Cauvery ನದಿ ನೀರಿನ ವಿವಾದ; ಒಳ್ಳೆ ಸುದ್ದಿ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್


 ಡಿಸಿಎಂ ಡಿಕೆ ಶಿವಕುಮಾರ್

 ಈಗಾಗಲೇ ರೈತರಿಗೆ ಬೆಳೆ ಹಾಳಾಗಬಾರದು ಅಂತ ನೀರು ಬಿಟ್ಟಿದ್ದೇವೆ, ಸಿಪೇಜ್ ನೀರು ಹರಿದು ಹೋಗ್ತಿದೆ. 3-4 ದಿನ 6500 ಕ್ಯೂಸೆಕ್ ನೀರು ನಾವು ಬಿಡದೇ ಹೋದರು ನೀರು ಹೋಗ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.ಬೆಂಗಳೂರು: 18 ದಿನಗಳ ಕಾಲ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು (Three Thousand Cusecs of Water) ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (Cauvery Water Authority) ಆದೇಶ ನೀಡಿರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲ್ಮನವಿ ಸಲ್ಲಿಕೆ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ನಿನ್ನೆ ಮಧ್ಯಾಹ್ನನವೇ ಕಾವೇರಿ ಪ್ರಾಧಿಕಾರದ ಎದುರು ಅರ್ಜಿ ಸಲ್ಲಿಸಿದ್ದೇವೆ. ಅವರಿಗೆ ತೀರ್ಪು ಮರು ಪರಿಶೀಲನೆ ಮಾಡಬೇಕು ಅಂತ ಮನವಿ ಮಾಡಿದ್ದೇವೆ‌. ಮೊನ್ನೆ ನಿವೃತ್ತಿ ನ್ಯಾಯಾಧೀಶರಿಂದ (Retired Judge) ಸಲಹೆಗಳನ್ನ ಪಡೆದಿದ್ದೇವೆ. ಅವರ ಸಲಹೆಯಂತೆ ಬೋರ್ಡ್ ಮುಂದೆ ಅರ್ಜಿ ಹಾಕಿದ್ದೇವೆ. ನಮ್ಮ ತಂಡವನ್ನು ನಿನ್ನೆಯೇ ಕಳುಹಿಸಿದ್ದೆ, ನಮ್ಮ AG ಅವರು ಕೂಡಾ ಹೋಗಿದ್ದರು. ಅರ್ಜಿ ಸಲ್ಲಿಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.ಮಳೆಯಾದರೆ ನಮಗೆ ಶಕ್ತಿ ಬರಲಿದೆ ಅಲ್ಲದೇ, ಸದ್ಯ ಕೆಆರ್ಎಸ್ ಡ್ಯಾಂ ಒಳಹರಿವು 15 ಸಾವಿರ ಕ್ಯೂಸೆಕ್ ಇದೆ. ಇದೊಂದು ಒಳ್ಳೆ ಸುದ್ದಿ. ಜನರು, ರೈತರು ವರುಣನಲ್ಲಿ ಪ್ರಾರ್ಥನೆ ಮಾಡೋದು ಅವಶ್ಯಕತೆ ಇದೆ. ಇದೇ ರೀತಿ 15 ಸಾವಿರ ಕ್ಯೂಸೆಕ್ ಒಳಹರಿವು ಬಂದರೆ ನಮಗೆ ಸಮಸ್ಯೆ ಆಗೋದಿಲ್ಲ.ಈಗಾಗಲೇ ರೈತರಿಗೆ ಬೆಳೆ ಹಾಳಾಗಬಾರದು ಅಂತ ನೀರು ಬಿಟ್ಟಿದ್ದೇವೆ, ಸಿಪೇಜ್ ನೀರು ಹರಿದು ಹೋಗ್ತಿದೆ. 3-4 ದಿನ 6500 ಕ್ಯೂಸೆಕ್ ನೀರು ನಾವು ಬಿಡದೇ ಹೋದರು ನೀರು ಹೋಗ್ತಿದೆ. ಇದೆಲ್ಲ ದಾಖಲೆ ನಾವು ಬೋರ್ಡ್ ಮುಂದೆ ಹೇಳಿಕೊಳ್ಳಬಹುದು. ಮಳೆಯಾದರೆ ನಮಗೆ ಶಕ್ತಿ ಬರಲಿದೆ. ನಾವು ಕಾನೂನು ಹೋರಾಟ ಏನ್ ಮಾಡಬೇಕೋ ಅದನ್ನ ಮುಂದುವರೆಸುತ್ತೇವೆ ಎಂದು ವಿವರಿಸಿದರು.ಇದನ್ನೂ ಓದಿ: Tirumala: ತಿಮ್ಮಪ್ಪನ ದರ್ಶನಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ಸ್ವಲ್ಪ ನಿಮ್ಮ ಪ್ರಯಾಣ ಮುಂದೂಡಿ, ಇಲ್ಲದಿದ್ದರೆ ನಿಮಗೇ ತೊಂದರೆ! ಒಳಗಡೆ ಏನಿದೆ? ಹೊರಗಡೆ ಏನ್ ಬಂತು?ಇದೇ ವೇಳೆ ಅಮಿಷ‌ ಒಡ್ಡಿ ಕಾಂಗ್ರೆಸ್-ಬಿಜೆಪಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಪರೇಟ್ ಕಮಲದ ಬಗ್ಗೆ ಅವರು ನೆನಪು ಮಾಡಿಕೊಳ್ಳಲಿ. ಅಧಿವೇಶನದಲ್ಲಿ ಶಾಸಕ ಶ್ರೀನಿವಾಸ್ ಗೌಡ ಏನ್ ಹೇಳಿದರು ಅಂತ ಗೊತ್ತಿದೆ. ಒಳಗಡೆ ಏನಿದೆ? ಹೊರಗಡೆ ಏನ್ ಬಂತು. ಈಗ ಏನ್ ನಡೆಯುತ್ತಿದೆ ಗೊತ್ತಿದೆ. ಅವರ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಸೀಟಿಗೆ ಏನ್ ಏನ್ ನಡೀತು ಅವರು ಅದನ್ನ ಮೆಲುಕು ಹಾಕಿಕೊಂಡರೆ ಬಹಳ ಒಳ್ಳೆಯದು ಎಂದಿದ್ದಾರೆ.

Post a Comment

Previous Post Next Post