ISRO: ಸೂರ್ಯನಂಗಳದ ರಹಸ್ಯ ಬೇಧಿಸಲು ಆದಿತ್ಯ ಎಲ್1 ರೆಡಿ, ಲ್ಯಾಗ್ರೇಂಜ್ ಪಾಯಿಂಟ್ 1ರಿಂದ ಅಧ್ಯಯನ!


 ಆದಿತ್ಯ ಎಲ್1

 ಸೂರ್ಯ ಮತ್ತು ಭೂಮಿಯ ನಡುವಿನ ಲ್ಯಾಗ್ರೇಂಜಿಯನ್ ಪಾಯಿಂಟ್ 1 (ಎಲ್-1) ಬಿಂದುವಿನ ಸುತ್ತಲೂ ಇರುವ 'ಹ್ಯಾಲೋ ಕಕ್ಷೆಯಿಂದ' ಸೂರ್ಯನನ್ನು ಗಮನಿಸಲಿದೆ. ಈ ಬಿಂದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಎಲ್1 ಬಿಂದುವಿನ ಈ ವಿಶಿಷ್ಟ ಕಕ್ಷೆ ಯಾವುದೇ ಅಡೆತಡೆಯಿಲ್ಲದೆ, ಗ್ರಹಣಗಳಿಂದಲೂ ಬಾಧಿತವಾಗದೆ, ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ನೆರವಾಗುತ್ತದೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆ 1,500 ಕೆಜಿ ತೂಕ ಹೊಂದಿರುವ ಒಂದು ಉಪಗ್ರಹವಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಶೇಷ, ವೈಜ್ಞಾನಿಕ ಯೋಜನೆಯಾಗಿದೆ. ಇದು ಸೂರ್ಯ ಮತ್ತು ಭೂಮಿಯ ನಡುವಿನ ಲ್ಯಾಗ್ರೇಂಜಿಯನ್ ಪಾಯಿಂಟ್ 1 (ಎಲ್-1) ಬಿಂದುವಿನ ಸುತ್ತಲೂ ಇರುವ 'ಹ್ಯಾಲೋ ಕಕ್ಷೆಯಿಂದ' ಸೂರ್ಯನನ್ನು ಗಮನಿಸಲಿದೆ. ಈ ಬಿಂದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಎಲ್1 ಬಿಂದುವಿನ ಈ ವಿಶಿಷ್ಟ ಕಕ್ಷೆ ಯಾವುದೇ ಅಡೆತಡೆಯಿಲ್ಲದೆ, ಗ್ರಹಣಗಳಿಂದಲೂ ಬಾಧಿತವಾಗದೆ, ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ನೆರವಾಗುತ್ತದೆ.ಈ ಬಿಂದು ಭೂಮಿಯ ಕಾಂತೀಯ ಕ್ಷೇತ್ರದಿಂದ ದೂರದಲ್ಲಿ ನೆಲೆಯಾಗಿರುವುದರಿಂದ, ಸೂರ್ಯನಿಂದ ಬರುವ ಚಾರ್ಜ್ ಹೊಂದಿರುವ ಕಣಗಳ ಖಚಿತ ಮಾಪನ ನಡೆಸಲು ಸಾಧ್ಯವಾಗುತ್ತದೆ. ಬಾಹ್ಯಾಕಾಶ ನೌಕೆ ಎಲ್1 ಬಿಂದುವಿಗೆ ತಲುಪಲು 120 ದಿನಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುವ ನಿರೀಕ್ಷೆಗಳಿವೆ. ಲ್ಯಾಗ್ರೇಂಜ್ ಬಿಂದು ಎನ್ನುವ ಬಿಂದು ಬಾಹ್ಯಾಕಾಶದಲ್ಲಿ ಎರಡು ಆಕಾಶ ಕಾಯಗಳ (ಈ ಪ್ರಕರಣದಲ್ಲಿ, ಭೂಮಿ ಮತ್ತು ಸೂರ್ಯ) ನಡುವಿನ ಗುರುತ್ವಾಕರ್ಷಣಾ ಬಲ, ಅವುಗಳೊಡನೆ ಸಮಾನವಾಗಿ ಚಲಿಸುವ ಸಣ್ಣ ಗಾತ್ರದ ವಸ್ತುವಿನ ಕೇಂದ್ರಾಭಿಮುಖ ಬಲದ ಕಾರಣದಿಂದ ಪರಸ್ಪರ ಸಮಾನವಾಗಿರುತ್ತವೆ. ಒಂದು ಉಪಗ್ರಹವನ್ನು, ಎಲ್1 ಬಿಂದುವಿನ ಸುತ್ತಲೂ ಇರುವ ಹ್ಯಾಲೋ ಕಕ್ಷೆಯಲ್ಲಿ ಇಡುವುದರಿಂದ ಸಾಕಷ್ಟು ಅನುಕೂಲತೆಗಳಿವೆ. ಅದರಲ್ಲಿ, ಯಾವುದೇ ಗ್ರಹಣ ಅಥವಾ ಸೌರ ಚಟುವಟಿಕೆಗಳ ಅಡ್ಡಿಗಳಿಲ್ಲದೆ ಸೂರ್ಯನ ಬೆಳಕನ್ನು ಗಮನಿಸುವುದೂ ಸೇರಿದೆ. ಈ ಅನುಕೂಲತೆ ಸೌರ ಚಟುವಟಿಕೆಗಳನ್ನು ನಿಖರವಾಗಿ ವೀಕ್ಷಿಸಲು ಮತ್ತು ಬಾಹ್ಯಾಕಾಶ ವಾತಾವರಣದ ಮೇಲೆ ಅದರ ಪರಿಣಾಮವನ್ನು ನೈಜ ಸಮಯದಲ್ಲಿ ಗಮನಿಸಲು ಸಾಧ್ಯವಾಗಿಸುತ್ತದೆ.ಇದನ್ನೂ ಓದಿ: Chandrayaan-3 ಯಶಸ್ಸಿಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ; ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ಹ್ಯಾಲೋ ಕಕ್ಷೆಯ ತಣ್ಣಗಿನ ವಾತಾವರಣಹ್ಯಾಲೋ ಕಕ್ಷೆಯ ಸರಾಸರಿ ತಾಪಮಾನ -148 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಆದರೆ, ಸಾಮಾನ್ಯವಾಗಿ ಇಲ್ಲಿನ ತಾಪಮಾನ -184 ಡಿಗ್ರಿ ಸೆಲ್ಸಿಯಸ್ ಮತ್ತು -83 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಸನ್ ಸ್ಪಾಟ್‌ಗಳು, ಸೌರ ಜ್ವಾಲೆಗಳಂತಹ ಸೌರ ಚಟುವಟಿಕೆಗಳು ಎಲ್1 ಬಿಂದುವಿನ ತಾಪಮಾನದ ಮೇಲೆ ಪರಿಣಾಮ ಬೀರಬಲ್ಲವು. ಸೌರ ಚಟುವಟಿಕೆಗಳು ಹೆಚ್ಚಾದಾಗ, ಸೂರ್ಯ ಹೆಚ್ಚಿನ ವಿಕಿರಣಗಳನ್ನು ಹೊರಸೂಸಿ, ಅದರಿಂದ ಭೂಮಿ ಮತ್ತು ಸುತ್ತಲಿನ ಅವಕಾಶ ಹೆಚ್ಚು ಬೆಚ್ಚಗಾಗುತ್ತದೆ. ಈ ತಣ್ಣಗಿನ ತಾಪಮಾನದ ಹೊರತಾಗಿಯೂ, ಲ್ಯಾಗ್ರೇಂಜ್ ಪಾಯಿಂಟ್ ಎಲ್1 ಬಾಹ್ಯಾಕಾಶ ವಾಹನಗಳ ನಿಲುಗಡೆಗೆ ಒಂದು ಜನಪ್ರಿಯ ತಾಣವಾಗಿದೆ. ಯಾಕೆಂದರೆ, ಈ ಬಿಂದುವಿನಲ್ಲಿ ಹೆಚ್ಚಿನ ಇಂಧನ ದಹಿಸುವಿಕೆಯ ಅವಶ್ಯಕತೆಯಿಲ್ಲದೆ, ಬಾಹ್ಯಾಕಾಶ ನೌಕೆ ಉಳಿಯಲು ಸಾಧ್ಯವಾಗುತ್ತದೆ.ಸೋಲಾರ್ ಆ್ಯಂಡ್ ಹೀಲಿಯೋಸ್ಫೆರಿಕ್ ಅಬ್ಸರ್ವೇಟರಿಸೋಲಾರ್ ಆ್ಯಂಡ್ ಹೀಲಿಯೋಸ್ಫಿಯರಿಕ್ ಅಬ್ಸರ್ವೇಟರಿ (ಸೋಹೋ - SoHO) ಬಾಹ್ಯಾಕಾಶ ನೌಕೆ ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ (ಇಎಸ್ಎ) ಜಂಟಿ ಸಹಯೋಗದ ಯೋಜನೆಯಾಗಿದ್ದು, ಪ್ರಸ್ತುತ ಎಲ್1 ಬಿಂದುವಿನಲ್ಲಿ ನೆಲೆಸಿದೆ.ಡಿಸೆಂಬರ್ 2, 1995ರಲ್ಲಿ ಉಡಾವಣೆಗೊಂಡ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಬಾಹ್ಯಾಕಾಶ ನೌಕೆಯನ್ನು ಮಾತ್ರಾ ಮಾರ್ಕೊನಿ ಸ್ಪೇಸ್ ಸಂಸ್ಥೆಯ ನೇತೃತ್ವದ ಯುರೋಪಿಯನ್ ಉದ್ಯಮಗಳ ಒಕ್ಕೂಟ ನಿರ್ಮಿಸಿತ್ತು. ಈ ಬಾಹ್ಯಾಕಾಶ ನೌಕೆಯನ್ನು ಲಾಕ್‌ಹೀಡ್ ಮಾರ್ಟಿನ್ ಅಟ್ಲಾಸ್ IIಎಎಸ್ ಉಡಾವಣಾ ವಾಹನ ಬಾಹ್ಯಾಕಾಶಕ್ಕೆ ಸೇರಿಸಿತ್ತು. ಈ ಯೋಜನೆ 1998ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರೀಕ್ಷೆಯಿತ್ತು. ಆದರೆ ಅದು ಇಂದಿಗೂ ಸಕ್ರಿಯವಾಗಿದ್ದು, 2025ರ ತನಕವೂ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ. ಆ ವೇಳೆಗೆ, ಅದು ಬಾಹ್ಯಾಕಾಶದಲ್ಲಿ 30 ವರ್ಷಗಳ ಅವಧಿಯನ್ನು ಪೂರೈಸಿರಲಿದೆ.ಆದರೆ, ಉಪಗ್ರಹದ ಸ್ಥಾನವನ್ನು ಸರಿಪಡಿಸುವ ಗೈರೋಸ್ಕೋಪ್‌ಗಳ ಮಾಪನಾಂಕ ನಿರ್ಣಯದಲ್ಲಿ ಸಮಸ್ಯೆಗಳು ತಲೆದೋರಿ, ಭೂಕೇಂದ್ರದ ಸಿಬ್ಬಂದಿಗಳು ಅದರ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದರು. ಪರಿಸ್ಥಿತಿ ಇನ್ನೂ ಕೈಮೀರುವಂತೆ, ಬಾಹ್ಯಾಕಾಶ ನೌಕೆಯ ಸೌರ ಫಲಕವೂ ಸ್ಥಾನಪಲ್ಲಟಗೊಂಡು, ಶಕ್ತಿ ಪೂರೈಸುವುದು ಸ್ಥಗಿತಗೊಂಡಿತ್ತು. ಆದರೂ, ಕ್ರಮೇಣ ಮೂರು ತಿಂಗಳ ಬಳಿಕ ಅವುಗಳು ಯಶಸ್ವಿಯಾಗಿ ಮರು ಕಾರ್ಯಾಚರಣೆ ಆರಂಭಿಸಿದವು. ಅಷ್ಟರಲ್ಲಾಗಲೇ ಹಲವಾರು ವಿಜ್ಞಾನಿಗಳು ಈ ಯೋಜನೆ ಕೈ ತಪ್ಪಿ ಹೋಗಿದೆ ಎಂದು ಭಾವಿಸಿದ್ದರು.ಇದನ್ನೂ ಓದಿ: Luna-25: ಚಂದ್ರನ ಮೇಲ್ಮೈಗೆ ಅಪ್ಪಳಿಸಿದ್ದೇಕೆ ಲೂನಾ-25? ಚಂದಿರನ ಅಂಗಳದಲ್ಲಿ ಎಡವಿದ್ದೆಲ್ಲಿ ರಷ್ಯಾ?ಸಂರಕ್ಷಕ: ಪ್ರಾಣ ನೀಡಿದ ಬ್ಯಾಟರಿ!ಇಷ್ಟೊಂದು ಸುದೀರ್ಘ ಅವಧಿಯಲ್ಲಿ, ಸೋಹೋದ ಬ್ಯಾಟರಿ ಮಾತ್ರವೇ ಈ ಯೋಜನೆ ಇನ್ನೂ ಕಾರ್ಯಾಚರಿಸುವಂತೆ ಮಾಡಿದೆ. ಭೂಮಿಯ ಪರಿಭ್ರಮಣೆ ನಡೆಸುತ್ತಿರುವ ಬಾಹ್ಯಾಕಾಶ ನೌಕೆಗೆ, ಪ್ರತಿಯೊಂದು ಪರಿಭ್ರಮಣೆಯಲ್ಲೂ ಕೆಲ ಸಮಯ ಸೂರ್ಯನ ಬೆಳಕು ಅಲಭ್ಯವಾಗುತ್ತದೆ. ಆದ್ದರಿಂದ ಬಾಹ್ಯಾಕಾಶ ನೌಕೆ ಈ ಸಮಯದಲ್ಲಿ ಬ್ಯಾಟರಿ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಸೋಹೋದ ಸೋಲಾರ್ ಪ್ಯಾನೆಲ್‌ಗಳು ಸದಾ ಸೂರ್ಯನನ್ನು ವೀಕ್ಷಿಸುವಂತೆ ಪ್ರೋಗ್ರಾಮ್ ಮಾಡಲಾಗಿತ್ತಾದ್ದರಿಂದ, ತುರ್ತು ಸಂದರ್ಭದಲ್ಲಿ ಮಾತ್ರವೇ ಅದರ ಬ್ಯಾಟರಿ ಬಳಕೆಯಾಗುತ್ತಿತ್ತು. ಅದೃಷ್ಟವಶಾತ್, ಬ್ಯಾಟರಿ ಅದರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತ್ತು.ಬಾಹ್ಯಾಕಾಶ ಬ್ಯಾಟರಿ ಸಾಧಾರಣ ಬ್ಯಾಟರಿಯಲ್ಲ. ಬಾಹ್ಯಾಕಾಶಕ್ಕೆ ರಾಕೆಟನ್ನು ಹಾರಿಸುವ ಸಂದರ್ಭದಲ್ಲಿ ಪ್ರತಿಯೊಂದು ಪೌಂಡ್ ಹೆಚ್ಚುವರಿ ತೂಕವೂ ತೊಂದರೆ ನೀಡುವುದರಿಂದ, ಅದು ಸಣ್ಣದೂ, ಕಡಿಮೆ ತೂಕದ್ದೂ ಆಗಿರಬೇಕು. ಅದು ಉಡಾವಣೆಯ ಸಂದರ್ಭದ ಅದುರುವಿಕೆಗಳನ್ನು ಎದುರಿಸಿ, ಬಾಹ್ಯಾಕಾಶದಲ್ಲಿನ ಅಪಾರ ತಾಪಮಾನ ಬದಲಾವಣೆಗಳಲ್ಲೂ ಸಮರ್ಥವಾಗಿ ಕಾರ್ಯಾಚರಣೆ ನಡೆಸುವಂತಿರಬೇಕು. ಬಾಹ್ಯಾಕಾಶ ನೌಕೆ ಸೂರ್ಯನನ್ನು ನೋಡುವ ಬದಿಯಲ್ಲಿ ತಾಪಮಾನ 250 ಡಿಗ್ರಿ ಸೆಲ್ಸಿಯಸ್ ಇದ್ದರೆ, ಇನ್ನೊಂದು ಬದಿಯಲ್ಲಿ ತಾಪಮಾನ -150 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಬ್ಯಾಟರಿಯನ್ನು ಈ ಎರಡೂ ಅಪರಿಮಿತ ತಾಪಮಾನಗಳಿಂದ ಸಂರಕ್ಷಿಸಿಡಲಾಗಿರುತ್ತದಾದರೂ, ಅದು -10 ಡಿಗ್ರಿ ಸೆಲ್ಸಿಯಸ್ ಮತ್ತು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಡುವೆ ಕಾರ್ಯಾಚರಿಸಬೇಕಾಗುತ್ತದೆ. ಬ್ಯಾಟರಿ ಈ ಎಲ್ಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಬ್ಯಾಟರಿ ವಿಫಲವಾದರೆ, ಇಡೀ ಯೋಜನೆಯೇ ಮುಗಿದು ಹೋದ ಅಧ್ಯಾಯವಾಗುತ್ತದೆ!ಸೋಹೋವನ್ನು ಆಧರಿಸಿ, 6,000 ಕ್ಕೂ ಹೆಚ್ಚು ವೈಜ್ಞಾನಿಕ ಪತ್ರಿಕೆಗಳನ್ನು ಪ್ರಕಟಿಸಲಾಗಿದೆ. ಸೋಹೋ ಇಲ್ಲಿಯತನಕ 4,000ಕ್ಕೂ ಹೆಚ್ಚು ಧೂಮಕೇತುಗಳನ್ನು ಪತ್ತೆಹಚ್ಚಿದೆ. ಒಂದು ವೇಳೆ, ಈ ಸಣ್ಣ ಬ್ಯಾಟರಿ ಯಶಸ್ವಿಯಾಗಿ ಕಾರ್ಯಾಚರಿಸದಿದ್ದರೆ, ಈ ಎಲ್ಲ ಕಾರ್ಯಾಚರಣೆಗಳು ಉಡಾವಣೆಗೊಂಡ ಕೇವಲ 18 ತಿಂಗಳ ಅವಧಿಯಲ್ಲಿ ಮುಗಿದುಹೋಗುತ್ತಿದ್ದವು!ಸೋಹೋ ಮತ್ತು ಆದಿತ್ಯ ಎಲ್1 ಯೋಜನೆಗಳ ತಾಪಮಾನ ನಿಯಂತ್ರಣಸೋಹೋ ಸೂರ್ಯನ ತಾಪಮಾನದಿಂದ ಉಂಟಾಗಬಲ್ಲ ಸಮಸ್ಯೆಗಳಿಂದ ಸುರಕ್ಷಿತವಾಗಿ ಇಡಲ್ಪಟ್ಟಿದೆ. ಅದೇ ರೀತಿಯಲ್ಲಿ ಆದಿತ್ಯ ಎಲ್1ನಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾಹ್ಯಾಕಾಶ ನೌಕೆಯನ್ನು ಮಲ್ಟಿ ಲೇಯರ್ ಇನ್ಸುಲೇಶನ್ (ಎಂಎಲ್ಐ) ಎಂದು ಕರೆಯಲಾಗುವ ಉಷ್ಣ ನಿರೋಧಕ ಕವಚದಿಂದ ಆವರಿಸಲಾಗಿದೆ. ಸೋಹೋವನ್ನು ಆವರಿಸಿರುವ ಎಂಎಲ್ಐ ಅಲ್ಯುಮಿನೈಸ್ಡ್ ಮೈಲಾರಿನ ನೂರಾರು ಪದರಗಳಿಂದ ಮಾಡಲ್ಪಟ್ಟಿದ್ದು, ಅದೊಂದು ಪ್ರತಿಫಲಕ ಉತ್ಪನ್ನವಾಗಿದೆ. ಬಾಹ್ಯಾಕಾಶದ ಕಠಿಣ ವಾತಾವರಣದಲ್ಲಿ ಎಂಎಲ್ಐ ನಶಿಸಿ ಹೋಗದಂತೆ ಅದನ್ನು ಸುರಕ್ಷಿತವಾಗಿ ಸುತ್ತಿಡಲಾಗಿದೆ. ತಂಪು ಮಾಡುವ ವ್ಯವಸ್ಥೆಸೋಹೋದಲ್ಲಿನ ತಂಪು ಮಾಡುವ ವ್ಯವಸ್ಥೆ ಬಾಹ್ಯಾಕಾಶ ನೌಕೆಯ ಉಪಕರಣಗಳನ್ನು ಸುರಕ್ಷಿತ ತಾಪಮಾನದಲ್ಲಿಡಲು ದ್ರವ ಹೀಲಿಯಂ ಅನ್ನು ಬಳಸಿಕೊಳ್ಳುತ್ತದೆ. ದ್ರವ ಹೀಲಿಯಂ ಅತ್ಯಂತ ತಣ್ಣನೆಯ ವಸ್ತುವಾಗಿದ್ದು, ಬಹಳಷ್ಟು ಪ್ರಮಾಣದ ಉಷ್ಣವನ್ನು ಹೀರಿಕೊಳ್ಳುತ್ತದೆ. ಸೋಹೋದಲ್ಲಿನ ತಂಪು ಮಾಡುವ ವ್ಯವಸ್ಥೆ ಬಾಹ್ಯಾಕಾಶ ನೌಕೆಯ ಉಪಕರಣಗಳನ್ನು -270 ಡಿಗ್ರಿ ಸೆಲ್ಸಿಯಸ್ ನಷ್ಟು ತಣ್ಣಗಿಡಲು ಬಳಕೆಯಾಗುತ್ತದೆ.ಲ್ಯಾಗ್ರೇಂಜ್ ಪಾಯಿಂಟ್ ಎಲ್-1 ಸುತ್ತಲಿನ ಹ್ಯಾಲೋ ಕಕ್ಷೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಸೂರ್ಯನ ತಾಪಮಾನದಿಂದ ರಕ್ಷಿಸಲಿದೆ. ಅಂದರೆ, ಬಾಹ್ಯಾಕಾಶ ನೌಕೆ ನೇರವಾಗಿ ಸೂರ್ಯನ ತಾಪಮಾನಕ್ಕೆ ತೆರೆದುಕೊಳ್ಳುವುದಿಲ್ಲ. ಅದರೊಡನೆ, ಇದು ಭೂಮಿಯ ಗುರುತ್ವಾಕರ್ಷಣೆಯಿಂದಲೂ ರಕ್ಷಿಸಲ್ಪಡುತ್ತದೆ.-ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Post a Comment

Previous Post Next Post