High Court Notice: ಮಗ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ತಂದೆ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೂ ಹೈಕೋರ್ಟ್ ನೋಟಿಸ್ ನೀಡಿದೆ.ಚುನಾವಣೆ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾ.ಕೆ.ನಟರಾಜನ್ ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಹೈಕೋರ್ಟ್ ಅನರ್ಹಗೊಳಿಸಿರುವ ಕಾರಣ ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸಲು ಬರಲ್ಲ.ಇದರ ಬೆನ್ನಲ್ಲೇ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಬೂತ್ ಒಂದರಲ್ಲಿ ಕುಳಿತು ಮತ ಹಾಕಿಸಿರುವ ಆರೋಪ ರೇವಣ್ಣ ವಿರುದ್ಧ ಕೇಳಿ ಬಂದಿದೆ.ಇಂದಿನ ತೀರ್ಪಿನಲ್ಲಿ ರೇವಣ್ಣ ಅವರಿಗೆ ನೋಟಿಸ್ ನೀಡಲಾಗಿದ್ದು, ನಿಮ್ಮನ್ನು ಯಾಕೆ ಅನರ್ಹಗೊಳಿಸಬಾರದು ಎಂದು ಕೇಳಿದೆ ಅಂತ ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ. ಮಗನ ಜೊತೆ ರೇವಣ್ಣ ಸಹ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಅಗತ್ಯ ಕರಪತ್ರಗಳನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು ಎಂದು ವಕೀಲೆ ನೇಸರ್ಗಿ ಹೇಳಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಚುನಾವಣೆ ವೇಳೆ ಸಾಕಷ್ಟು ಮಾಹಿತಿಗಳನ್ನ ಮುಚ್ಚಿಟ್ಟಿದ್ದರು. ಆದಾಯ ತೆರಿಗೆ, ಬ್ಯಾಂಕ್ ಬ್ಯಾಲೆನ್ಸ್ ಮುಚ್ಚಿಟ್ರು.ಅದನ್ನೆಲ್ಲಾ ನಾವು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎಂದು ಅರ್ಜಿದಾರ ಹಾಗೂ ವಕೀಲ ದೇವರಾಜೇಗೌಡ ಹೇಳಿದ್ದಾರೆ. ಈ ಘಳಿಗೆಯಿಂದಲೇ ಪ್ರಜ್ವಲ್ ಅನರ್ಹ ಆಗ್ತಾರೆ. ಮುಂದೆ ಆರು ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಗ್ರಾಮ ಪಂಚಾಯತಿ ಚುನಾವಣೆಯಿಂದ ಹಿಡಿದು ಯಾವ ಚುನಾವಣೆಗು ಸ್ಪರ್ಧಿಸುವಂತಿಲ್ಲ ಎಂದು ದೇವರಾಜೇಗೌಡರು ಹೇಳಿದರು.

Post a Comment