ್ ಇದ್ಯಲ್ಲ ಅದನ್ನ ಹೆಚ್ಚಿಸಿಕೊಳ್ಳೋದು ಮೊದಲ ಉದ್ದೇಶ. ನಮ್ಮ ಕುಟುಂಬಕ್ಕೆ ಹಣ, ಆಸ್ತಿ ಮುಖ್ಯವಲ್ಲ ಸಿದ್ಧಾಂತ ನಂಬಿದ ನಾಯಕ ಅನ್ನೋ ಸಂದೇಶ ಕೊಡೋದು, 5ನೇಯದ್ದು ಸಿದ್ದರಾಮಯ್ಯ ಪತ್ನಿಯ ಭಾವನಾತ್ಮಕ ಪತ್ರದಿಂದ ಅಹಿಂದ ಸ್ಥಾನಮಾನ ಇನ್ನಷ್ಟು ಭದ್ರಪಡಿಸಿಕೊಳ್ಳೋದಕ್ಕೆ ಸಹಾಯ ಆಗಬಹುದು ಅನ್ನೋದು ಪ್ರಮುಖ ಕಾರಣ.ಒಟ್ಟಿನಲ್ಲಿ ಈ ಮುಡಾ ಸೈಟು ವಿವಾದ ಒಂದು ರೀತಿಯಲ್ಲಿ ಅದಲಿ ಬದಲಿ ಆಟದಂತೆ ಭಾಸವಾಗುತ್ತಿದೆ. ಮೊದಲು ಜಮೀನಿಗೆ ಪರಹಾರ ಅಂತೇಳಿ ಪಾರ್ವತಿಯವರು ಬದಲಿ ಸೈಟುಗಳನ್ನು ಪಡೆದಿದ್ದರು. ಅವೆಲ್ಲವನ್ನೂ ಕಾನೂನಾತ್ಮಕವಾಗಿಯೇ ಪಡೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದರು. ಆದರೆ ಈಗ ಅದೇ ಸೈಟುಗಳು ಸಿಎಂ ಕುರ್ಚಿಯನ್ನೇ ಕಚ್ಚಿ ಎಳೆಯುವಂತಹ ಪರಿಸ್ಥಿತಿ ನಿರ್ಮಾಣವಾದ್ಮೇಲೆ ಅವುಗಳಿಂದ ಕಳಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಪತ್ನಿಯ ಹೆಸರಿನಲ್ಲಿದ್ದ ಸೈಟುಗಳು ಸಿದ್ದರಾಮಯ್ಯನವರ 40ವರ್ಷಗಳ ರಾಜಕೀಯ ಜೀವನದ ಮೇಲೆ ಎಂತಹ ಪರಿಣಾಮಗಳನ್ನು ಬೀರುತ್ತವೆ ಅನ್ನೋದೇ ಯಕ್ಷಪ್ರಶ್ನೆ.

Post a Comment

Previous Post Next Post