Bengaluru: ಆನೇಕಲ್​​ನಲ್ಲಿ ಪಾಕ್ ಪ್ರಜೆಗಳ ಬಂಧನ; ಪಾಕ್‌ ಟೀಂ ಬಲೆಗೆ ಬಿದ್ದಿದ್ದೇ ರಣರೋಚಕ, ತನಿಖೆ ವೇಳೆ ಹೊರಬಿತ್ತು ಭಯಾನಕ ಸತ್ಯ


 ಪಾಕಿಸ್ತಾನ ಪ್ರಜೆಗಳು ಅರೆಸ್ಟ್

ಬೆಂಗಳೂರು ಉಗ್ರರ ಟಾರ್ಗೆಟ್ ಆಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಏಕೆಂದರೆ ರಾಜಧಾನಿಯಲ್ಲೇ ಅಡಗಿದ್ದ ಪಾಕಿಸ್ತಾನ ಪ್ರಜೆಯನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇದು ಸಿಲಿಕಾನ್ ಸಿಟಿ ಜನರಿಗೆ ಎದೆನಡುಕ ಹುಟ್ಟಿಸಿದೆ. ಪೊಲೀಸರ ತನಿಖೆ ವೇಳೆ ಪಾಕ್‌ ಗ್ಯಾಂಗ್ ಭಯಾನಕ ರಹಸ್ಯವೊಂದನ್ನ ಬಾಯ್ಬಿಟ್ಟಿದೆ.

 ಬೆಂಗಳೂರು: ಪಾಪಿ ಪಾಕಿಸ್ತಾನ (Pakistan) ಇಡೀ ವಿಶ್ವಕ್ಕೆ ಸೆರಗಿನ ಕೆಂಡವಾಗಿದೆ. ಭಾರತಕ್ಕೆ (India) ಮಗ್ಗಲ ಮುಳ್ಳಾಗಿ ಮದ್ದು, ಗನ್ನು, ಗುಂಡು ಅಂತ ರಕ್ತದೋಕುಳಿ ಹರಿಸಲು ಕುತಂತ್ರ ಮಾಡುತ್ತಾನೆ ಬಂದಿದೆ. ಹಾವಿಗೆ ಹಾಲೆರೆದಂತೆ ಉಗ್ರರನ್ನ ತನ್ನ ಮಡಿಲಲ್ಲೇ ಇಟ್ಕೊಂಡು ಸಾಕ್ತಿದೆ. ಈ ನಡುವೆ ಐಟಿಸಿಟಿಯಲ್ಲಿ (Bengaluru) ಪಾಕ್‌ ಪ್ರಜೆ ಅಡಗಿದ್ದ ರಣರಹಸ್ಯ ಬಯಲಾಗಿದೆ. ಇದರಿಂದ ಬೆಂಗಳೂರನ್ನೇ ಟಾರ್ಗೆಟ್‌ ಮಾಡಿ ಪಾಕ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ಯಾ ಅನ್ನೋ ಭೀತಿ ಹುಟ್ಕೊಂಡಿದೆ.

ಆನೇಕಲ್‌‌ನಲ್ಲಿ ಅಡಗಿದ್ದ ಪಾಕ್‌ ಪ್ರಜೆ ಅರೆಸ್ಟ್‌‌‌‌‌!

ಅಸ್ಸಾಂನಲ್ಲಿ ಐಇಡಿ ಬಾಂಬ್ ಇಟ್ಟು ಬೆಂಗಳೂರಲ್ಲಿ ಅಡಗಿದ್ದ ಉಲ್ಫಾ ಶಂಕಿತ ಉಗ್ರನನ್ನ ಮೊನ್ನೆಯಷ್ಟೇ NIA ಹೆಡೆಮುರಿ ಕಟ್ಟಿದೆ. ಇದರ ಬೆನ್ನಲ್ಲೇ ಆನೇಕಲ್‌ನಲ್ಲಿ ಪಾಕಿಸ್ತಾನದ ಪ್ರಜೆಯನ್ನ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೆ, ಇದೇ ರಶೀದ್ ಅಲಿ ಆ್ಯಂಡ್‌ ಗ್ಯಾಂಗ್‌ನ್ನ ಪೊಲೀಸರು ಲಾಕ್‌ ಮಾಡಿದ್ದು, ಜಿಗಣಿ ಬಳಿಯ ಅಪಾರ್ಟ್ಮೆಂಟ್‌ನಲ್ಲಿ ಕುಟುಂಬ ಸಮೇತ ವಾಸವಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಪಾಕ್‌ ಪ್ರಜೆಯ ಕುಟುಂಬ ವಶಕ್ಕೆ ಪಡೆದು ಖಾಕಿ ಡ್ರಿಲ್‌ ಮಾಡ್ತಿದೆ. ತನಿಖೆಯಲ್ಲಿ ಪಾಕ್‌‌ ಪ್ರಜೆ ರಶೀದ್ ಅಲಿ ಹಿನ್ನೆಲೆ ಏನು? ಪಾಕ್‌ ಬಿಟ್ಟು ಭಾರತಕ್ಕೆ ಬಂದಿದ್ದು ಹೇಗೆ ಅನ್ನೋ ಕೆಲ ಸತ್ಯ ಹೊರಬಿದ್ದಿವೆ.

ಪಾಕ್‌ ಪಾಪಿಯ ಹೆಜ್ಜೆ!

ಪಾಕಿಸ್ತಾನ ಮೂಲದನಾಗಿರೋ ರಶೀದ್ ಅಲಿ ಸಿದ್ಧಿಕ್‌, ಪ್ರೀತಿಸಿದ ಯುವತಿ ಹಾಗೂ ಧರ್ಮದ ವಿಚಾರದಲ್ಲಿ ಪಾಕ್ ಬಿಟ್ಟು ಬಾಂಗ್ಲಾ ಪರಾರಿಯಾಗಿದ್ದ. 2011ರಲ್ಲಿ ಢಾಕಾದಲ್ಲಿ ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗಿ, ನೇಪಾಳಕ್ಕೆ ಬಂದಿದ್ದ. ಅಲ್ಲಿ ಮೆಹದಿ ಪೌಂಡೇಷನ್ ಸೇರಿಕೊಂಡು ಧರ್ಮಗುರುಗಳ ಜೊತೆ ಪ್ರಚಾರ ಮಾಡಿಕೊಂಡಿದ್ನಂತೆ. ಬಳಿಕ 2014ರಲ್ಲಿ ಕುಟುಂಬ ಸಮೇತ ಭಾರತ ದೆಹಲಿಗೆ ಎಂಟ್ರಿ ಕೊಟ್ಟಿದ್ದ.

ಸ್ಥಳೀಯ ವ್ಯಕ್ತಿ ನೆರವಿನಿಂದ ಎಲ್ಲಾ ಗುರುತಿನ ದಾಖಲೆಗಳನ್ನೂ ಶರ್ಮಾ ಅನ್ನೋ ಹೆಸರಲ್ಲಿ ಮಾಡಿಸಿಕೊಂಡಿದ್ದ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮಾಡಿಸ್ಕೊಂಡು 4 ವರ್ಷಗಳ ಬಳಿಕ ಅಂದರೆ 2018ರಲ್ಲಿ ಬೆಂಗಳೂರಿಗೆ ಶಿಫ್ಟ್‌‌‌ ಆಗಿದ್ದ. ಶರ್ಮಾ ಅಂತ ಹೇಳಿಕೊಂಡೇ ಜಿಗಣಿಯ ಅಪಾರ್ಟ್‌ಮೆಂಟೊಂದರಲ್ಲಿ ವಾಸವಾಗಿದ್ದಾನೆ. ಅಲ್ಲಿಯೇ ರೆಸ್ಟೋರೆಂಟ್ ಓಪನ್‌ ಮಾಡಿದ್ದು, ಆರ್ಡರ್ ನೀಡಿದರೆ ಚಿಕನ್ ಬಿರಿಯಾನಿ ಮಾಡಿಕೊಡ್ತಿದ್ದ ಅನ್ನೋದು ಗೊತ್ತಾಗಿದೆ. ಖಚಿತ ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಯಾವ ಕಾರಣಕ್ಕೆ ಮಾರುವೇಷದಲ್ಲಿ ಉಳಿದುಕೊಂಡಿದ್ದರು?

ಕೇವಲ ಧರ್ಮ ‌ಪ್ರಚಾರಕ್ಕೆ ರಶೀದ್ ಕುಟುಂಬ ಭಾರತಕ್ಕೆ ಬಂದಿತ್ತಾ ಅಥವಾ ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಮಸಲತ್ತು ನಡೆಸಿತ್ತಾ ಅನ್ನೋದ್ರ ಸತ್ಯ ಕೆದಕ್ತಿದೆ ಖಾಕಿ. ಮುಸ್ಲಿಂ ಧರ್ಮಪ್ರಚಾರಕ್ಕೆ ಪಾಕಿಸ್ತಾನದಿಂದ ಹಣ ಸಂದಾಯ ಆಗ್ತಿತ್ತಾ ಅನ್ನೋ ಶಂಕೆ ಮೂಡಿದೆ. ಅದರಲ್ಲೂ ಬಾಡಿಗೆ ಇದ್ದ ಮನೆಯ ಗೋಡೆ ಮೇಲೆ ಮೆಹದಿ ಫೌಂಡೇಷನ್ ಇಂಟರ್ ನ್ಯಾಷನಲ್ ಅಂತ ಬರೆದಿದ್ದು, ಗೋಹರ್ ಸಾಹಿ ಹೆಸರಿನ ಮುಸ್ಲಿಂ ಧರ್ಮ ಗುರುವಿನ ಫೋಟೋ ಕೂಡ ಪತ್ತೆಯಾಗಿದೆ. ಇದರಿಂದ ಅಕ್ರಮವಾಗಿ ನೆಲೆಸಿದ ಪಾಕಿಸ್ತಾನಿಯರ ಮೇಲೆ ಅನುಮಾನ ದುಪ್ಪಟ್ಟಾಗಿದೆ. ಅದಲ್ದೇ ಈತನ ಪತ್ನಿ ಆಯೇಷಾ, ಆಶಾ ಶರ್ಮಾ ಹೆಸರಿನಲ್ಲಿ, ಅತ್ತೆ ರುಬಿನಾ, ರಾಣಿ ಶರ್ಮಾ ಹೆಸರಿನಲ್ಲಿ, ಮಾವ ಮೊಹಮ್ಮದ್ ಯೂನಸ್, ರಾಮ್ ಬಾಬು ಶರ್ಮಾ ಹೆಸರಿನಲ್ಲಿ ದಾಖಲೆ ಸೃಷ್ಟಿಸಿಕೊಂಡಿದ್ದರು.ಕೇಂದ್ರದತ್ತ ಪರಮೇಶ್ವರ್ ಬೊಟ್ಟು!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್‌, ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಆತ 10 ವರ್ಷದಿಂದ ಇಲ್ಲಿದ್ದಾನೆ ಅಂದ್ರೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ವಾ? ಅಂತ ಪ್ರಶ್ನೆ ಮಾಡಿದ್ದಾರೆ.

ಪಾಕ್‌ ಪ್ರಜೆ ಹಾಗೂ ಆತನ ಪತ್ನಿ ಆಯಿಷಾಳನ್ನ ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಮಧ್ಯೆ ಜಿಗಣಿ ಠಾಣೆಗೆ ಭೇಟಿ ನೀಡಿದ ಇಂಟೆಲಿಜೆನ್ಸ್‌ ಬ್ಯೂರೋ ಅಧಿಕಾರಿಗಳು ಪ್ರಕರಣ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟಾರೆ ಯಾವ ಕಾರಣಕ್ಕೆ ಪಾಕಿಸ್ತಾನಿಯರು ಮಾರುವೇಷದಲ್ಲಿ ಉಳಿದುಕೊಂಡಿದ್ದರು? ಯಾವುದಾದರೂ ಸಂಘಟನೆ ಜೊತೆಗೆ ಲಿಂಕ್‌ ಇದ್ಯಾ ಅನ್ನೋದರ ಬಗ್ಗೆ ಖಾಕಿ ತನಿಖೆ ಬಳಿಕವೇ ಹೊರಬೀಳಲಿದೆ. 

Post a Comment

Previous Post Next Post