ಆರ್ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್
1995ರ ಮಾರ್ಚ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಾಪ್ರಾದ ಮತಗಟ್ಟೆಯೊಂದರ ಬಳಿ ಅವರ ಎದುರಾಳಿಗಳಾದ ದರೋಗಾ ರೈ ಮತ್ತು ರಾಜೇಂದ್ರ ರೈ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ರಭುನಾಥ್ ಸಿಂಗ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.ಪಾಟ್ನಾ: 1995ರ ಜೋಡಿ ( 1995 double-murder) ಕೊಲೆ ಪ್ರಕರಣದಲ್ಲಿ ಆರ್‌ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್ (Former RJD MP Prabhunath Singh) ಅವರಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ( Supreme Court) ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ಪ್ರಭುನಾಥ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಸಂತ್ರಸ್ತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪ್ರಭುನಾಥ್ ಸಿಂಗ್ ಮತ್ತು ಬಿಹಾರ ಸರ್ಕಾರಕ್ಕೆ ಆದೇಶಿಸಲಾಗಿದೆ.ಜೀವಾವಧಿ ಶಿಕ್ಷೆನ್ಯಾಯಾಲಯದ ವಿಚಾರಣೆ ವೇಳೆ ಬಿಹಾರದ ಮಾಜಿ ಸಂಸದ ಪ್ರಭುನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು. ಇನ್ನೊಂದು ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಜೋಡಿ ಕೊಲೆ ಪ್ರಕರಣದಲ್ಲಿ ಆರ್‌ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.ಮತಗಟ್ಟೆ ಬಳಿಯೇ ಕೊಲೆ ಬಿಹಾರದ ಮಹಾರಾಜ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಜೆಡಿಯು ಮತ್ತು ಒಮ್ಮೆ ಆರ್‌ಜೆಡಿ ಟಿಕೆಟ್‌ನಲ್ಲಿ ಸಂಸದರಾಗಿರುವ ಪ್ರಭುನಾಥ್ ಸಿಂಗ್, ಮಸ್ರಖ್‌ನ ಮತಗಟ್ಟೆಯೊಂದರ ಬಳಿ ಆಗಿನ 47 ವರ್ಷದ ದರೋಗಾ ರೈ ಮತ್ತು 18 ವರ್ಷದ ರಾಜೇಂದ್ರ ರೈ ಅವರನ್ನು ಹತ್ಯೆಗೈದ ಆರೋಪ ಹೊತ್ತಿದ್ದಾರೆ. 1995 ಇಬ್ಬರೂ ಪ್ರಭುನಾಥ್ ಸಿಂಗ್ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಿಲ್ಲ, ಹೀಗಾಗಿ ಇಬ್ಬರನ್ನೂ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: Ramnath Kovind: ‘ಒಂದು ದೇಶ ಒಂದು ಚುನಾವಣೆ’ ಕುರಿತು ಪರಿಶೀಲಿಸಲು ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಿದ ಕೇಂದ್ರ!ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಎಸ್ ಓಕಾ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ತ್ರಿಸದಸ್ಯ ಪೀಠವು ಮೂರು ಬಾರಿ ಜನತಾ ದಳ ( ಜೆಡಿ ಯು) ಸದಸ್ಯ ಮತ್ತು ಮಹಾರಾಜ್‌ಗಂಜ್‌ನ ಒಂದು ಬಾರಿ ಆರ್‌ಜೆಡಿ ಸಂಸದ ಪ್ರಭುನಾಥ್ ಸಿಂಗ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.ಜೆಡಿಯುಗೆ ಮತ ಹಾಕಿದ್ದಕ್ಕಾಗಿ ಕೊಲೆ1995ರ ಚುನಾವಣೆಯಲ್ಲಿ ಪ್ರಭುನಾಥ್ ಸಿಂಗ್, ತನ್ನ ಆಶಯದಂತೆ ಮತದಾನ ಮಾಡದಿದ್ದಕ್ಕಾಗಿ ಹಾಗೂ ಜನತಾದಳಕ್ಕೆ ಮತ ಹಾಕಿದ್ದಾಗಿ ಹೇಳಿದ್ದಕ್ಕಾಗಿ ಛಾಪ್ರಾದ ಮಸ್ರಖ್‌ನಲ್ಲಿ ರಾಜೇಂದ್ರ ರೈ ಮತ್ತು ದರೋಗಾ ರೈ ಎಂಬುವವರನ್ನ ಶೂಟ್ ಮಾಡಿ ಹತ್ಯೆ ಮಾಡಿದ್ದರು. ಇದೀಗ ಈ ಪ್ರಕರಣದಲ್ಲಿ ಮಾಜಿ ಸಂಸದರನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂಮೃತರ ಸಹೋದರ ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ದೂರಿನ ನಂತರ, ಪ್ರಕರಣವನ್ನು ಛಾಪ್ರಾದಿಂದ ಪಾಟ್ನಾಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿ ಅದರ ವಿಚಾರಣೆ ನಡೆಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಭುನಾಥ್ ಸಿಂಗ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. 2012ರಲ್ಲಿ ಪಾಟ್ನಾ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದಾದ ನಂತರ, ಮೃತ ರಾಜೇಂದ್ರ ರೈ ಅವರ ಸಹೋದರ ಹರೇಂದ್ರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಎರಡೂ ತೀರ್ಪುಗಳನ್ನ ಪ್ರಶ್ನಿಸಿದ್ದರು.ಇದನ್ನೂ ಓದಿ: Special Parliament Session: 5 ದಿನಗಳ ದಿಢೀರ್ ಅಧಿವೇಶನ ಕರೆದ ಮೋದಿ ಸರ್ಕಾರ, ಚುನಾವಣೆ ರೀತಿಯಲ್ಲೇ ಬದಲಾವಣೆ?ಬೇರೊಂದು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದಪ್ರಭುನಾಥ್ ಸಿಂಗ್ ಪ್ರಸ್ತುತ 1995 ರ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಚುನಾವಣೆಯಲ್ಲಿ ಪ್ರಭುನಾಥ್ ಸಿಂಗ್ ಅವರನ್ನು ಸೋಲಿಸಿದ್ದ ಮಸ್ರಖ್‌ನ ಶಾಸಕ ಅಶೋಕ್ ಸಿಂಗ್ ಅವರನ್ನು 1995 ರಲ್ಲಿ ಕೊಲೆ ಮಾಡಲಾಗಿತ್ತು. ಚುನಾವಣಾ ಸೋಲಿನ ನಂತರ ಪ್ರಭುನಾಥ್ ಸಿಂಗ್, ಅಶೋಕ್ ಸಿಂಗ್ ಅವರನ್ನು ಮೂರು ತಿಂಗಳೊಳಗೆ ಕೊಲ್ಲುವುದಾಗಿ ಹೇಳಿದ್ದರು. ನಂತರ ಅಶೋಕ್ ಸಿಂಗ್ ಅವರ ಮನೆಯಲ್ಲಿ ಹಾಡಹಗಲೇ ಕೊಲೆ ಮಾಡಲಾಗಿತ್ತು. 2017ರಲ್ಲಿ ಈ ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್‌ಗೆ ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜಕೀಯದಲ್ಲಿ ಪ್ರಭುನಾಥ್ ಸಿಂಗ್ ಮೊದಲು ಆನಂದ್ ಮೋಹನ್ ಜೊತೆಗಿದ್ದರು, ಆದರೆ ನಂತರ ನಿತೀಶ್ ಕುಮಾರ್ ಜೊತೆ ಸೇರಿಕೊಂಡರು. 2010ರಲ್ಲಿ ನಿತೀಶ್ ಜತೆಗಿನ ವಿವಾದದ ಬಳಿಕ ಪ್ರಭುನಾಥ್ ಸಿಂಗ್ ಲಾಲು ಯಾದವ್ರ ಆರ್ಜೆಡಿ ಸೇರಿ ಸಂಸದರಾಗಿ ಆಯ್ಕೆಯಾಗಿದ್ದರು.

Post a Comment