ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಪ್ರತಿಕ್ರಿಯೆ
"ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ ಎಂದು ಮರುನಾಮಕರಣ ಅಗತ್ಯವಿಲ್ಲ" ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಅತ್ತ ಡಿಸಿಎ ಡಿಕೆ ಶಿವಕುಮಾರ್, "ಮುಂದೆ ನಿಮ್ಮ ಹೆಸರನ್ನೂ ಬದಲಾವಣೆ ಮಾಡ್ತಾರೆ!" ಅಂತ ವ್ಯಂಗ್ಯವಾಡಿದ್ದಾರೆ.ಬೆಂಗಳೂರು: ದೇಶದ ಹೆಸರನ್ನು ‘ಇಂಡಿಯಾ’ (India) ಬದಲು ‘ಭಾರತ’ (Bharat) ಅಂತ ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ (central government) ನಿರ್ಧರಿಸಿದೆ. ಈ ಬಾರಿ ವಿಶೇಷ ಸಂಸತ್ ಅಧಿವೇಶನ (Parliament Session) ಕರೆದಿದ್ದು, ‘ರಿಪಬ್ಲಿಕ್ ಆಫ್ ಇಂಡಿಯಾ’ (Republic of India) ಬದಲು ‘ರಿಪಬ್ಲಿಕ್ ಆಫ್ ಭಾರತ’ (Republic of Bharat) ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ. ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ. “ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ ಎಂದು ಮರುನಾಮಕರಣ ಅಗತ್ಯವಿಲ್ಲ” ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯಿಸಿದ್ದರೆ. ಇನ್ನು ಕನಕಪುರದಲ್ಲಿ (Kanakapur) ಪ್ರತಿಕ್ರಿಯಿಸಿದ ಡಿಸಿಎ ಡಿಕೆ ಶಿವಕುಮಾರ್ (DK Shivakumar), ಮುಂದೆ ನಿಮ್ಮ ಹೆಸರನ್ನೂ ಬದಲಾವಣೆ ಮಾಡ್ತಾರೆ ಅಂತ ವ್ಯಂಗ್ಯವಾಡಿದ್ದಾರೆ. ದೇಶಕ್ಕೆ ಮರುನಾಮಕರಣ ಅಗತ್ಯವಿಲ್ಲದೇಶಕ್ಕೆ ಮರುನಾಮಕರಣ ಅಗತ್ಯವಿಲ್ಲ ದೇಶಕ್ಕೆ ರಿಪಬ್ಲಿಕನ್ ಆಫ್ ಭಾರತ್ ಎಂದು ಮರುನಾಮಕರಣ ಅಗತ್ಯವಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಒಪ್ಪಿತ ಹೆಸರಾಗಿದ್ದು, ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದೆ. ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಹೀಗಾಗಿ ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯ ಇಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಮುಂದೆ ನಿಮ್ಮ ಹೆಸರನ್ನೂ ಬದಲಾವಣೆ ಮಾಡ್ತಾರೆ!ಇನ್ನು ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಮುಂದಿನ ದಿನಗಳಲ್ಲಿ ನಿಮ್ಮ ಹೆಸರನ್ನೂ ಬದಲಾವಣೆ ಮಾಡ್ತಾರೆ ಅಂತ ವ್ಯಂಗ್ಯವಾಡಿದ್ದಾರೆ. ಇದು ರಿಪಬ್ಲಿಕ್ ಆಫ್ ಇಂಡಿಯಾ, ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿದೆ ಅಂತ ಹೇಳಿದ ಡಿಕೆಶಿ, 500 ರೂಪಾಯಿಯ ನೋಟು ಪ್ರದರ್ಶಿಸಿದ್ರು. ಇದನ್ನೂ ಓದಿ: President Of India: 'ಭಾರತ' ಇರಲಿ 'ಇಂಡಿಯಾ' ತೆಗೆಯಬೇಡಿ; ಕೇಂದ್ರದ ವಿರುದ್ಧ ಕೈ ನಾಯಕರ ಆಕ್ರೋಶ ಯಾಕೆ?INDIA ಒಕ್ಕೂಟದಿಂದ ಬಿಜೆಪಿಗೆ ಭಯ!INDIA ಒಕ್ಕೂಟದಿಂದ ಬಿಜೆಪಿಗೆ ಭಯ ಬಂದಿದೆ ಅಂತ ಡಿಕೆಶಿ ವ್ಯಂಗ್ಯವಾಡಿದ್ರು. ನಮ್ಮ ಹೆಸರು ಎಷ್ಟು ಎಫೆಕ್ಟ್ ಆಗಿದೆ ನೋಡಿ, ಅದಕ್ಕಾಗಿ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಸೋಲನ್ನ ನೋಡ್ತಿದ್ದಾರೆ. ಎಲ್ಲದರನ್ನೂ ಹೆಸರು ಬದಲಾವಣೆ ಮಾಡಿ ಅವರ ಮಾತು ಹಾಗೂ ಸಿಗ್ನೇಚರ್ ಗೆ ಬೆಲೆ ಇಲ್ಲದಂತೆ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿನ್ನೂ ಏನೇನೋ ಮಾಡೋಕೆ ಮುಂದಾಗಿದ್ದಾರೆ. ಈಗ ಆ ವಿಚಾರಗಳನ್ನ ಹೇಳಿದ್ರೆ ಶಾಕ್ ಆಗ್ತೀರಿ. ಅಸೆಟ್ ಡೀಮಾನಿಟೈಸ್ ಮಾಡೋಕೂ ಮುಂದಾಗಿದ್ದಾರಂತೆ. ನಾವು ಭಾರತೀಯರೇ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಜೆಪಿಯವ್ರು ಮಾಡ್ತಿರೋದು ಸರಿಯಲ್ಲ, ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇದನ್ನ ಖಂಡಿಸ್ತೀನಿ ಅಂತ ಕನಕಪುರದಲ್ಲಿ ಡಿಸಿಎಂ ಡಿಕೆಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

Post a Comment