ಬಿಕೆ ಹರಿಪ್ರಸಾದ್, ಎಂಎಲ್ಸಿ
ಹಿಂದೂಳಿದ ವರ್ಗದವರಿಗೆ ಏನಾದರೂ ಮಾಡಿದವರು ಅಂದರೆ ದೇವರಾಜ ಅರಸು, ಬಂಗಾರಪ್ಪನವರು. ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಕಲಬುರಗಿ: ಕಾಂಗ್ರೆಸ್ (Congress) ಪಕ್ಷ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಂಬಿಕೆ ಇಟ್ಟುಕೊಂಡಿದೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು 1981 ರಲ್ಲಿ ಕಂದಾಯ ಸಚಿವರಾಗಿದ್ದಾಗ (Revenue Minister) ಪೀಣ್ಯದಲ್ಲಿ ಇಸ್ರೋಗೆ (ISRO) ಜಾಗ ಕೊಟ್ಟವರು. ಅದೂ ನಾವ್ಯಾರೂ ಮರೆಯೋಕೆ ಆಗಲ್ಲ, ನಾವು ಪ್ರಚಾರ ತೆಗೆದುಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ (MLC BK Hariprasad) ಹೇಳಿದ್ದಾರೆ. ನಾನು ಸಿದ್ದರಾಮಯ್ಯ ವಕ್ತಾರ ಅಲ್ಲ ಕಲಬುರಗಿಯಲ್ಲಿ ಮಾತನಾಡಿದ ಹರಿಪ್ರಸಾದ್ ಅವರು, ಸಿದ್ದರಾಮಯ್ಯ ಅವರು ಹಿಂದೂಳಿದ ವರ್ಗದವರನ್ನ ಕಡೆಗಣಿಸ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು. ಹಿಂದೂಳಿದ ವರ್ಗ, ಹಿಂದೂಳಿದ ಜಾತಿ ಬಗ್ಗೆ ಬಹಳ ವ್ಯತ್ಯಾಸ ಇದೆ. ಹಿಂದೂಳಿದ ವರ್ಗದ ಬಗ್ಗೆ ಜಾಗೃತಿ ಮೂಡಿಸಿದವರು ದೇವರಾಜ್ ಅರಸು ಅವರು, ಹಿಂದೂಳಿದ ವರ್ಗದವರಿಗೆ ಏನಾದರೂ ಮಾಡಿದವರು ಅಂದರೆ ದೇವರಾಜ ಅರಸು, ಬಂಗಾರಪ್ಪನವರು. ನಾನು ಸಿದ್ದರಾಮಯ್ಯ ಅವರ ವಕ್ತಾರ ಅಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: Cauvery Water: ಸುಮಲತಾ ಗೆಲ್ಲಿಸಿದ್ದು ಮಂಡ್ಯ ಜನರಿಗೆ ಮೋಸ ಆಯ್ತು; ರವೀಂದ್ರ ಶ್ರೀಕಂಠಯ್ಯ ಕಿಡಿ ಒನ್ ನೇಷನ್ ಒನ್ ಲೀಡರ್ ಅಂದು ಬಿಡ್ತಾರೆ ಇದೇ ವೇಳೆ ಬಿಜೆಪಿ ವಿರುದ್ಧವೂ ಕಿಡಿಕಾರಿದ ಹರಿಪ್ರಸಾದ್ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ, ಒನ್ ನೇಷನ್ ಒನ್ ರೇಷನ್, ಒನ್ ನೇಷನ್ ಒನ್ ಎಜುಕೇಷನ್ ಹೀಗೆ ಘೋಷಣೆಗಳಿಗೆ ಏನೂ ಕಮ್ಮಿ ಇಲ್ಲ. ಕೊನೆಗೆ ಒನ್ ನೇಷನ್ ಒನ್ ಲೀಡರ್ ಅಂದು ಬಿಡ್ತಾರೆ ಬಿಜೆಪಿ ಅವರು. ಒನ್ ನೇಷನ್ ಒನ್ ಎಲೆಕ್ಷನ್ ಈ ದೇಶದಲ್ಲಿ ನಡೆತಕ್ಕಂತದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಾನು ಪಕ್ಕಾ ಕಾಂಗ್ರೆಸ್ ನವನು, ಒಂದೇ ಒಂದೂ ದಿನ ಬೇರೆ ಪಕ್ಷದ ಕಡೆ ನಾನು ನೋಡಿದವನಲ್ಲ. ಮಂತ್ರಿ ಆಗೋದು ನನಗೆಗೂ ದೊಡ್ಡ ವಿಚಾರ ಅಲ್ಲ, ಮಂತ್ರಿ ಆಗೋದು ನನಗೆ ಮುಖ್ಯ ಇಲ್ಲ. ಸಣ್ಣ ಸಣ್ಣ ಸಮುದಾಯಗಳಿಗೂ ರಾಜಕೀಯದಲ್ಲಿ ಅವಕಾಶ ಸಿಗಬೇಕು. ಅದಕ್ಕಾಗಿ ನಾನೂ ರೋಡಿಗಿಳಿದು ಬೇಕಾದರೂ ಹೋರಾಟ ಮಾಡ್ತೇನೆ ಎಂದರು

Post a Comment