ಸಾಂದರ್ಭಿಕ ಚಿತ್ರ
ಏಕಾಏಕಿ 400 ಕ್ಕೂ ಹೆಚ್ಚು ವಿಮಾನಗಳು ತನ್ನ ಪ್ರಯಾಣವನ್ನು ರದ್ದುಗೊಳಿಸಿದೆ. ಇದರಿಂದ ಸುಮಾರು 50000 ಕ್ಕೂ ಹೆಚ್ಚು ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸುದ್ದಿಯ ವಿವರ ಇಲ್ಲಿದೆ. ನವದೆಹಲಿ: ಏಕಾಏಕಿ 400 ಕ್ಕೂ ಹೆಚ್ಚು (407 Flights Cancel) ವಿಮಾನಗಳು ತನ್ನ ಪ್ರಯಾಣವನ್ನು ರದ್ದುಗೊಳಿಸಿರುವ ಘಟನೆ ಕೆನಡಾದಲ್ಲಿ (Canada-based Airlines) ನಡೆದಿದೆ. ಇದರಿಂದ ಸುಮಾರು 50000 ಕ್ಕೂ ಹೆಚ್ಚು ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.ಕೆನಡಾದಲ್ಲಿ 400 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ರದ್ದಾಗಿದ್ದು, ಇದಕ್ಕೆ ಕಾರ್ಮಿಕರು ನಡೆಸುತ್ತಿರುವ ಮುಷ್ಕರವೇ ಕಾರಣ ಎನ್ನಲಾಗಿದೆ. ನಿರ್ವಹಣಾ ಕಾರ್ಮಿಕರ ಸಂಘ ಮುಷ್ಕರ ನಡೆಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ವೆಸ್ಟ್ ಜೆಟ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ವೆಸ್ಟ್‌ಜೆಟ್ ಕೆನಡಾದ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದು, ಮುಷ್ಕರದಿಂದಾಗಿ 407 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇದು ದೇಶದಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳಲ್ಲಿ 49,000 ಕ್ಕೂ ಹೆಚ್ಚು ಜನರ ಪ್ರಯಾಣದ ಮೇಲೆ ಪರಿಣಾಮ ಬೀರಿದೆ.ಸಂಬಂಧಿತ ಸುದ್ದಿCanada: ಪಾಕ್ ಬೆಂಬಲಿತ ಖಲಿಸ್ತಾನಿ ಭಯೋತ್ಪಾದಕರನ್ನು ‘ನೋ ಫ್ಲೈ ಲಿಸ್ಟ್’ಗೆ ಸೇರಿಸಿದ ಕೆನಡಾ!
IND vs CAN: ಮಳೆಯಿಂದ ರದ್ದಾದ ಭಾರತ vs ಕೆನಾಡ ಪಂದ್ಯ! ಈಗ ಹೇಗಿದೆ ಸೂಪರ್ 8 ಪರಿಸ್ಥಿತಿ?
ತಾಯಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗಲೇ ಗುಂಡಿಕ್ಕಿ ಹತ್ಯೆ; ಕೆನಡಾದಲ್ಲಿ ಭಾರತೀಯರೇ ಟಾರ್ಗೆಟ್ ?
CAN vs USA: ವಿಶ್ವಕಪ್‌ನ ಮೊದಲ ಪಂದ್ಯವೇ ರಣರೋಚಕ! ತವರಿನಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಯುಎಸ್‌ಎ!ಇದನ್ನೂ ಓದಿ: New Criminal Laws: IPC ಸೆಕ್ಷನ್‌ಗೆ ಗುಡ್‌ಬೈ! ಇಂದಿನಿಂದ ದೇಶಾದ್ಯಂತ 3 ಹೊಸ ಕ್ರಿಮಿನಲ್ ಕಾನೂನು ಜಾರಿ!ಏರ್‌ಕ್ರಾಫ್ಟ್ ಮೆಕ್ಯಾನಿಕ್ಸ್ ಫ್ರಾಟರ್ನಲ್ ಅಸೋಸಿಯೇಷನ್ (AMFA) , US ಯೂನಿಯನ್ ಸಂಘಟನೆಯ ಸದಸ್ಯರು ಶುಕ್ರವಾರ ಸಂಜೆ ಮುಷ್ಕರವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದ್ದು, ವೆಸ್ಟ್‌ಜೆಟ್ ಅಧ್ಯಕ್ಷ ಡೆಡೆರಿಕ್ ಪೆನ್ ಅವರು ಪ್ರತಿಕ್ರಿಯೆ ನೀಡಿದ್ದು, ಕಂಪನಿಯು ಪ್ರತಿಭಟನೆಗೆ ಪ್ರತಿಕ್ರಿಯಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಸ್ಥಿರವಾದ ನೆಟ್‌ವರ್ಕ್ ರಚಿಸಲು ಪೂರಕವಾದ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮತ್ತೊಂದೆಡೆ ಏರ್‌ಲೈನ್‌ನ ಸಿಇಒ ಅಲೆಕ್ಸಿಸ್ ವಾನ್ ಹೊಯೆನ್ಸ್‌ಬ್ರೂಚ್ ಅವರು, ಕೆನಡಾದಲ್ಲಿ ಮುಷ್ಕರ ಮಾಡಲು ಪ್ರಯತ್ನಿಸುತ್ತಿರುವ ಪರಿಸ್ಥಿತಿಗೆ ಯುಎಸ್ ಮೂಲದ ಒಕ್ಕೂಟವನ್ನು ನೇರವಾಗಿ ದೂಷಿಸಿದರು. ಸರ್ಕಾರದ ಮಧ್ಯಸ್ಥಿಕೆಯ ನಂತರ, ಒಕ್ಕೂಟದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ಪರಿಸ್ಥಿತಿ ಹಾಗೆಯೇ ಇದೆ ಎಂದು ವಾನ್ ಹೇಳಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಗುರುವಾರ ಸರ್ಕಾರ ಮಧ್ಯಸ್ಥಿಕೆಗೆ ಆದೇಶ ಹೊರಡಿಸಿತ್ತು. ಇದಾದ ನಂತರ, ಹಠಾತ್ ಮುಷ್ಕರದ ಘೋಷಣೆಯಿಂದಾಗಿ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಮೇಲೆ ಪರಿಣಾಮ ಬೀರಲಾರಂಭಿಸಿತು. ಇದರಿಂದಾಗಿ ಸೋಮವಾರದಿಂದ ಭಾನುವಾರದವರೆಗೆ ವಿಮಾನಗಳನ್ನು ನಿಲ್ಲಿಸುವುದನ್ನು ಮುಂದುವರಿಸುವುದಾಗಿ ವೆಸ್ಟ್‌ಜೆಟ್ ಹೇಳಿದೆ. ವಿಮಾನಯಾನ ಸಂಸ್ಥೆಯು ಸುಮಾರು 200 ವಿಮಾನಗಳನ್ನು ಹೊಂದಿದೆ ಮತ್ತು ಭಾನುವಾರ ಸಂಜೆಯ ವೇಳೆಗೆ ಸುಮಾರು 30 ವಿಮಾನಗಳನ್ನು ನಿರ್ವಹಿಸುವುದಾಗಿ ಹೇಳಿದ್ದಾರೆ.ಇದನ್ನೂ ಓದಿ: LPG Price Slashed: ಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್‌ನ್ಯೂಸ್! ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ!ಏರ್‌ಕ್ರಾಫ್ಟ್ ಮೆಕ್ಯಾನಿಕ್ಸ್ ಫ್ರಾಟರ್ನಲ್ ಅಸೋಸಿಯೇಷನ್ ಸಂಧಾನಕ್ಕೆ ಒಪ್ಪದ ಕಾರಣ, ಯೂನಿಯನ್ ಸದಸ್ಯರು ಶುಕ್ರವಾರ ಸಂಜೆ ಮುಷ್ಕರವನ್ನು ಪ್ರಾರಂಭಿಸಿದ್ದರು. ವಾರಾಂತ್ಯದಲ್ಲಿ ವಿಮಾನ ಪ್ರಯಾಣದ ಮೇಲೆ ಪರಿಣಾಮ ಬೀರುವುದರಿಂದ ಪ್ರಯಾಣಿಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದರು. ಪ್ರಧಾನಿ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರವು ಮುಷ್ಕರವನ್ನು ನಿಲ್ಲಿಸಲು ಪ್ರಯತ್ನಗಳನ್ನು ಮಾಡಿತು ಆದರೆ ಯಶಸ್ವಿಯಾಗಲಿಲ್ಲ. ಈತನ್ಮಧ್ಯೆ, ವೆಸ್ಟ್‌ಜೆಟ್‌ನ ಮೆಕ್ಯಾನಿಕ್‌ಗಳಿಗೆ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಒಪ್ಪಂದದ ಪ್ರಸ್ತಾಪವನ್ನು ಒಕ್ಕೂಟವು ತಿರಸ್ಕರಿಸಿದೆ ಎಂದು ಅಲೆಕ್ಸಿಸ್ ವಾಘನ್ ಹೇಳಿದ್ದಾರೆ. ಈ ಮುಷ್ಕರದಿಂದ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾದರೆ ಅದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಅಲೆಕ್ಸಿಸ್ ವಾಘನ್ ಹೇಳಿದ್ದಾರೆ.

Post a Comment