Nagabhushana: ಬೆಂಗಳೂರು ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್ ಅವರಿಗೆ ಬಿಗ್ ರಿಲೀಸ್ ಸಿಕ್ಕಿದೆ. ನಟನ ಆಲ್ಕೋಹಾಲ್ ಟೆಸ್ಟ್ ರಿಪೋರ್ಟ್ ಬಂದಿದೆ. ಸ್ಯಾಂಡಲ್ವುಡ್ ನಟ ನಾಗಭೂಷಣ್ ಅವರು ಕಾರು ಅಪಘಾತ ಪ್ರಕರಣದಲ್ಲಿ ದೊಡ್ಡ ರಿಲೀಫ್ ಪಡೆದಿದ್ದಾರೆ. ಸೆಪ್ಟೆಂಬರ್ 30ರಂದು ರಾತ್ರಿ ನಡೆದಿದ್ದ ಆ್ಯಕ್ಸಿಡೆಂಟ್ನಲ್ಲಿ ಪ್ರೇಮಾ (48) ಎಂಬ ಮಹಿಳೆ ಮೃತಪಟ್ಟಿದ್ದಾರೆ.ಈ ಸಂಬಂಧ ನಟನನ್ನು ಅಕ್ಟೋಬರ್ 1ರಂದು ಬೆಳಗ್ಗೆ ಅರೆಸ್ಟ್ ಮಾಡಲಾಗಿತ್ತು. ನಂತರ ಸಂಜೆ ವೇಳೆಗೆ ನಟನಿಗೆ ಸ್ಟೇಷನ್ ಜಾಮೀನು ಕೊಟ್ಟು ಕಳುಹಿಸಲಾಗಿತ್ತು. ಆ್ಯಕ್ಸಿಡೆಂಟ್ ಆಗಿದ್ದ ಕಾರಣ ನಾಗಭೂಷಣ್ ಅವರು ಮದ್ಯ ಸೇವಿಸಿದ್ದರೇ ಎಂದು ರಕ್ತಪರೀಕ್ಷೆಯನ್ನೂ ಮಾಡಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ನಟ ವಾಹನ ಚಲಾಯಿಸುವಾಗ ಮದ್ಯ ಸೇವಿಸಿರಲಿಲ್ಲ ಎನ್ನಲಾಗಿತ್ತಾದರೂ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ರಿಪೋರ್ಟ್ ನೆಗೆಟಿವ್ ಬಂದಿದೆ. ಈ ಮೂಲಕ ನಟನಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಮದ್ಯಪಾನದ ನೆಗೆಟಿವ್ ರಿಪೋರ್ಟ್ ಬಂದಿದ್ದು, ತನಿಖೆ ಮುಂದುವರೆದಿದೆ. ನಟ ಮಂಗಳವಾರ ವಿಚಾರಣೆಗೆ ಹಾಜರಾಗಬೇಕೆಂದು ಕೆ ಎಸ್ ಲೇಔಟ್ ಸಂಚಾರಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಸದ್ಯ ಗಾಯಾಳು ಕೃಷ್ಣ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆ ಮುಂದುವರೆಸಿದ್ದಾರೆ. ವೇಗದಿಂದ ಚಾಲನೆ ಮಾಡುತ್ತಿದ್ದದ್ದು ನಿಜ, ತಿರುವು ಇದ್ದ ಕಾರಣ ಗೊತ್ತಾಗಿಲ್ಲ ಎಂದು ನಟ ತಿಳಿಸಿದ್ದಾರೆ. ತಿರುವಿನಲ್ಲಿ ಕಾರನ್ನು ನಿಯಂತ್ರಣ ಮಾಡಲು ಆಗಲಿಲ್ಲ ಎಂದು ನಾಗಭೂಷಣ್ ಅವರ ಹೇಳಿಕೆ ದಾಖಲಿಸಲಾಗಿದೆ.
ನಿರ್ಲಕ್ಷ್ಯ ಹಾಗೂ ರ್ಯಾಶ್ ಡ್ರೈವಿಂಗ್ ಅಡಿ ನಟ ನಾಗಭೂಷಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಸ್ಟೇಷನ್ ಬೇಲ್ ಮೇಲೆ ನಟ ನಾಗಭೂಷಣ್ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಘಟನೆ ಸಂಬಂಧ ಈಗಾಗಲೇ ನಾಗಭೂಷಣ್ ಅವರಿಂದ ಸಂಚಾರಿ ಪೊಲೀಸರು ಪ್ರಾಥಮಿಕ ಹೇಳಿಕೆ ಪಡೆದುಕೊಂಡಿದ್ದಾರೆ.
ತಾಯಿ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತಕೊಳ್ಳಗಾಗಿರುವ ಮಕ್ಕಳು ಆಸ್ಪತ್ರೆ ಎದುರು ಕಣ್ಣೀರು ಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತಾಡಿದ ಕೃಷ್ಣ ಹಾಗೂ ಪ್ರೇಮಾ ಅವರ ಪುತ್ರ ಪಾರ್ಥ, ನಾವು ಅಪಘಾತವಾದ ಸ್ಥಳದಲ್ಲಿ ಇರಲಿಲ್ಲ ಆದ್ರೆ ,ಅಪಘಾತ ಮಾಡಿದ್ದು ಒಬ್ಬ ನಟ ಅಂತ ಹೇಳ್ತಾ ಇದ್ದಾರೆ. ಅವರು ಯಾರಾಗಿದ್ದರು ನಮಗೆ ಬೇಕಿಲ್ಲ. ನಮಗೆ ನ್ಯಾಯ ಬೇಕು ಎಂದು ಪಾರ್ಥ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ


Post a Comment