ಸಿಎಂ ಸಿದ್ದರಾಮಯ್ಯ
2020ರಲ್ಲೇ ಶೇಕಡಾ 50:50 ಬದಲಿ ನಿವೇಶನಕ್ಕೆ ಬ್ರೇಕ್ ಬಿದ್ದಿತ್ತು, ಬದಲಿ ನಿವೇಶನ ಕೊಡಬಾರದೆಂದು ಅಂದಿನ ಸರ್ಕಾರ ಆದೇಶಿಸಿತ್ತು. ಆದರೆ 2021ರಲ್ಲಿ ಸಿಎಂ ಪತ್ನಿ ಪಾರ್ವತಿ ಹೆಸರಿಗೆ ನಿವೇಶನ ಮಂಜೂರು ಮಾಡಲಾಗಿದೆ. ಇದು ಕಾನೂನು ಬಾಹಿರ ಹಂಚಿಕೆ ಅಂತ ವಿಪಕ್ಷಗಳ ಆರೋಪ ಮಾಡಿದೆ. ಬೆಂಗಳೂರು: ರಾಜ್ಯದಲ್ಲಿ ಮೂಡಾ ಹಗರಣ (MUDA Scam) ಭಾರೀ ಸದ್ದು ಮಾಡುತ್ತಿದೆ. ಸದ್ಯ ಹರಣದ ಉರುಳು ಸಿಎಂ ಸಿದ್ದರಾಮಯ್ಯ (CM Siddaramaiah) ಕುಟುಂಬಕ್ಕೂ (Family) ಸುತ್ತಿಕೊಂಡಿದ್ದು, ಸಿದ್ದರಾಮಯ್ಯ ಪತ್ನಿಗೂ ಮೂಡಾದಲ್ಲಿ ಕಾನೂನು (Law) ಮೀರಿ ಬದಲಿ ನಿವೇಶನ ಹಂಚಿಕೆ (Property** ) ಮಾಡಿರುವ ಆರೋಪ ಕೇಳಿ ಬಂದಿದೆ.**ಏನಿದು ಆರೋಪ?1997ರಲ್ಲಿ ಮುಡಾದಿಂದ 3.16 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಭೂಮಿಗೆ ಪರಿಹಾರವನ್ನೂ ಸಿಎಂ ಪತ್ನಿ ಪಡೆದಿದ್ದರಂತೆ, ಆದರೆ 2021ರಲ್ಲಿ ತಾವು ಕೊಟ್ಟಿದ್ದ ಭೂಮಿಗೆ ಬದಲಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಸಂಬಂಧಿತ ಸುದ್ದಿMysuru: ಏಷ್ಯನ್ ಪೇಂಟ್ಸ್‌ನಿಂದ ಮೈಸೂರಿನಲ್ಲಿ 1,305 ಕೋಟಿ ಹೂಡಿಕೆMysuru: ಅಳಿಯನಿಂದಲೇ ಮಗನ ಕೊಲೆ; ಪುತ್ರನ ಸಾವಿನಿಂದ ಮನನೊಂದು ನೇಣಿಗೆ ಶರಣಾದ ತಾಯಿSiddaramaiah: ಮೊಬೈಲ್ ಬಳಸೋದೇ ಇಲ್ವಂತೆ ಸಿಎಂ ಸಿದ್ದರಾಮಯ್ಯ! ಕಾರಣ ಏನು ಗೊತ್ತಾ?Mysuru News: ಮಳೆ ಆರ್ಭಟ ಕಡಿಮೆ ಹಿನ್ನೆಲೆ ಜಲಾಶಯಗಳ ಒಳಹರಿವಿನಲ್ಲಿ ಇಳಿಕೆ! 2020ರಲ್ಲೇ ಶೇಕಡಾ 50:50 ಬದಲಿ ನಿವೇಶನಕ್ಕೆ ಬ್ರೇಕ್ ಬಿದ್ದಿತ್ತು, ಬದಲಿ ನಿವೇಶನ ಕೊಡಬಾರದೆಂದು ಅಂದಿನ ಸರ್ಕಾರ ಆದೇಶಿಸಿತ್ತು. ಆದರೆ 2021ರಲ್ಲಿ ಸಿಎಂ ಪತ್ನಿ ಪಾರ್ವತಿ ಹೆಸರಿಗೆ ನಿವೇಶನ ಮಂಜೂರು ಮಾಡಲಾಗಿದೆ. ಇದು ಕಾನೂನು ಬಾಹಿರ ಹಂಚಿಕೆ ಅಂತ ವಿಪಕ್ಷಗಳ ಆರೋಪ ಮಾಡಿದೆ.ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಇದು ಬಿಜೆಪಿ ಯವರ ಕಾಲದಲ್ಲಿ ಆಗಿದೆ. ನನ್ನ ಹೆಂಡತಿಗೆ ಹಿಂದೆ ಸೈಟ್ ಹಂಚಲಾಗಿತ್ತು. 1 ಎಕರೆ 15 ಗುಂಟೆ ನನ್ನ ಹೆಂಡತಿ ಹೆಸರಲ್ಲಿರುವ ಜಮೀನು, ನನ್ನ ಬಾಮೈದ ತಗೊಂಡಿದ್ದ ಅದನ್ನು ನನ್ನ ಹೆಂಡತಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿ ಇದ್ದಾಗ ತಗೊಂಡಿಲ್ಲ. ಕಾನೂನು ಪ್ರಕಾರ ನಮಗೆ 50:50ಕೊಡೋದಾಗಿ ಮೂಡಾದವರು ಹೇಳಿದ್ದರು. ಮಲ್ಲಿಕಾರ್ಜುನ್ ಎಂಬ ನನ್ನ ಬಾಮೈದ ಹರಿಶನ ಕುಂಕಮ ರೀತಿಯಲ್ಲಿ ಗಿಫ್ಟ್ ಕೊಟ್ಟು ಬಿಟ್ಟ, ಆದರೆ ಅದನ್ನು ಮೂಡದವರು ನಮ್ಮ ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದೆ ಹಾಗೇ ಆಗೋಯ್ತು, ಅದಕ್ಕೆ ಮೂಡದವರು ನಿಮಗೆ 50-50 ಕೊಡ್ತೀವಿ ಎಂದಿದ್ದರು. ಅದಕ್ಕೆ ಬೇರೆ ಕಡೆ ಜಮೀನು ಕೊಟ್ಟಿದ್ದಾರೆ, ಇದು ತಪ್ಪಾ? ಕಾನೂನಿನ ಪ್ರಕಾರವೇ ಜಮೀನು ನಮಗೆ ಹಂಚಿದ್ದಾರೆ ಎಂದು ಸ್ಪಷ್ಟಪಡಿಸಿದ್ದರೆ.ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಮಂಜೂರುಉಳಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಅವರಿಗೆ ಮೈಸೂರಿನ ಕೆಸರೆ ಗ್ರಾಮದ ಜಾಗದ ಬದಲು ಐಶಾರಾಮಿ ವಿಜಯನಗರ ಲೇಔಟ್‌ನಲ್ಲಿ ನಿವೇಶನ ಮಂಜೂರು ಮಾಡಲಾಗಿದೆ. ಮೈಸೂರು ತಾಲೂಕು ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯ 3.16 ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಪರ್ಯಾಯವಾಗಿ ವಿಜಯನಗರ ಬಡಾವಣೆಯಲ್ಲಿ 14ನೇ ನಿವೇಶನ ಮಂಜೂರು ಮಾಡಲಾಗಿದೆ. 38,284 ಚದರ ಅಡಿ ಬದಲಿ ನಿವೇಶನ ನೀಡಿ 30-12-2021ರಂದು ಹಿಂದಿನ ಮುಡಾ ಆಯುಕ್ತ ನಟೇಶ್ ಅವರು ಆದೇಶ ನೀಡದ್ದಾರೆ. ಇದನ್ನೂ ಓದಿ: Belagavi: ಉದ್ಯಮಿ ವಿಜಯ್ ಸಂಕೇಶ್ವರ್ ಪುತ್ರಿ ಕುಟುಂಬದಲ್ಲಿ ಬಿರುಗಾಳಿ; ಆಸ್ತಿಗಾಗಿ ಮಾಟಮಂತ್ರ?ವಿಜಯನಗರದಲ್ಲಿ ನಿವೇಶನ ಕೊಟ್ಟಿರುವುದು ಯಾಕೆ?ಇನ್ನು, ಮೂಡಾ ಹಗರಣ ವಿಚಾರ ಮೈಸೂರಿನಲ್ಲಿ ಮಾತನಾಡಿದ ಆರ್.ಟಿ.ಐ ಕಾರ್ಯಕರ್ತ ಗಂಗರಾಜು, ಬದಲಿ ನಿವೇಶನ ನೀಡಿ ಲಾಭ ಮಾಡಿಕೊಟ್ಟಿರುವುದು ನಿಜ. ಮೈಸೂರಿನ ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯಲ್ಲಿ 3.16 ಗಂಟೆ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಜಯನಗರದ ಬಡಾವಣೆಯಲ್ಲಿ 14ನೇ ನಿವೇಶನವನ್ನು ಸಿಎಂ ಪತ್ನಿಯ ಹೆಸರಿಗೆ ನೀಡಿದ್ದಾರೆ. ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ, ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದಾರೆ. ಹಾಗಾಗಿ ಮೂಡಾದ 50:50 ಹಗರಣದಲ್ಲಿ ಅವರು ಸಿಎಂ ಪತ್ನಿಯು ಭಾಗಿಯಾಗಿದ್ದಾರೆ, ಆರ್ಥಿಕ ಲಾಭವನ್ನು ಸಿಎಂ ಪತ್ನಿಗೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.ಬಹುಕೋಟಿ ಹಗರಣ ನಡೆದಿರುವುದಕ್ಕೆ ದಾಖಲೆ ಇದೆ ಮೈಸೂರಿನಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಮಾತನಾಡಿ, ಸಚಿವರು ಅಕ್ರಮದ ಭಾಗಿದಾರರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಸಚಿವ ಬೈರತಿ ಸುರೇಶ್ ಸಭೆ ನಡೆಸಿದ್ದರು. ಆದರೆ ಆರೋಪ ಮಾಡಿರುವ ನನ್ನನ್ನು ಸಭೆಗೆ ಕರೆದಿಲ್ಲ. ಯಾವ ಸರ್ವೇ ನಂಬರ್ ಯಾವ ಸೈಟು ಎಷ್ಟು ಸೈಟು ಎಂಬ ಮಾಹಿತಿ ಇಲ್ಲದೆ ಸಭೆ ಮಾಡಿದ್ದಾರೆ. ಬಹುಕೋಟಿ ಹಗರಣ ನಡೆದಿರುವುದಕ್ಕೆ ದಾಖಲೆ ಇದೆ. ಅಧಿಕಾರಿಗಳ ಮೇಲೆ ಸುಮೋಟೋ ದಾಖಲಿಸಿ ತನಿಖೆ ಮಾಡಬೇಕಿತ್ತು, ಅದನ್ನು ಬಿಟ್ಟು ವರ್ಗಾವಣೆ ಮಾಡಿದ್ದಾರೆ. ಅಮಾನತು ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕಿತ್ತು ಅದನ್ನು ಮಾಡಿಲ್ಲ. ಕೋಟಿ ಕೋಟಿ ಲೂಟಿ ಮಾಡಿರುವವರಿಗೆ ವರ್ಗಾವಣೆ ಇಂದು ಶಿಕ್ಷೆಯೇ, ಈ ಬಗ್ಗೆ ನಮ್ಮ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ. ಸದನದಲ್ಲಿ ಈ ಮೂಡಾ ಹಗರಣ ಮುಂದಿಟ್ಟು ಹೋರಾಟ ಮಾತನಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Post a Comment