ಸಾಂದರ್ಭಿಕ ಚಿತ್ರ
ಉತ್ತಮ ಆಹಾರವು ಅಪಧಮನಿಯ ಅಡಚಣೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಹೃದಯವನ್ನು ಸುರಕ್ಷಿತವಾಗಿರಿಸುತ್ತದೆ.ರಕ್ತಪರಿಚಲನೆಯ (Blood Circulation) ವ್ಯವಸ್ಥೆ ದೇಹದಲ್ಲಿ ಸರಾಗವಾಗಿ ನಡೆಯಬೇಕು ಎಂದರೆ ಅಪಧಮನಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಒಂದೊಮ್ಮೆ ಅಪಧಮನಿಗಳ ಒಳಗೆ ನಾರಿನ ಮತ್ತು ಕೊಬ್ಬಿನ ವಸ್ತುಗಳ ಸಂಗ್ರಹವಾಗಿ ಅಪಧಮನಿ ಮುಚ್ಚಿಹೋದರೆ ಅರ್ಥಾತ್ ಹಾರ್ಟ್ ಬ್ಲಾಕ್ ಆದರೆ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಗಂಭೀರ ಆರೋಗ್ಯ ಅಪಾಯಗಳು (Health Care) ಉಂಟಾಗುತ್ತವೆ. ಇದಕ್ಕೆ ಅಪಧಮನಿ ಕಾಠಿಣ್ಯ ಎಂದೂ ಕರೆಯಲಾಗುತ್ತದೆ. ನಾರಿನ ಮತ್ತು ಕೊಬ್ಬಿನ ವಸ್ತುಗಳ ಸಂಗ್ರಹ ಮಾತ್ರವಲ್ಲದೇ ಜೆನೆಟಿಕ್ಸ್, ಜೀವನಶೈಲಿ ಅಭ್ಯಾಸಗಳು ಮತ್ತು ಮುಖ್ಯವಾಗಿ ಆಹಾರ ಕೂಡ ನಿರ್ಬಂಧಿಸಲಾದ ಅಪಧಮನಿಗಳಿಗೆ ಕಾರಣವಾಗುತ್ತದೆ.ಇದನ್ನು ಸರಿಪಡಿಸಲು ಇರುವ ಕ್ರಮಗಳಲ್ಲಿ ಆಹಾರ ಸೇವನೆಯ ಸರಿಯಾದ ಕ್ರಮ ಕೂಡ ಒಂದು. ಹೌದು, ಉತ್ತಮ ಆಹಾರವು ಅಪಧಮನಿಯ ಅಡಚಣೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಹೃದಯವನ್ನು ಸುರಕ್ಷಿತವಾಗಿರಿಸುತ್ತದೆ.
ಸಂಬಂಧಿತ ಸುದ್ದಿ
ಡಯೆಟ್ ಆರಂಭಿಸುವ ಮುನ್ನ ಈ ವಿಷಯಗಳನ್ನು ಖಂಡಿತ ಮರೆಯಬೇಡಿ!
ಉತ್ತಮ ಮತ್ತು ಆರೋಗ್ಯಕರ ಜೀವನಕ್ಕಾಗಿ ಈ ಸಲಹೆಗಳನ್ನು ಫಾಲೋ ಮಾಡಿ
Weight Loss: ಡಯೆಟ್, ವರ್ಕೌಟ್ ಆರಂಭಿಸೋ ಮುನ್ನ ಈ ಒಂದು ಕೆಲಸ ಮಾಡಿದ್ರೆ ತೂಕ ಇಳಿಸಬಹುದು!
ಏಕಾಂಗಿಯಾದರೂ ಈ ವ್ಯಕ್ತಿಗಳು ಆತ್ಮವಿಶ್ವಾಸದಿಂದ ಇರುತ್ತಾರಂತೆ!
ಹಾರ್ಟ್ ಬ್ಲಾಕೇಜ್ ತಡೆಗಟ್ಟಲು ಸೇವಿಸಬೇಕಾದ 7 ಆಹಾರಗಳು
ಬೆರಿಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ರಾಸ್ ಬೆರ್ರಿಸ್ಗಳಂತಹ ಬೆರ್ರಿಗಳು ಉತ್ಕರ್ಷಣ ನಿರೋಧಕಗಳಿಂದ ಮತ್ತು ಫೈಬರ್‌ಗಳಿಂದ ಸಮೃದ್ಧವಾಗಿವೆ. ಬೆರ್ರಿಗಳ ಈ ಗುಣಲಕ್ಷಣಗಳು ಉರಿಯೂತವನ್ನು ಎದುರಿಸಲು ಮತ್ತು ಕೊಲೆಸ್ಟ್ರಾಲ್ ಅನ್ನು ಸಮತೋಲದಲ್ಲಿಡಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: ತಂಗಳು ಅನ್ನ ಬಿಸಿ ಮಾಡಿಕೊಂಡು ತಿನ್ನೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಹುಷಾರ್ ಈ ಕಾಯಿಲೆಬರಬಹುದು!ಇದರಿಂದ ಅಪಧಮನಿಗಳಲ್ಲಿ ಯಾವುದೇ ರೀತಿಯ ಕೊಬ್ಬುಗಳು ಸಂಗ್ರಹವಾಗುವುದನ್ನು ತಡೆದು ಸರಿಯಾಗಿ ಕಾರ್ಯನಿರ್ವಹಿಸುವಂತೆ ಬೆರ್ರಿ ಹಣ್ಣುಗಳು ಪಾತ್ರ ವಹಿಸುತ್ತವೆ.
ಮೀನು: ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳು ಆರೋಗ್ಯಕರ ಕೊಬ್ಬಿನ ಜೊತೆಗೆ ಒಮೆಗಾ -3 ಕೊಬ್ಬಿನಾಮ್ಲಗಳ ಕಣಜವಾಗಿದೆ. ಈ ಅಂಶಗಳು ಹೃದಯದ ಆರೋಗ್ಯಕ್ಕೆ ಅಗತ್ಯವಾಗಿವೆ.
ಮೀನಿನಲ್ಲಿರುವ ಆರೋಗ್ಯಕರ ಕೊಬ್ಬುಗಳು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಇದು ಅಪಧಮನಿಯ ಮುಚ್ಚುವಿಕೆಯನ್ನು ತಡೆಯಲು ನೇರವಾಗಿ ಸಹಕರಿಸುತ್ತದೆ.
ಹಸಿರು ಎಲೆಗಳ ತರಕಾರಿಗಳು: ಹಾರ್ಟ್ ಬ್ಲಾಕೇಜ್ ತಡೆಯುವಲ್ಲಿ ಪಾಲಕ್, ಕೇಲ್ ಮತ್ತು ಸ್ವಿಸ್ ಚಾರ್ಡ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕ, ನೈಟ್ರೇಟ್‌ಗಳನ್ನು ಹೊಂದಿರುವ ಇವು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ರಕ್ತದೊತ್ತಡವನ್ನು ತಂಪಾಗಿಸುತ್ತದೆ, ಇದರಿಂದಾಗಿ ಅಪಧಮನಿಗಳು ಮುಚ್ಚಿಹೋಗುವ ಸಾಧ್ಯತೆ ತೀರಾ ಕಮ್ಮಿ ಇರುತ್ತದೆ.
ಬೆಳ್ಳುಳ್ಳಿ : ಇದೊಂದು ಆಯುರ್ವೇದ ಮೂಲಿಕೆಯಾಗಿದ್ದು, ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ ಮತ್ತು ಶತಮಾನಗಳಿಂದಲೂ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ.
ಬೆಳ್ಳುಳ್ಳಿಯ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ನಿರ್ವಹಿಸುತ್ತದೆ ಮತ್ತು ರಕ್ತದಲ್ಲಿ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಅಪಧಮನಿಯು ಆರೋಗ್ಯವಾಗಿರುತ್ತದೆ.
ಆವಕಾಡೊಗಳು : ಹೃದಯದ ಆರೋಗ್ಯಕ್ಕೆ ಇದೊಂದು ಉತ್ತಮ ಆಹಾರವಾಗಿದೆ. ಮೊನೊಸಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಇವು, ಆರೋಗ್ಯಕರ ಹೃದಯಕ್ಕೆ ಅಗತ್ಯವಾದ ಅಂಶವಾಗಿದೆ.ಈ ಕೊಬ್ಬುಗಳು ಹಾನಿಕಾರಕ ಕೆಟ್ಟ LDL ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯೋಜನಕಾರಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹಾರ್ಟ್ ಬ್ಲಾಕೇಜ್ ಸಮಸ್ಯೆ ಕೂಡ ದೂರವಾಗುತ್ತದೆ.
ಬೀಜಗಳು: ಪಾರ್ಶ್ವವಾಯು ಅಥವಾ ಹೃದಯಾಘಾತವನ್ನು ತಡೆಗಟ್ಟಲು ದೈನಂದಿನ ಆಹಾರದಲ್ಲಿ ಸ್ವಲ್ಪೇ ಸ್ವಲ್ಪ ಬೀಜಗಳನ್ನು ಸೇರಿಸಿಕೊಳ್ಳಿ. ಹೃದಯ ಸ್ನೇಹಿ ಕೊಬ್ಬುಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಸಂಪತ್ತನ್ನು ಹೊಂದಿರುವ ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ನಿರ್ವಹಣೆಯಾಗುತ್ತದೆ ಮತ್ತು ರಕ್ತನಾಳಗಳ ಆರೋಗ್ಯ ಹೆಚ್ಚುತ್ತದೆ. ಇವು ಅಪಧಮನಿ-ಅಡಚಣೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ.ಸಂಪೂರ್ಣ ಧಾನ್ಯಗಳು: ಹೃದಯದ ಆರೋಗ್ಯಕ್ಕಾಗಿ ಆಹಾರದಲ್ಲಿ ಉತ್ತಮ ಪ್ರಮಾಣದ ಧಾನ್ಯಗಳನ್ನು ಸೇರಿಸುವುದು ಪ್ರಮುಖವಾಗಿದೆ. ಇವುಗಳಲ್ಲಿ ಫೈಬರ್-ಸಮೃದ್ಧ ಮತ್ತು ಪೌಷ್ಟಿಕವಾಗಿರುವ ಓಟ್ಸ್, ಬ್ರೌನ್ ರೈಸ್ ಮತ್ತು ಕ್ವಿನೋವಾ ಉತ್ತಮ ಆಯ್ಕೆಗಳಾಗಿವೆ.
ಈ ಧಾನ್ಯಗಳು ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಅಪಧಮನಿಯ ಅಡಚಣೆಯನ್ನು ತಡೆಗಟ್ಟುವಲ್ಲಿ ಅವಶ್ಯಕವಾಗಿದೆ.
Post a Comment