ಸಿದ್ದರಾಮಯ್ಯ, ಸಿಎಂ
ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ಆದ ನಂತರ ಫುಲ್ ಜೋಶ್‌ನಲ್ಲಿರುವ ಬಿಜೆಪಿಯು ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಈ ಬಾರಿ ದಾಖಲೆ ಮಟ್ಟದಲ್ಲಿ ಗೆದ್ದೇ ಗೆಲ್ಲುವೆವು ಎಂಬ ವಿಶ್ವಾಸದಲ್ಲಿದೆ.ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ರಾಮನ ವಿಗ್ರಹ ಪ್ರತಿಷ್ಠಾಪನೆ ನಂತರ ಫುಲ್ ಆಕ್ಟೀವ್ ಮೋಡ್‌ನಲ್ಲಿ ಬಿಜೆಪಿ ಇದ್ದು, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಬಿಜೆಪಿಗೆ ಠಕ್ಕರ್ ನೀಡಲು ಪ್ಲಾನ್ ರೂಪಿಸುತ್ತಿದೆ. ಇದರ ಮೊದಲ ಹಂತವಾಗಿ ನಿನ್ನೆ ರಾತ್ರಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಸಚಿವ ಸಂಪುಟದ ಸದಸ್ಯರಿಗೆ ಔತಣ ಕೂಟ ಏರ್ಪಡಿಸಲಾಗಿದ್ದು, ಈ ವೇಳೆ ಬಿಜೆಪಿ ಸೇರಿದಂತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ಬಗ್ಗೆ ಗಂಭೀರ ಚರ್ಚೆಯಾಗಿದೆ ಎನ್ನಲಾಗಿದೆ.ಸಂಬಂಧಿತ ಸುದ್ದಿಸಿದ್ದು ಸರ್ಕಾರ ಪತನಕ್ಕೆ ಬೊಮ್ಮಾಯಿ ಗ್ಯಾರಂಟಿ! ಆಪರೇಷನ್ ಬಾಂಬ್ ಸಿಡಿಸಿದ ಬಿವೈವಿಬಿಜೆಪಿಯಲ್ಲಿ ವಿಲೀನವಾಗುತ್ತಾ ಪುತ್ತಿಲ ಪರಿವಾರ? ಪುತ್ತೂರು ರಾಜಕೀಯದಲ್ಲಿ ಸಂಚಲನಕೆರಗೋಡು ಕಲಹ: ಫೆಬ್ರವರಿ 7ಕ್ಕೆ ಮಂಡ್ಯ ಬಂದ್ಗೆ ಕರೆ, ಬೆಂಗಳೂರಲ್ಲೂ ಜೋರಾಯ್ತು ಧ್ವಜ ದಂಗಲ್!ಲೋಕಸಭೆಯಲ್ಲಿ ಹಿನ್ನಡೆಯಾದ್ರೆ? ಗ್ಯಾರಂಟಿ ಯೋಜನೆ ಬಂದ್ ಹೇಳಿಕೆ ಉಲ್ಟಾ ಹೊಡೆದ ಕಾಂಗ್ರೆಸ್ ಶಾಸಕಇದನ್ನೂ ಓದಿ: Metro: ಜನರ ಮುಂದೆಯೇ ಮೆಟ್ರೋ ಸ್ಟೇಷನ್‌ನಲ್ಲಿ ರೊಮ್ಯಾನ್ಸ್ ಮಾಡಿ ಮೈ ಮರೆತ ಜೋಡಿ! ವಿಡಿಯೋ ವೈರಲ್!ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಕ್ಟೀವ್ ಆಗಿರುವುದರಿಂದ ಕಮಲ ಪಾಳಯವನ್ನು ಸಮರ್ಥವಾಗಿ ಎದುರಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ಬಗ್ಗೆ ಮತ್ತು ಕಾಂಗ್ರೆಸ್ಸಿನಿಂದ ಆಗುತ್ತಿರುವ ಎಡವಟ್ಟುಗಳ ಬಗ್ಗೆ ನಿನ್ನೆ ನಡೆದ ಔತಣಕೂಟದಲ್ಲಿ ಗಂಭೀರವಾಗಿ ಚರ್ಚೆ ಮಾಡಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.ಈ ಎಲ್ಲಾ ವಿಚಾರಗಳ ಬಗ್ಗೆ ಸಚಿವರುಗಳಿಗೆ ತಡರಾತ್ರಿವರೆಗೂ ಸಿಎಂ ಸಿದ್ದರಾಮಯ್ಯ ಸಲಹೆ ಸೂಚನೆ ನೀಡಿದ್ದು, ಕಾಂಗ್ರೆಸ್ಸಿನಿಂದ ಆಗುತ್ತಿರುವ ಎಡವಟ್ಟುಗಳ ಬಗ್ಗೆ ಸಚಿವರು, ಶಾಸಕರು ಕೊಟ್ಟ ಹೇಳಿಕೆಯನ್ನು ಬಿಜೆಪಿ ದೊಡ್ಡದು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು, ಅನಗತ್ಯ ಹೇಳಿಕೆಯನ್ನು ನೀಡಬೇಡಿ. ಶಾಸಕಾಂಗ ಸಭೆಯಲ್ಲಿ ಶಾಸಕರಿಗೂ ಹೇಳುತ್ತೇನೆ. ನಮ್ಮ ಮಾತುಗಳು ಬಿಜೆಪಿಗೆ ಆಹಾರವಾಗಬಾರದು. ಜೊತೆಗೆ ಅಂಕಿ ಅಂಶಗಳ ಸಮೇತ ಬಿಜೆಪಿಗೆ ತಿರುಗೇಟು ನೀಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Rahul Gandhi: ‘ರಾಹುಲ್ ಜೀ ನೀವು ಯಾವಾಗ ಮದುವೆ ಆಗುತ್ತೀರಿ?’ ಎಂದ ಬಾಲಕನ ಪ್ರಶ್ನೆಗೆ ರಾಹುಲ್ ಗಾಂಧಿ ಶಾಕಿಂಗ್ ಉತ್ತರ!ಇನ್ನು, ಕೇಂದ್ರದಿಂದ ಬಾರದ ಅನುದಾನ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವೈಪಲ್ಯದ ಬಗ್ಗೆಯೂ ಜನರ ಜೊತೆ ಮಾತನಾಡಬೇಕು ಎಂದಿರುವ ಸಿಎಂ ಸಿದ್ದರಾಮಯ್ಯ, ಬರ ಪರಿಹಾರ, ಜಿಎಸ್‌ಟಿ ಹಣ ನೀಡದ ಬಗ್ಗೆ ಹೆಚ್ಚು ಪ್ರಚಾರ ಮಾಡಿ. ಈ ಮೂಲಕ ಬಿಜೆಪಿ ನಾಯಕರ ಬಾಯಿ ಮುಚ್ಚಿಸಬೇಕು. ಜೊತೆಗೆ ಲೋಕಸಭೆಯಲ್ಲಿ ಹೆಚ್ಚು ಸೀಟ್ ಗೆಲ್ಲಲು ಕೆಲಸ ಮಾಡಬೇಕು. ನಮ್ಮ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆ ಮೂಲಕ ಊಟದ ಜೊತೆಗೆ ಸಚಿವರಿಗೆ ಪಾಠ ಮಾಡಿರುವ ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಕ್ಟೀವ್ ಆಗಿರುವುದರಿಂದ ಕಮಲ ಪಾಳಯವನ್ನು ಸಮರ್ಥವಾಗಿ ಎದುರಿಸಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Post a Comment