ಮೃತ ಗೃಹಿಣಿ ಭವ್ಯ
Dowry Harassment: ಮದುವೆಯಾದ ಒಂದು ತಿಂಗಳ ನಂತರ ಕಿರಣ್, ಪತ್ನಿಗೆ ಹೆಚ್ಚು ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದ್ದನಂತೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದ ಭವ್ಯ, ತಂದೆ ಮನೆಯಲ್ಲೇ ವಾಸ ಮಾಡುತ್ತಿದ್ದರಂತೆ.ನೆಲಮಂಗಲ: ವರದಕ್ಷಿಣೆ ಕಿರುಕುಳಕ್ಕೆ (Dowry Harassment) ಮನನೊಂದು ಗೃಹಿಣಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದ (Nelamangala) ವಾದಗುಂಟೆ ರೈಲು ನಿಲ್ದಾಣದ (Railway Station) ಬಳಿ ನಡೆದಿದೆ. ಮೃತ ದುರ್ದೈವಿಯನ್ನು 27 ವರ್ಷದ ಭವ್ಯ ಎಂದು ಗುರುತಿಸಲಾಗಿದೆ. ಮೃತ ಮಹಿಳೆಗೆ ನೆಲಮಂಗಲದ (Nelamangala) ತಿರುಮಲ್ಲೇಗೌಡನಪಾಳ್ಯದ ನಿವಾಸಿ ಕಿರಣ್ ಜೊತೆಯಲ್ಲಿ ಮದುವೆಯಾಗಿತ್ತು (Marriage). ಈ ವೇಳೆ 25 ಲಕ್ಷ ಹಣ ರೂಪಾಯಿ ಖರ್ಚು ಮಾಡಿ, 250 ಗ್ರಾಂ ಚಿನ್ನ ನೀಡಿ ಮಹಿಳೆಯ ಕುಟುಂಬಸ್ಥರು ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆಯಾದ ಒಂದು ತಿಂಗಳ ನಂತರ ಕಿರಣ್, ಪತ್ನಿಗೆ ಹೆಚ್ಚು ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದ್ದನಂತೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದ ಭವ್ಯ, ತಂದೆ ಮನೆಯಲ್ಲೇ ವಾಸ ಮಾಡುತ್ತಿದ್ದರಂತೆ. ಆದರೆ ಗಂಡ ಇಲ್ಲಿಯೂ ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ಕಿರುಕುಳ ತಾಳಲಾರದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.ಕತ್ತು ಸೀಳಿ ಬಾವನ ಹತ್ಯೆಗೈದ ಬಾಮೈದ ಬಾಮೈದನೇ ಬಾವನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ವಿದ್ಯಾನಗರದ ಮನೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನಿವೃತ್ತ ಯೋಧ ಈರಗೌಡ ಟೋಪಗೋಳ (45) ಎಂದು ಗುರುತಿಸಲಾಗಿದೆ. ಕೊಲೆಯಾದ ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.ಇದನ್ನೂ ಓದಿ: Kateel Temple: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮೊಕ್ತೇಸರರಿಗೆ ವಿವಾದ; ಕೊಡೆತ್ತೂರುಗುತ್ತು ಕುಟುಂಬ ಪರ ಕೋರ್ಟ್ ತೀರ್ಪುಸೇನೆಯಿಂದ ವಾಪಸ್ ಆದ ಬಳಿಕ ಮೃತ ಈರಗೌಡ ಅವರು ಸ್ಟೋನ್ ಕ್ರಷರ್ ಘಟಕ ನಡೆಸುತ್ತಿದ್ದರಂತೆ. ಮೂಲತಃ ಜೈನಾಪುರ ಗ್ರಾಮದವರಾಗಿದ್ದ ಈರಗೌಡ ಟೋಪಗೋಳ ಅವರನ್ನು ಇಂದು ಸಂಜೆ ಭೇಟಿಯಾಗಲು ಆರೋಪಿ ಸಂಜಯ್ ಆಗಮಿಸಿದ್ದ ವೇಳೆ ಘಟನೆ ನಡೆದಿದೆ.ಮೃತ ವ್ಯಕ್ತಿಯ ಪತ್ನಿ ಮನೆಯೊಳಗೆ ಇದ್ದಾಗ ಚಾಕುವಿನಿಂದ ಈರಗೌಡ ಕತ್ತು ಸೀಳಿ ಸಂಜಯ್ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post a Comment