ದಾವೂದ್ ಇಬ್ರಾಹಿಂ
ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ ಕಾಯಿದೆ (SAFEMA) ಅಡಿಯಲ್ಲಿ ತನಿಖಾ ಸಂಸ್ಥೆಗಳು ಈಗಾಗಲೇ ದಾವೂದ್ನ ಆಸ್ತಿಗಳನ್ನು ವಶಪಡಿಸಿಕೊಂಡಿವೆ.ನವದೆಹಲಿ: ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ( ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂನ (Dawood Ibrahim) ಬಾಲ್ಯದಲ್ಲಿ ಬೆಳೆದ ಮನೆಯನ್ನ (Childhood Home) ಹರಾಜು (Auctioned) ಮಾಡಲಾಗುತ್ತಿದೆ. ಇದಲ್ಲದೆ, ಆತನ ಕುಟುಂಬಕ್ಕೆ ಸೇರಿದ ಇತರ ಕೆಲವು ಆಸ್ತಿಗಳನ್ನು ( Properties) ಸಹ ಈ ಹರಾಜಿಗಿಲಾಗಿದೆ. ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಮಹಾರಾಷ್ಟ್ರದ ರತ್ನಗಿರಿ ವ್ಯಾಪ್ತಿಯ ಮುಂಬಾಕೆ ಗ್ರಾಮದಲ್ಲಿ ಶುಕ್ರವಾರ ಹರಾಜು ನಡೆಯಲಿದೆ.ಜನವರಿ 5ರಂದು ಹರಾಜುಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ ಕಾಯಿದೆ (SAFEMA) ಅಡಿಯಲ್ಲಿ ತನಿಖಾ ಸಂಸ್ಥೆಗಳು ಈಗಾಗಲೇ ದಾವೂದ್ನ ಆಸ್ತಿಗಳನ್ನು ವಶಪಡಿಸಿಕೊಂಡಿವೆ. ಇವುಗಳನ್ನು ಜನವರಿ 5 ರಂದು ಮುಂಬೈನಲ್ಲಿ ಹರಾಜು ಮಾಡಲಾಗುತ್ತದೆ ಎಂದು ವರದಿಯಾಗಿದೆ. ದಾವೂದ್ ಇಬ್ರಾಹಿಂನ ಬಾಲ್ಯದ ಮನೆ ಮತ್ತು ಅವನ ಕುಟುಂಬ ಸದಸ್ಯರಿಗೆ ಸೇರಿದ 4 ಆಸ್ತಿಗಳು ಮತ್ತು ಕೃಷಿ ಭೂಮಿ ಮುಂಬಾಕೆ ಗ್ರಾಮದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಸಂಬಂಧಿತ ಸುದ್ದಿBIG ‘UNKNOWN' BLAST! ವರ್ಷದ ಮೊದಲ ದಿನವೇ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಉಡೀಸ್?ಉಗ್ರರ ಕೈಯಲ್ಲಿ ಚೀನಾ ಶಸ್ತ್ರಾಸ್ತ್ರ! ಪಾಕ್ ಉಗ್ರರನ್ನ ಭಾರತದ ಮೇಲೆ ಛೂ ಬಿಡ್ತಿದಿಯಾ ಡ್ರ್ಯಾಗನ್ ರಾಷ್ಟ್ರಪಾಕಿಸ್ತಾನದಲ್ಲಿ ಮತ್ತೊಬ್ಬ LeT ಉಗ್ರ ಬಲಿ! ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದುರ್ಮರಣDawood Ibrahim: ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ?ಇದನ್ನೂ ಓದಿ: BIG ‘UNKNOWN’ BLAST! ವರ್ಷದ ಮೊದಲ ದಿನವೇ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಉಡೀಸ್?12 ಕೋಟಿ ಸಂಗ್ರಹಕಳೆದ 9 ವರ್ಷಗಳಲ್ಲಿ ದಾವೂದ್ ಕುಟುಂಬಕ್ಕೆ ಸೇರಿದ ರೆಸ್ಟೋರೆಂಟ್‌ಗಳು, ಫ್ಲಾಟ್‌ಗಳು ಮತ್ತು ಅತಿಥಿ ಗೃಹಗಳು ಸೇರಿದಂತೆ 11 ಆಸ್ತಿಗಳನ್ನು ಹರಾಜು ಮಾಡಿ ಸುಮಾರು 12 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ರೆಸ್ಟೋರೆಂಟ್ 4.53 ಕೋಟಿ, 3.5 ಕೋಟಿ ರೂಪಾಯಿಗೆ ಆರು ಫ್ಲಾಟ್‌ಗಳು, 3.52 ಕೋಟಿಗೆ ಒಂದು ಗೆಸ್ಟ್ ಹೌಸ್ಅನ್ನು ಮಾರಾಟ ಮಾಡಲಾಗಿದೆ 257 ಜನರ ಸಾವಿಗೆ ಕಾರಣನಾಗಿದ್ದ ಪಾತಕಿದಾವೂದ್ ಇಬ್ರಾಹಿಂ 1980ರ ದಶಕದಲ್ಲಿ ಪಾಕಿಸ್ತಾನಕ್ಕೆ ಪಲಾಯನ ಮಾಡುವ ಮುನ್ನ ಮುಂಬಾಕೆ ಗ್ರಾಮದಲ್ಲಿ ವಾಸವಿದ್ದ. ಈತ 1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದಾನೆ. ಸರಣಿ ಮುಂಬೈ ಬ್ಲಾಸ್ಟ್ ಪ್ರಕರಣದ ನಂತರ ಆತ ದೇಶ ಬಿಟ್ಟು ಪಲಾಯನ ಮಾಡಿದ್ದ. ಈ ದಾಳಿಯಲ್ಲಿ ಸುಮಾರು 257 ಮಂದಿ ಸಾವನ್ನಪ್ಪಿದ್ದರು. ಯುನೈಟೆಡ್ ಸ್ಟೇಟ್ಸ್ ಜೊತೆಗೆ, ವಿಶ್ವಸಂಸ್ಥೆಯು ಅವನನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿವೆ. ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಅವನು ಪಾಕಿಸ್ತಾನ ಕರಾಚಿಯಲ್ಲಿದ್ದಾನೆ ಗುರುತಿಸಿದೆ. ಆದರೆ, ಪಾಕಿಸ್ತಾನ ಮಾತ್ರ ದಾವೂದ್ ತಮ್ಮ ದೇಶದಲ್ಲಿ ಅಡಗಿದ್ದಾನೆ ಎನ್ನುವುದನ್ನ ಎಂದೂ ಒಪ್ಪಿಕೊಂಡಿಲ್ಲ.

Post a Comment