ಸಾಂದರ್ಭಿಕ ಚಿತ್ರ
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷಗಳು ಗೆದ್ದಿರುವ ಸ್ಥಾನಗಳ ಸಂಖ್ಯೆ ಹೀಗಿದೆ.ನವದೆಹಲಿ: ಲೋಕಸಭೆ ಚುನಾವಣೆ 2024ರಲ್ಲಿ (Lok Sabha Election 2024) ಕಾಂಗ್ರೆಸ್ ಪಕ್ಷ ಉತ್ತಮ ಮುನ್ನಡೆ ಸಾಧಿಸಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ತಮ್ಮ ಮೂಗಿನ ನೇರಕ್ಕೆ ಬಹುತೇಕ ಸಂಸ್ಥೆಗಳು ನಡೆಸಿದ ಎಕ್ಸಿಟ್ ಪೋಲ್‌ಗಳ ಭವಿಷ್ಯ ನಿಜವಲ್ಲ, ನಮ್ಮ ಮತವೇ ನಿಜವಾದ ತೀರ್ಪು ಅನ್ನೋದನ್ನು ಮತದಾರರು ಸಾಬೀತುಪಡಿಸಿದ್ದಾರೆ. ಆ ಮೂಲಕ ಎಕ್ಸಿಟ್ ಪೋಲ್‌ಗಳ ವಿಶ್ವಾಸಾರ್ಹತೆ ಮತ್ತೊಮ್ಮೆ ಕುಸಿದಿದೆ.ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರಳ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದ್ದು, ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಎನ್‌ಡಿಎ ಗೆದ್ದು ಅಧಿಕಾರಕ್ಕೆ ಮತ್ತೊಮ್ಮೆ ಏರುತ್ತಾದರೂ ಅದು ಬಿಜೆಪಿಯ ನಿಜವಾದ ಗೆಲುವಲ್ಲ, ಅತ್ತ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟ ಬಹುಮತ ಪಡೆಯದೆ ಸೋತರೂ ಅದು ಸೋಲಲ್ಲ. ಯಾಕೆಂದರೆ ಬಿಜೆಪಿ ನಿರೀಕ್ಷಿಸಿದ್ದಕ್ಕಿಂತ ಅರ್ಧದಷ್ಟು ಸ್ಥಾನಗಳು ಕಮ್ಮಿ ಆಗಿವೆ. ವಿಪಕ್ಷಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸ್ಥಾನ ಬಂದಿವೆ. ಇದು ಸೋಲಿನಲ್ಲೂ ಗೆಲವು ಎಂದು ವಿಶ್ಲೇಷಿಸಲಾಗುತ್ತಿದೆ.ಸಂಬಂಧಿತ ಸುದ್ದಿSonu Nigam: ಅಯೋಧ್ಯೆಯಲ್ಲಿ BJP ಸೋಲಿನ ನಂತರ ಸೋನು ನಿಗಮ್ ಟ್ರೋಲ್ ಆಗಿದ್ದೇಕೆ?ಕೊನೆಯ ಕ್ಷಣದಲ್ಲಿ ಸಿಕ್ಕಿತ್ತು ಟಿಕೆಟ್, ಕೇವಲ 13 ದಿನವಷ್ಟೇ ಪ್ರಚಾರ, ಈಗ 48 ಮತಗಳಿಂದ ಅಭ್ಯರ್ಥಿಗೆ ಜಯಚಿಕ್ಕಬಳ್ಳಾಪುರದಲ್ಲಿ ಕೆ ಸುಧಾಕರ್ಗೆ ಭರ್ಜರಿ ಲೀಡ್; ರಾಜೀನಾಮೆ ನೀಡುತ್ತಾರಾ ಪ್ರದೀಪ್ ಈಶ್ವರ್?ರಾಯ್‌ಬರೇಲಿ, ವಯನಾಡ್, ಯಾವ ಸ್ಥಾನವನ್ನು ತ್ಯಜಿಸುತ್ತೀರಿ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಏನು?ಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಬಿಜೆಪಿಗೆ ಬಿಗ್ ಶಾಕ್! ರಾಮಮಂದಿರ ನಿರ್ಮಿಸಿದ ಬಳಿಕವೂ ರಾಮಜನ್ಮಭೂಮಿಯಲ್ಲಿ ಮಕಾಡೆ ಮಲಗಿದ ಕೇಸರಿ ಪಕ್ಷ! ಚುನಾವಣಾ ಆಯೋಗವು ಪ್ರಕಟಿಸಿದ ದೇಶದ ಎಲ್ಲಾ 543 ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಪ್ರಕಾರ ಬಿಜೆಪಿ ಗರಿಷ್ಠ 240 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷಗಳು ಗೆದ್ದಿರುವ ಸ್ಥಾನಗಳ ಸಂಖ್ಯೆ ಹೀಗಿದೆ. ಬಿಜೆಪಿ - 240, ಕಾಂಗ್ರೆಸ್ - 99, ಸಮಾಜವಾದಿ ಪಕ್ಷ - 37, ತೃಣಮೂಲ ಕಾಂಗ್ರೆಸ್ - 29, ಡಿಎಂಕೆ - 22, ಟಿಡಿಪಿ - 16, ಜೆಡಿಯು - 12, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) - 9, ಎನ್‌ಸಿಪಿ (ಶರದ್ ಪವಾರ್)-8, ಶಿವಸೇನೆ - 7, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) - 5 ಸ್ಥಾನಗಳನ್ನು ಗೆದ್ದಿದೆ.ಇದನ್ನೂ ಓದಿ: Rahul Gandhi: ರಾಯ್‌ಬರೇಲಿ, ವಯನಾಡ್, ಯಾವ ಸ್ಥಾನವನ್ನು ತ್ಯಜಿಸುತ್ತೀರಿ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಏನು ಗೊತ್ತಾ?ಇನ್ನು YSRCP-4, RJD-4, ಸಿಪಿಐ(ಎಂ) - 4, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ - 3, ನೀವು 3, ಜಾರ್ಖಂಡ್ ಮುಕ್ತಿ ಮೋರ್ಚಾ - 3, ಜನಸೇನಾ ಪಕ್ಷ - 2, CPI(ML)(L) - 2, ಜೆಡಿ(ಎಸ್) - 2, ಸಿಪಿಐ - 2, RLD-2, ರಾಷ್ಟ್ರೀಯ ಸಮ್ಮೇಳನ - 2, ಯುನೈಟೆಡ್ ಪೀಪಲ್ಸ್ ಪಾರ್ಟಿ, ಲಿಬರಲ್ - 1, ಅಸ್ಸಾಂ ಗಣ ಪರಿಷತ್ - 1, ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) - 1, ಕೇರಳ ಕಾಂಗ್ರೆಸ್ - 1, ಕ್ರಾಂತಿಕಾರಿ ಸಮಾಜವಾದಿ ಪಕ್ಷ - 1, NCP-1, ಜನರ ಪಕ್ಷದ ಧ್ವನಿ - 1, ಜೋರಾಮ್ ಪೀಪಲ್ಸ್ ಮೂವ್ಮೆಂಟ್ - 1, ಶಿರೋಮಣಿ ಅಕಾಲಿದಳ - 1, ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ - 1, ಭಾರತ್ ಆದಿವಾಸಿ ಪಕ್ಷ - 1, ಸಿಕ್ಕಿಂ ಕ್ರಾಂತಿಕಾರಿ ರಂಗ - 1, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ - 1, ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) - 1, ಅಪ್ನಾ ದಲ್ (ಸೋನಿಲಾಲ್) - 1, ಆಜ್ಸು ಪಾರ್ಟಿ - 1, AIMIM-1, ಸ್ವತಂತ್ರ ಅಭ್ಯರ್ಥಿಗಳು- 7 ಸ್ಥಾನಗಳನ್ನು ಗೆದ್ದಿದ್ದಾರೆ.ಬಿಜೆಪಿ ನೇತೃತ್ವದ ಮೈತ್ರಿಕೂಟದ ಎನ್‌ಡಿಎ ಅಂದರೆ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್‌ನಲ್ಲಿ ಒಟ್ಟು 41 ಪಕ್ಷಗಳು ಸೇರಿಕೊಂಡಿತ್ತು. ಪ್ರತಿಪಕ್ಷದ ಇಂಡಿಯಾ ಬ್ಲಾಕ್‌ನಲ್ಲಿ 37 ಪಕ್ಷಗಳಿವೆ. ಇವುಗಳಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯಗಳ ಸ್ಥಳೀಯ ಪಕ್ಷಗಳು ಸೇರಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಣ್ಣ, ದೊಡ್ಡ ಪಕ್ಷಗಳೆಲ್ಲ ಒಗ್ಗಟ್ಟಾಗಿ ಚುನಾವಣೆ ಎದುರಿಸಿವೆ. ಆದರೆ, ಯಾವುದೇ ಮೈತ್ರಿಕೂಟದ ಭಾಗವಾಗದ ಜೆಜೆಪಿ, ಅಕಾಲಿದಳದಂತಹ ಹಲವು ಪಕ್ಷಗಳು ಕೂಡ ಚುನಾವಣೆಯಲ್ಲಿ ಸೆಣಸಿವೆ.

Post a Comment