ಎಡಿಜಿಪಿ ಚಂದ್ರಶೇಖರ್/ ಎಚ್ಡಿ ಕುಮಾರಸ್ವಾಮಿ
ಐಪಿಎಸ್ ಅಧಿಕಾರಿ ವಿರುದ್ಧ ವಿರುದ್ಧ ಸಿಎಸ್‌ಗೆ JDLP ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಜೆಡಿಎಸ್ ದೂರು ನೀಡಿದ್ದು, ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಎಚ್‌ಡಿಕೆಗೆ ಅಪಮಾನ ಮಾಡಲಾಗಿದೆ ಅಂತ ದೂರು ನೀಡಿದ್ದಾರೆ.
ಬೆಂಗಳೂರು: ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (HD Kumaraswamy) ವಸರ್ಸ್ ಐಪಿಎಸ್ ಅಧಿಕಾರಿ (ADGP Chandrashekhar) ನಡವಿನ ವಾರ್ ಜೋರಾಗಿದೆ. ಎಚ್ಡಿಕೆಗೆ ಎಸ್‌ಐಟಿ ಬಿಗ್ ಶಾಕ್ ನೀಡಿದೆ. ಸಾಯಿ ಮಿನರಲ್ಸ್ ಕೇಸ್‌ನಲ್ಲಿ (Sai minerals Case) ಕುಮಾರಸ್ವಾಮಿ ನಿರೀಕ್ಷಣಾ ಬೇಲ್ (Anticipatory Bail) ಪಡೆದಿದ್ದಾರೆ. ಆದರೆ ಈಗ ಎಚ್ಡಿಕೆ ನಿರೀಕ್ಷಣಾ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಎಸ್‌ಐಟಿ ಅರ್ಜಿ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚ್‌ಡಿಕೆಗೆ ಅಪಮಾನ ಮಾಡಲಾಗಿದೆ ಅಂತ ದೂರು
ಇತ್ತ ಐಪಿಎಸ್ ಅಧಿಕಾರಿ ವಿರುದ್ಧ ವಿರುದ್ಧ ಸಿಎಸ್‌ಗೆ JDLP ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಜೆಡಿಎಸ್ ದೂರು ನೀಡಿದ್ದು, ಚಂದ್ರಶೇಖರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಎಚ್‌ಡಿಕೆಗೆ ಅಪಮಾನ ಮಾಡಲಾಗಿದೆ ಅಂತ ದೂರು ನೀಡಿದ್ದಾರೆ. ಇನ್ನು, ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸಚಿವ ಸಾರಾ ಮಹೇಶ್ ಕೂಡ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದಾರೆ.
ಐಪಿಎಸ್ ಅಧಿಕಾರಿ ವಿರುದ್ಧ ರಾಜಪಾಲರಿಗೂ ದೂರು
ಜೆಡಿಎಸ್ ಶಾಸಕಾಂಗ ನಾಯಕ ಸಿ ಎಸ್ ಸುರೇಶ್ ಬಾಬು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಕೇಂದ್ರ ಸಚಿವರ ಕುಮಾರಸ್ವಾಮಿ ವಿರುದ್ದ ಮಾತಾಡಿದ್ದಾರೆ, ಅವರ ವಿರುದ್ದ ಸಿಎಸ್ ಗೆ ದೂರು ನೀಡಿದ್ದೇವೆ. ಚಂದ್ರಶೇಖರ್ ಐಪಿಎಸ್ ಅಧಿಕಾರಿ ಬೇರೆ ಕ್ಯಾಡರ್ ನಲ್ಲಿರಬೇಕಿತ್ತು, ಬೇರೆ ಬೇರೆ ಕಾರಣ ಕೊಟ್ಟು ಕಾನೂನು ಮೊರೆ ಹೋಗಿ ಇಲ್ಲೇ ಮುಂದುವರೆದಿದ್ದಾರೆ. ಗೌರ್ನರ್ ಕಚೇರಿಯ ಸಿಬ್ಬಂದಿಯನ್ನ ತನಿಖೆ ಮಾಡ್ತಿವಿ ಅಂತ ಹೇಳ್ತಾರೆ. ಗೌರ್ನರ್ ತನಿಖೆ ಮಾಡೋದಕ್ಕೆ ಆದೇಶ ಕೊಡಿ ಎಂಬ ಧಿಮಾಕಿನ ಮಾತಾಡ್ತಾರೆ. ಎಚ್ ಡಿ ಕೆ ವಿರುದ್ದ ಕೆಟ್ಟ ಪದಗಳನ್ನ ಬಳಸಿರೋದು ಎಷ್ಟು ಸರಿ, ಚಂದ್ರಶೇಖರ್ ಅವರು ಬೇರೆ ಬೇರೆ ಕೆಲಸಗಳಿಗೆ ಕುಮ್ಮಕ್ಕು ಕೊಡ್ತಿದ್ದರು. ಇಂತಹ ಅಧಿಕಾರಿಗಳನ್ನ ರಾಜ್ಯದಲ್ಲಿಟ್ಟುಕೊಳ್ಳಬಾರದು, ಚಂದ್ರಶೇಖರ್ ಮೇಲೆ ಹಲವು ಕೇಸ್ ಗಳಿವೆ. ಸಭಾಪತಿಗಳಿಗೂ ಇಂತಹ ಅಧಿಕಾರಿಗಳ ಬಗ್ಗೆ ಮನವಿ ಕೊಡ್ತೀವಿ, ಚಂದ್ರಶೇಖರ್ ಅವರ ನಾಲಿಗೆ ಹರಿಬಿಡೋದಕ್ಕೆ ಕಾರಣ ಏನು? ಯಾರ ಕುಮ್ಮಕ್ಕು ಇವರಿಗೆ ಇದೆ. ರಾಜ್ಯಪಾಲರ ಕಚೇರಿಗೂ ಚಂದ್ರಶೇಖರ್ ವಿರುದ್ದ ದೂರು ಕೊಡ್ತೀವಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ‘ಹನಿಮೂನ್’ ವಿಡಿಯೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡ ನವದಂಪತಿ; ನೋಡಿ ಆನಂದಿಸಿದ ನೆಟ್ಟಿಗರು!
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್, ಮೊನ್ನೆ ಯಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರ ಹರಿದಾಡುತ್ತಿದೆ. ಯಾವುದೇ ಲೆಟರ್ ಹೆಡ್ ಶಿಲ್ ಏನು ಇಲ್ಲ, ಇದು ಆಂತರಿಕ ಪತ್ರ. ಇದು ಸರ್ಕಾರಿ ನೌಕರ ಬರೆದಿರೋದ ಯಾರೋ ಕಿಡಿಗೇಡಿ ಬರೆದಿರೋದ ಗೊತ್ತಾಗುತ್ತಿಲ್ಲ. ನೌಕರ ಬರೆದಿದ್ದರೆ ಸ್ಪಷ್ಟನೆ ಕೊಡಬೇಕು, ಕುಮಾರಸ್ವಾಮಿ ಕೇಂದ್ರ ರಾಜ್ಯದ ಎಲ್ಲ ಅಧಿಕಾರಿಗಳನ್ನು ಒಳ್ಳೆಯ ರೀತಿ ನಡೆಸಿಕೊಳ್ಳುತ್ತಾರೆ.
ಅಧಿಕಾರಿಗಳು ರಾಜಕಾರಣಿಗಳು ಕೈಗೊಂಬೆಯಾಗಿದ್ದಾರೆ
ಅಧಿಕಾರಿಗಳಿಗೆ ಕುಮಾರಣ್ಣ ಅವರಿಂದ ನೋವಾಗಿದ್ಯಾ? ಅವರಿಗೆ ನೋವಾಗಿದ್ದರೆ ಅದಕ್ಕೊಂದು ರೀತಿ ನೀತಿ ಇದೆ. ನ್ಯಾಯಾಲಯಕ್ಕೆ ಬೇಕಿದ್ದರೆ ಹೋಗಬಹುದಿತ್ತು. ಅದನ್ನು ಬಿಟ್ಟು ಸರ್ಕಾರಿ ನೌಕರ ಕೇಂದ್ರ ಸಚಿವ ಈ ರೀತಿ ಪತ್ರ ಹರಿಬಿಟ್ಟಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಎಷ್ಟಿದೆ ಎಂದು ಗೊತ್ತಾಗುತ್ತದೆ. ಅಧಿಕಾರಿಗಳು ರಾಜಕಾರಣಿಗಳು ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಲ್ಲಿ ಬಹಳಷ್ಟು ಪ್ರಮಾಣಿಗಕರು ಇದ್ದಾರೆ, ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮೇಲೆ ಇನ್ಸ್‌ಪೆಕ್ಟರ್ ಒಬ್ಬರು ಯಾಕೆ ಆರೋಪ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿಮ್ಮ ಐಪಿಎಸ್ ಅಧಿಕಾರ ಇರೋದು, ಐಪಿಎಸ್ ಅಧಿಕಾರಿಗೆ ಒಬ್ಬರಿಗೆ ಒಂದು ರಾಜ್ಯದಲ್ಲಿ 5 ವರ್ಷ ಮಾತ್ರ. ರಾಜ್ಯಕ್ಕೆ ಬಂದು 11 ವರ್ಷ ಆಗಿದೆ. ಕುಮಾರಣ್ಣ ನಿಮ್ಮಂತ ಹಲವರ ಸಂಚಿನಿಂದ ಆರೋಪಿ ಅಷ್ಟೇ, ಕುಮಾರಣ್ಣ ಅಪರಾಧಿ ಅಲ್ಲ.
ನೀವು ಯಾರ ಕಾಲು ಹಿಡಿದು ರಾಜ್ಯದಲ್ಲಿ ಉಳಿದುಕೊಂಡಿದ್ದೀರಾ? ಅವರಿವರ ಮನೆಯಲ್ಲಿ ಚಮಚಗಿರಿ ಮಾಡುವ ಅಧಿಕಾರಿಗಳು ಇದ್ದಾರೆ. ಕರ್ನಾಟಕವನ್ನು ನೀವು ಹಂದಿ ತರ ಮೇಯಲು ಇದ್ದೀರಾ? ನೀವು ಎಡಿಜಿಪಿ ಆದ್ರೆ ಕೊಂಬಿಲ್ಲ, ನಿಮ್ಮ ಆಸ್ತಿಯನ್ನು ಬಹಿರಂಗಪಡಿಸಿ. ಇತನ ವಿರುದ್ಧ ಮೇಲಾಧಿಕಾರಿಗಳು ಕ್ರಮ ವಹಿಸಬೇಕು. ಪ್ರೋಟೋಕಾಲ್ ವ್ಯವಸ್ಥೆಯೇ ಇಲ್ಲ, ಕೆಲವು ನಮ್ಮ ಸ್ನೇಹಿತ ಕುಮ್ಮಕ್ಕಿನಿಂದ ಈ ಕೆಲಸ ಮಾಡಿದ್ದಾರೆ. ಅಧಿಕಾರ ಎನ್ನೋದನ್ನು ಯಾರಿಗೂ ಶಾಶ್ವತ ಅಲ್ಲ ಎಂದು ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ಸಾರಾ ಮಹೇಶ್ ಕಿಡಿಕಾರಿದ್ದಾರೆ.

Post a Comment