ಮಹಿಳೆ- ಆರೋಪಿಗಳಾದ ಪತಿ-ಮೈದುನ
ಕಟ್ಟಡದಿಂದ ಕೆಳಗೆ ಬಿದ್ದ ಮರ್ಯಮ್ಳ ಕಿರುಚಾಟಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸಂತ್ರಸ್ತೆ ನೆರವಿಗೆ ದಾವಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂತ್ರಸ್ತೆಯ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಲಾಹೋರ್: ಮನುಷ್ಯನಲ್ಲಿ ಮಾನವೀಯತೆ (Humanity) ಎನ್ನುವುದು ಬಹಳ ಮುಖ್ಯ, ಇಲ್ಲದಿದ್ದರೆ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಹಿಂಸಾಚಾರ (Domestic Violence) ಹೆಚ್ಚಾಗುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ಗಂಡ-ಹೆಂಡತಿ (Husband-Wife) ನಡುವೆ ಕಲಹಗಳು, ಹೊಡೆದಾಟ, ಕೊಲೆಯವರೆಗೆ ಹೋಗುವ ಘಟನೆಗಳನ್ನ ನಾವು ನೋಡಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ಚಿಕನ್ಗೆ ಸರಿಯಾಗಿ ಖಾರವಾಗಿ ಮಾಡಿಲ್ಲವೆಂದು ಹೆಂಡತಿನ್ನು ಮನೆಯ ಕಿಟಕಿಯಿಂದ ಎಸೆದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ. ಈ ವಿಡಿಯೊ ನೋಡಿದವರು ಮಹಿಳೆಯನ್ನ ದಾರುಣವಾಗಿ ಎಸೆದ ಪತಿ ಹಾಗೂ ಕುಟುಂಬಸ್ಥರಿಗೆ ಶಾಪ ಹಾಕುತ್ತಿದ್ದಾರೆ.ಸಂಬಂಧಿತ ಸುದ್ದಿಭಾರತೀಯ ಸೇನೆಯಿಂದ ಜೀವ ಉಳಿಸಿಕೊಂಡು ಇಂಡಿಯಾ ಜಿಂದಾಬಾದ್ ಘೋಷಣೆ ಕೂಗಿದ ಪಾಕಿಸ್ತಾನಿಯರು!ಸ್ಕೂಟರ್ ಮೇಲೆ ಅಶ್ಲೀಲ ಹೋಳಿಯಾಟ! ಹುಡುಗಿಯರಿಗೆ ಬಿತ್ತು ಭರ್ಜರಿ ದಂಡIndian Navy: ಜೀವರಕ್ಷಕರಾದ ಭಾರತೀಯ ನೌಕಾಪಡೆ,ಇರಾನ್ ಕಡಲ್ಗಳ್ಳರಿಂದ 23 ಪಾಕಿಸ್ತಾನಿಗಳ ರಕ್ಷಣೆಅಯೋಧ್ಯೆಯತ್ತ ಹೊರಟ್ಟಿದ್ದ ವಿಮಾನದ ಮಹಿಳಾ ಪೈಲಟ್ನ ಸಾಕ್ಷಾತ್ ಲಕ್ಷ್ಮೀ ಎಂದ ವೃದ್ಧೆ, ಏಕೆ ಗೊತ್ತಾ?ಪಾಕಿಸ್ತಾನದ ಲಾಹೋರ್ ನಗರದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿಕನ್ ಖಾರವಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿ ಹಾಗೂ ಮೈದುನ ಹಲ್ಲೆ ಮಾಡಿ ಕಟ್ಟಡದಿಂದ ಎಸೆದಿದ್ದಾರೆ. ಮೇಲಿಂದ ಬಿದ್ದ ರಬಸಕ್ಕೆ ಮಹಿಳೆ ಕಾಲುಗಳು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆ ನೋವಿನಿಂದ ಚೀರಿಕೊಂಡಾಗ ನೆರೆಹೊರೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದ ಎಂದು ತಿಳಿದುಬಂಂದಿದೆ.ಇದನ್ನೂ ಓದಿ: Love Jihad: ಬಸ್‌ನಲ್ಲಿ ಬರ್ತಿದ್ದ ಮಹಿಳೆಗೆ ತಾನು ಹಿಂದೂ ಎಂದು ನಂಬಿಸಿ ಗರ್ಭಿಣಿ ಮಾಡಿದ ಅನ್ಯಕೋಮಿನ ಕಂಡಕ್ಟರ್!ಕಿಟಿಕಿಯಿಂದ ಹೊರ ಎಸೆದ ಮಹಿಳೆ ಪತಿಲಾಹೋರ್‌ನ ಶಾಲಿಮಾರ್ ರಸ್ತೆಯ ನೊನಾರಿಯನ್ ಚೌಕ್‌ನ ಮರಿಯಮ್ ಎಂಬ ಮಹಿಳೆ ತನ್ನ ಪತಿ, ಅತ್ತೆ ಮತ್ತು ಮೈದುನನ ಜೊತೆ ವಾಸಿಸುತ್ತಿದ್ದಾರೆ. ಮಾರ್ಚ್ 9ರ ರಾತ್ರಿ ಮರಿಯಮ್ಮನ ಪತಿ ಚಿಕನ್ ತಂದಿದ್ದು, ಅಡುಗೆ ಮಾಡಲು ಹೇಳಿದ್ದಾರೆ. ಮರ್ಯಮ್ ಅವರು ಚಿಕನ್ ಮಾಡಿ ಕುಟುಂಬ ಸದಸ್ಯರಿಗೆ ಬಡಿಸಿದರು. ಆದರೆ ಚಿಕನ್ ಖಾರವಾಗಿ ಬೇಯಿಸಿಲ್ಲ ಎಂದು ಪತಿ, ಅತ್ತೆ ಮತ್ತು ಮೈದುನ ಆಕೆಯನ್ನು ಬೈಯ್ದಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಪಾಪಿಗಳು ಆಕೆಯನ್ನು ಕಟ್ಟಡದ ಮೇಲಿನಿಂದ ಕಿಟಕಿ ಮೂಲಕ ಎಸೆದಿದ್ದಾರೆ. ಇದರಿಂದ ಆಕೆಯ ಎರಡೂ ಕಾಲುಗಳು ಮುರಿದಿವೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.ಎರಡು ಕಾಲುಗಳು ಮುರಿತಕಟ್ಟಡದಿಂದ ಕೆಳಗೆ ಬಿದ್ದ ಮರ್ಯಮ್ಳ ಕಿರುಚಾಟಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸಂತ್ರಸ್ತೆ ನೆರವಿಗೆ ದಾವಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಂತ್ರಸ್ತೆಯ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮರ್ಯಮ್ ಪತಿ, ಅತ್ತೆ ಶಾಜಿಯಾ ಮತ್ತು ಮೈದುನ ರೋಮನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಡಿಯೋದಲ್ಲೇನಿದೆ?ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯದಲ್ಲಿ ಸಂತ್ರಸ್ತೆಯ ಮನೆಯಲ್ಲಿ ಕಿರುಚಾಟ ಕೇಳಿ ನೆರೆಮನೆಯವರು ಹೊರ ಬಂದು ನೋಡುತ್ತಿರುವುದು ಕಾಣಬಹುದು, ಆದರೆ ಆಕೆಯನ್ನ ಕಿಟಿಕಿಯಿಂದ ಎಸೆಯುವ ದೃಶ್ಯವನ್ನ ಬಾಲಕಿಯೊಬ್ಬಳು ನೋಡಿ ಗಾಬರಿಗೊಂಡಿದ್ದಾಳೆ. ತನ್ನ ಮೇಲೆ ಮರ್ಯಮ್ ಬೀಳಬಹುದೆಂಬ ಭಯದಿಂದ ಬಾಗಿಲು ಮುಚ್ಚಿಕೊಂಡಿದ್ದಾಳೆ. ಮರ್ಯಮ್ ನರಳಾಡುತ್ತಿರುವುದನ್ನ ನೋಡಿ ನೆರೆಹೊರೆಯವರು ಆಸ್ಪತ್ರೆಗೆ ಸಾಗಿಸಿದ್ದಾರೆ.

Post a Comment