ಸಿಎಂ ಸಿದ್ದರಾಮಯ್ಯ
Holiday: ರಾಮಮಂದಿರ (Ram Mandira) ಉದ್ಘಾಟನೆಯ ಸಂದರ್ಭದಲ್ಲಿ ಸರಕಾರಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರದವರು ಕಾರ್ಯಕ್ರಮ ಮಾಡಿದ್ದಾರೆ. ಹಾಗಾಗಿ ಅವರೇ ರಜೆ ನೀಡಲಿ ಎಂದು ಹೇಳಿದರು.
ಕೊಪ್ಪಳ: ಹುಬ್ಬಳ್ಳಿಯ ಕರಸೇವಕ ಬಂಧನಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ್ದಾರೆ ಹಿಂದಿನ ಕೇಸ್ ಗಳನ್ನು ವಿಲೇವಾರಿ ಮಾಡಲು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿದವರನ್ನು ಬಿಟ್ಟು ಬಿಡಬೇಕಾ ಎಂದು ಸಿಎಂ ಪ್ರಶ್ನೆ ಮಾಡಿದರು. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರಾಮಮಂದಿರ (Ram Mandira) ಉದ್ಘಾಟನೆಯ ಸಂದರ್ಭದಲ್ಲಿ ಸರಕಾರಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರದವರು ಕಾರ್ಯಕ್ರಮ ಮಾಡಿದ್ದಾರೆ. ಹಾಗಾಗಿ ಅವರೇ ರಜೆ ನೀಡಲಿ ಎಂದು ಹೇಳಿದರು.
ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದವರು ಹೋಗುತ್ತಾರೆ. ಆಹ್ವಾನ ನೀಡುವುದು ಬಿಡೋದು ಅವರ ಕೆಲಸ. ಬರ ಪರಿಹಾರದ ಮಧ್ಯಂತರ ಪರಿಹಾರ ನೀಡಲಾಗುವುದು.ಕೆಲವು ತಾಂತ್ರಿಕ ತೊಂದರೆ ನೀಡಲು ವಿಳಂಬವಾಗಿದೆ. ಈಗ ನೀಡುತ್ತೇವೆ ಎಂದರು. ಸಂಬಂಧಿತ ಸುದ್ದಿ
ಲಕ್ಷಾಂತರ ಮಂದಿ ದಕ್ಷಿಣ ಕೊರಿಯನ್ನರ ಪಾಲಿಗೆ ಅಯೋಧ್ಯೆಯೇ ಮಾತೃಭೂಮಿ, ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
Mysuru: ಅಯೋಧ್ಯೆ ಶ್ರೀ ರಾಮನ ನೆಪದಲ್ಲಿ ಮೈಸೂರಿನ ಈ ಪುಟ್ಟ ಗ್ರಾಮದಲ್ಲಿ ಖುಷಿಯೋ ಖುಷಿ!
Arun Yogiraj: ಅಯೋಧ್ಯೆ ಬಾಲರಾಮನ ವಿಗ್ರಹ ಮಾತ್ರವಲ್ಲ, ಈ ಪ್ರತಿಮೆಗಳ ಹಿಂದೆಯೂ ಅರುಣ್ ಯೋಗಿರಾಜ್ ಕೈಚಳಕ!
Rama Rajya: ರಾಮ-ರಾವಣ ಯುದ್ಧದ ಬಳಿಕ ವಾನರ ಸೇನೆ ಏನಾಯ್ತು? ರಾಮರಾಜ್ಯಕ್ಕೆ ಬಂದರಾ ಹನುಮ ಸೈನಿಕರು?
ಅತಿಥಿ ಉಪನ್ಯಾಸಕರ ಖಾಯಂಗೊಳಿಸಲು ಅಸಾಧ್ಯ. ಈ ಸಂಬಂಧ ಅವರೊಂದಿಗೆ ಮಾತನಾಡಿದ್ದೇವೆ. ಆದರೆ ಖಾಯಂಗೊಳಿಸಿ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಜಾಮೀನು ಅರ್ಜಿ ಸಲ್ಲಿಕೆ
ಕರ ಸೇವಕ ಶ್ರೀಕಾಂತ ಪೂಜಾರಿ ಅವರ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಹಿಂದೂ ಸಂಘಟನೆಗಳ ಮುಖಂಡರು ಮುಂದಾಗಿದ್ದಾರೆ. ರಜೆಗಳ ನಂತರ ಇಂದು ಕೋರ್ಟ್ಗಳು ಪುನರಾರಂಭಗೊಂಡಿದ್ದು, ನಾಳೆ ಹುಬ್ಬಳ್ಳಿ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ಸರ್ಕಾರದ ಪಾಪದ ಕೊಡ ತುಂಬಿದೆ
ಹುಬ್ಬಳ್ಳಿ ಕರಸೇವಕ ಬಂಧನಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 31 ವರ್ಷದ ಹಿಂದೆ ಯಾವುದೋ ಗಲಾಟೆಯಾಗಿತ್ತು ಅಂತಾ ಈಗ ಬಂಧಿಸಿದ್ದಾರೆ ಅಂದ್ರೆ ಏನ್ ಹೇಳಬೇಕು. ಇವರ ಪಾಪದ ಕೊಡ ತುಂಬಿದೆ, ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಅರ್ಥ.
ಎಸ್ಡಿಪಿಐ ಮತ್ತು ಪಿಎಫ್ ಐ ಅಂತಾ ಸಂಘಟನೆಗಳ ಕೇಸ್ ವಾಪಸ್ಸು ಪಡೆದ್ರಿ. ರಾಮ ಭಕ್ತರ ಮೇಲಿನ ಕೇಸನ್ನ ರೀ ಓಪನ್ ಮಾಡಿ 30 ವರ್ಷದ ನಂತರ ಅವರ ಬಂಧಿಸಲಾಗಿದೆ. ಮಂದಿರದ ಉದ್ಘಾಟನೆಯಾಗುವ ಶುಭ ಘಳಿಗೆಯ ಸಂದರ್ಭದಲ್ಲಿ ಇದು ಸರಿಯಲ್ಲ. ಬಹುಶಃ ನಿಮಗೆ ಇದಕ್ಕಿಂತ ನಾನು ಏನೂ ಹೇಳೋಕ್ಕಾಗಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಅಂತಾಷ್ಟೆ ಹೇಳಬಹುದು ಎಂದು ಸರ್ಕಾರ ನಡೆ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: Liquor Price Hike; ಹೊಸ ವರ್ಷದ ಎಣ್ಣೆ ಗುಂಗು ಇಳಿಸಿದ ಸರ್ಕಾರ; ಮದ್ಯದ ಬೆಲೆಯಲ್ಲಿ ಭಾರೀ ಹೆಚ್ಚಳ
ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಇಲ್ಲದ ಅಡೆ ತಡೆಗಳನ್ನ ನಿರ್ಮಾಣ ಮಾಡಿತ್ತು. ರಾಮ ಕಾಲ್ಪನಿಕ ವ್ಯಕ್ತಿ, ರಾಮಯಣವೇ ಸುಳ್ಳು ಅಂತಾ ಹೇಳಿದರು. 500 ವರ್ಷ ಹೋರಾಟ ಸಂಘರ್ಷ ಭಕ್ತಿ ಭಾವದ ಚಳುವಳಿ ಜೊತೆ ಜೊತೆಗೆ ಎಲ್ಲರ ಮನದ ಸಭಿಚ್ಚೆಗಳು ಈಡೇರುತ್ತಿರುವ ಶುಭ ಘಳಿಗೆ ಇದಾಗಿದೆ ಎಂದು ಸಿ.ಟಿ.ರವಿ ಹೇಳಿದರು.

Post a Comment